ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ; ಸಾಮೂಹಿಕ ವಿವಾಹ

| Published : Mar 09 2024, 01:30 AM IST

ಸಾರಾಂಶ

ಸಮುದಾಯದಿಂದ ದೇವಸ್ಥಾನಗಳಲ್ಲಿ ಪ್ರತಿವರ್ಷ ಪುರಾಣ ಹಾಗೂ ಸಾಮೂಹಿಕ ವಿವಾಹ ಮಾಡುವವರಿಂದ ಸಮಾಜ ಏಳಿಗೆಯಾಗುತ್ತದೆ.

ಹನುಮಸಾಗರ: ಸಮುದಾಯದಿಂದ ದೇವಸ್ಥಾನಗಳಲ್ಲಿ ಪ್ರತಿವರ್ಷ ಪುರಾಣ ಹಾಗೂ ಸಾಮೂಹಿಕ ವಿವಾಹ ಮಾಡುವವರಿಂದ ಸಮಾಜ ಏಳಿಗೆಯಾಗುತ್ತದೆ ಎಂದು ಆರ್‌ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಶ್ವನಾಥ ಕನ್ನೂರ ಹೇಳಿದರು.ಗ್ರಾಮದ 6ನೇ ವರ್ಷದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪುರಾಣ ಪ್ರವಚನ, ಮಹಾಮಂಗಳೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯುವ ಜೋಡಿಗಳು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ತಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮೂಹಿಕ ಮದುವೆಯಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದು ಬಡವರ ಪಾಲಿಗೆ ವರದಾನವಾಗಿದೆ. ನಿಸ್ವಾರ್ಥದಿಂದ ಇಂಥ ಸಾಮಾಜಿಕ ಕಾರ್ಯಗಳನ್ನು ನೆರವೇರಿಸುತ್ತಿರುವುದು ಶ್ಲಾಘನೀಯ ಎಂದರು.ಹಾಲುಮತ ಸಮಾಜದ ಅಧ್ಯಕ್ಷ ಬರಮಪ್ಪ ಬಿಂಗಿ, ಪ್ರಮುಖರಾದ ಡಾ.ಶರಣು ಹವಾಲ್ದಾರ, ಮಹಾಂತೇಶ ಅಗಸಿಮುಂದಿನ, ಆಸಿಫ್‌ ಡಾಲಾಯತ್, ಸೂಚಪ್ಪ ಭೋವಿ, ಸಂಗಯ್ಯ ವಸ್ತ್ರದ, ಪ್ರಶಾಂತ ಗಡಾದ, ವಿಜಯಮಹಾಂತೇಶ ಕುಷ್ಟಗಿ, ಸಂಕ್ರಪ್ಪ ಬಿಂಗಿ, ಮಂಜಳಾ ಹಕ್ಕಿ, ಭರಮಪ್ಪ ಕಂಡೇಕಾರ, ನಾಗರಾಜ ಸೇಬಿನಕಟ್ಟಿ, ಸಂಗಮೇಶ ಕರಂಡಿ, ಸಂಗಮೇಶ, ಬಸವರಾಜ ದ್ಯಾವಣ್ಣನವರ, ಪ್ರಮೀಣ ಸಿಂಹಾಸನ, ನಾಗರಾಜ ಕಂದಗಲ್ಲ, ವಿರೇಶ ಕಟಗಿ, ದಾನನಗೌಡ ಮಾಲಿಪಾಟೀಲ್, ದ್ಯಾಮಣ್ಣ ಬಿಂಗಿ, ಡಾ.ಬಸವರಾಜ, ಶರಣಪ್ಪ ಹಕ್ಕಿ, ಬಸವರಾಜ ಮುದಗಲ್ಲ, ಚಂದಪ್ಪ ಹಕ್ಕಿ, ಹನುಮಂತ ಬಿಂಗಿ, ಹುಲ್ಲಪ್ಪ ಮೇಟಿ ಇದ್ದರು.ಇದೇ ವೇಳೆ 5 ಜೋಡಿಗಳ ಸಾಮೂಹಿಕ ಮದುವೆಗಳು ನೆರವೇರಿದವು.