ಸಾರಾಂಶ
ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿ ಸದಸ್ಯತ್ವ ಪಡೆಯುವುದೇ ಹೆಮ್ಮೆಯ ಸಂಗತಿ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ಹಸೂರೆ ಹೇಳಿದರು
ಬಸವಕಲ್ಯಾಣ: ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿರುವ ಬಿಜೆಪಿ ಸದಸ್ಯತ್ವ ಪಡೆಯುವುದೇ ಹೆಮ್ಮೆಯ ಸಂಗತಿ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ಹಸೂರೆ ಹೇಳಿದರು. ನಗರದಲ್ಲಿ ನಡೆದ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ ಮಾತನಾಡಿ, ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿಯು ಸದಸ್ಯತ್ವ ನೋಂದಣಿ ನಡೆಸಬೇಕು ಎಂದು ಸಲಹೆ ನೀಡಿದರು. ಪಕ್ಷದ ಗ್ರಾಮೀಣ ಮಂಡಲದ ಅಧ್ಯಕ್ಷ ಜ್ಞಾನೇಶ್ವರ ಮುಳೆ, ನಗರ ಮಂಡಲದ ಅಧ್ಯಕ್ಷ ಸಿದ್ದು ಬಿರಾದಾರ, ಗೋವಿಂದರಾವ್ ಬಿರಾದಾರ, ದಯಾನಂದ ಮೇತ್ರೆ, ವೆಂಕಟರಾವ್ ಲಾಡೆ ಮಾತನಾಡಿದರು. ಪ್ರಮುಖರಾದ ದೀಪಕ ಗಾಯಕವಾಡ, ಅಶೋಕ ವಕಾರೆ, ಅರವಿಂದ ಮುತ್ತೆ, ರತಿಕಾಂತ ಕೊಹಿನೂರ, ಸುಧೀರ ಕಾಡಾದಿ, ಪ್ರದೀಪ ಗಡವಂತೆ, ಪ್ರದೀಪ ಬೇಂದ್ರೆ, ಕಮಲಾಕರ ಮೆಕಾಲೆ, ರಾಜೀವ ರಾಜೋಳೆ, ಶಂಕರ ನಾಗದೆ, ಶಿವಪುತ್ರ ಗೌರ, ಈರಣ್ಣ ಹಲಗೆ ಉಪಸ್ಥಿತರಿದ್ದರು.