ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ ಕೇವಲ ಕೆಎಎಸ್, ಐಎಎಸ್ ನಂತಹ ಸರ್ಕಾರಿ ದೊಡ್ಡ ದೊಡ್ಡ ಹುದ್ದೆಗೆ ಸೇರಬೇಕು ಎಂಬುದು ಸಾಧನೆಯಲ್ಲ ಜೊತೆಗೆ ಸಮಾಜ ಮೆಚ್ಚುವಂತಹ ಪ್ರಗತಿಪರ ರೈತರು ಕೂಡ ದೊಡ್ಡ ಸಾಧಕರು ಎಂದು ಹುಬ್ಬಳ್ಳಿ- ಧಾರವಾಡ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಶಂಕರ ಬೆಳ್ಳುಬ್ಬಿ ಹೇಳಿದರು.
ಕನ್ನಡಪ್ರಭ ವಾರ್ತೆ ಕೊಲ್ಹಾರ
ಕೇವಲ ಕೆಎಎಸ್, ಐಎಎಸ್ ನಂತಹ ಸರ್ಕಾರಿ ದೊಡ್ಡ ದೊಡ್ಡ ಹುದ್ದೆಗೆ ಸೇರಬೇಕು ಎಂಬುದು ಸಾಧನೆಯಲ್ಲ ಜೊತೆಗೆ ಸಮಾಜ ಮೆಚ್ಚುವಂತಹ ಪ್ರಗತಿಪರ ರೈತರು ಕೂಡ ದೊಡ್ಡ ಸಾಧಕರು ಎಂದು ಹುಬ್ಬಳ್ಳಿ- ಧಾರವಾಡ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಶಂಕರ ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಎಸ್.ಕೆ.ಬೆಳ್ಳುಬ್ಬಿ ಪಿ.ಯು ಕಾಲೇಜು ಮತ್ತು ಯಲ್ಲಮ್ಮದೇವಿ ಸಿಬಿಎಸ್ಸಿ ಶಾಲೆಯ ವಾರ್ಷಿಕೋತ್ಸವ ಮತ್ತು ವೈಸಿಎಸ್ ಉತ್ಸವದಲ್ಲಿ ಅವರು ಮಾತನಾಡಿದರು. ನಾವು ಮಕ್ಕಳನ್ನು ದೊಡ್ಡ ಸರ್ಕಾರಿ ಹುದ್ದೆಗೆ ಸೇರಿಸಬೇಕು ಎಂದು ಅಂದುಕೊಳ್ಳುತ್ತೇವೆ. ಅದಕ್ಕಿಂತಲೂ ಮಿಗಿಲಾಗಿ ಹೆತ್ತ ತಂದೆ ತಾಯಿಗಳ ಸೇವೆ ಮಾಡಿ ಕಣ್ಣಿನಲ್ಲಿ ಪನ್ನೀರು ಬರಿಸುವಂತಹ ಮಕ್ಕಳು ನಿಜವಾದ ದೊಡ್ಡ ಸಾಧಕರು. ಯಾರು ಶ್ರವಣಕುಮಾರ ಹಾದಿಯಲ್ಲಿ ತಂದೆ ತಾಯಿಯರ ಸೇವೆ ಮಾಡುತ್ತಾರೆ ಅವರು ನಿಜವಾದ ಸಾಧಕ. ಸಿಮೆಂಟ್‌ನಿಂದ ಕಟ್ಟಿದ ಮನೆಯಲ್ಲಿ ಮಕ್ಕಳನ್ನು ಬೆಳಸಬೇಡಿ ಬದಲಾಗಿ ಭಾವನೆ ಮತ್ತು ಸಂಬಂಧಗಳಿಂದ ಕೂಡಿದಂತ ಮನೆಯಲ್ಲಿ ಮಕ್ಕಳನ್ನು ಬೆಳೆಯಲು ಬಿಡಿ ಎಂದು ಕಿವಿಮಾತು ಹೇಳಿದರು.ಪ್ರಾಸ್ತಾವಿಕವಾಗಿ ಶಾಲಾ ಆಡಳಿತ ಅಧಿಕಾರಿ ಬಿ.ಎಸ್.ನಿಂಬಾಳ್ಕರ್ ಮಾತನಾಡಿದರು. ಸಾನಿಧ್ಯ ತಳಿಹಾಳ ಕೋಡಿಮಠ ಗಜೇಂದ್ರಗಡದ ಡಾ.ಶರಣಬಸವ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನುಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ವಹಿಸಿದ್ದರು. ಅತಿಥಿಗಳಾಗಿ ಎಸ್.ಎನ್.ಗಿಡ್ಡಪ್ಪಗೋಳ, ಸಂಗಪ್ಪ ಹುಚ್ಚಪ್ಪಗೋಳ, ಸಿದ್ದಪ್ಪ ಬಾಲಗೊಂಡ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಪ್ಪ ಸೊನ್ನದ, ವಿರುಪಾಕ್ಷಿ ಕೋಲಕಾರ್, ಕಲ್ಲು ಸೊನ್ನದ, ಪಡಿಯಪ್ಪ ನಾಗರಾಳ, ಗುರು ಚಲವಾದಿ, ಉಮರ ರಾಟಿ, ಹಾಗೂ ಭುವನೇಶ್ವರಿ ಮುರಗುರು ಇದ್ದರು.