ಸಾರಾಂಶ
ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ಬೈತಾರಿಯಲ್ಲಿನ ನ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಮೂಡುಬಿದಿರೆಯ ಹಂಡೇಲು ನಿವಾಸಿಗಳಾದ ಮೊಹಮ್ಮದ್ ಆರೀಫ್ (24) ಹಾಗೂ ಮೊಹಮ್ಮದ್ ಸುಲ್ತಾನ್ (19) ಎಂಬವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ಬೈತಾರಿಯಲ್ಲಿನ ನ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಮೂಡುಬಿದಿರೆಯ ಹಂಡೇಲು ನಿವಾಸಿಗಳಾದ ಮೊಹಮ್ಮದ್ ಆರೀಫ್ (24) ಹಾಗೂ ಮೊಹಮ್ಮದ್ ಸುಲ್ತಾನ್ (19) ಎಂಬವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಬಜಪೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರೇವಣಸಿದ್ದಪ್ಪ ಸಿಬ್ಬಂದಿಯೊಂದಿಗೆ ಎಡಪದವು ಗ್ರಾಮದ ಬೈತಾರಿ ಎಂಬಲ್ಲಿ ಗೋಪಾಲಕೃಷ್ಣ ಭಜನಾ ಮಂದಿರದ ಬಳಿ ತಪಾಸಣೆ ವೇಳೆ ವಾಹನದಲ್ಲಿ ಸುಮಾರು 2 ಲಕ್ಷ ರು. ಮೌಲ್ಯದ ಒಟ್ಟು 750 ಕೆ.ಜಿ ತೂಕದ ದನದ ಮಾಂಸವನ್ನು ತುಂಬಿಸಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ತಿಳಿದುಬಂದಿದೆ.
ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಚಾರಣೆ ಸಮಯ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿತರ ಜೊತೆ ಸೇರಿ ಕಾರ್ಕಳ, ಹೆಬ್ರಿ ಕಡೆಗಳಿಂದ ದನಗಳನ್ನು ತಂದು ಮೂಡುಬಿದಿರೆ ತಾಲೂಕು ಪುತ್ತಿಗೆ ಗ್ರಾಮದ ಮುಂಡೇಲು ಎಂಬಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಡಿದು ಮಾಂಸ ಮಾಡಿರುವುದು ದೃಢಪಟ್ಟಿದೆ.ಗೀಸರ್ ರಾಸಾಯನಿಕದಿಂದ ಉಸಿರು ಗಟ್ಟಿ ಯುವಕ ಸಾವು:
ಸ್ನಾನದ ಕೋಣೆಯ ಗ್ಯಾಸ್ ಗೀಸರ್‌ನ ರಾಸಾಯನಿಕ ಹೊರಚೆಲ್ಲಿ ಯುವಕ ಉಸಿರುಗಟ್ಟಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಮೂಡುಬಿದಿರೆಯ ಕೋಟೆಬಾಗಿಲಿನ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ.ಕೋಟೆಬಾಗಿಲಿನ ದಿ. ಅನ್ಸಾರ್ ಅವರ ಪುತ್ರ ಶಾರಿಕ್ (18) ಮೃತಪಟ್ಟ ಯುವಕ.ಸ್ನಾನಕ್ಕೆಂದು ತೆರಳಿದಾತ ಬಹಳ ಹೊತ್ತಾದರೂ ಹೊರಬರದಿರುವುದನ್ನು ಗಮನಿಸಿದ ಆತನ ಸಹೋದರ ಹೋಗಿ ಪರಿಶೀಲಿಸಿದಾಗ ಶಾರಿಕ್ ಸಾವನ್ನಪ್ಪಿದ್ದು ತಿಳಿದು ಬಂತು.
ಶಾರಿಕ್ ಯಾವಾಗಲೂ ಸ್ನಾನದ ಕೋಣೆಯಲ್ಲಿ ಬಹಳ ಹೊತ್ತು ಕಳೆಯುವುದು ಸಾಮಾನ್ಯವಾಗಿದ್ದ ಕಾರಣ ಘಟನೆಯ ಬಗ್ಗೆ ಮನೆಯವರಿಗೆ ಮೊದಲು ಅರಿವಾಗಲಿಲ್ಲ ಎನ್ನಲಾಗಿದೆ. ಸ್ನಾನದ ಕೋಣೆ ಬಂದ್ ಆಗಿದ್ದು, ಗಾಳಿಯಾಡದ ಸ್ಥಿತಿ ಇದ್ದ ಕಾರಣ ಗೀಸರ್‌ನ ರಾಸಾಯನಿಕ ಹರಡಿದಾಗ ಶಾರಿಕ್‌ಗೆ ಹೊರಬರಲಾಗಲಿಲ್ಲ.