ಸಾರಾಂಶ
ದೇವನಹಳ್ಳಿ: ಪೋಷಕರು ಮಕ್ಕಳನ್ನು ಶಾಲೆಗಳಿಗೆ ಸೇರಿಸುವ ಮುನ್ನ ಒಮ್ಮೆ ಕಣ್ಣು ಪರೀಕ್ಷೆ ಮಾಡಿಸಬೇಕು ಎಂದು ಡಾ. ಪಿ.ಎನ್.ದಿನೇಶ್ ತಿಳಿಸಿದರು.
ದೇವನಹಳ್ಳಿ: ಪೋಷಕರು ಮಕ್ಕಳನ್ನು ಶಾಲೆಗಳಿಗೆ ಸೇರಿಸುವ ಮುನ್ನ ಒಮ್ಮೆ ಕಣ್ಣು ಪರೀಕ್ಷೆ ಮಾಡಿಸಬೇಕು ಎಂದು ಡಾ. ಪಿ.ಎನ್.ದಿನೇಶ್ ತಿಳಿಸಿದರು.
ಪಟ್ಟಣದ ಜ್ಞಾನದೀಪ ಅಕಾಡೆಮಿ ವಸತಿ ಶಾಲೆಯಲ್ಲಿ 25 ವರ್ಷದ "ನಮ್ಮನೆ ವಾರ್ಷಿಕೋತ್ಸವ " ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಕಣ್ಣಿನ ಆರೋಗ್ಯ ಕಾಪಾಡಲು ಪೌಷ್ಟಿಕ ಆಹಾರ ನೀಡಬೇಕು. ಕಣ್ಣಿನ ತೊಂದರೆ ಇರಲಿ ಅಥವಾ ಇಲ್ಲದಿರಲಿ ಪ್ರತಿವರ್ಷ ಕಣ್ಣಿನ ಪರೀಕ್ಷೆ ಮಾಡಿಸಬೇಕು. ಮಕ್ಕಳ ಚಲನವಲನ ಪರೀಕ್ಷಿಸುತ್ತಿರಬೇಕು. ಮಕ್ಕಳಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರದಂತೆ ಕಾಪಾಡುವುದು ಮುಖ್ಯ. ಅಲ್ಲದೆ ಮಾಲ್ಗಣ್ಣು ಬಗ್ಗೆ ಅದೃಷ್ಠ ಎಂದು ಮೌಢ್ಯದಿಂದ ನಿರ್ಲಕ್ಷ ಮಾಡದೆ ಮೊದಲು ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸಬೇಕು ಎಂದರು.ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೃಷ್ಣಪ್ಪಗೌಡ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ತಿಳಿಸಿಕೊಡಬೇಕು ಎಂದರು.
ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಬೀನಾನಾಗರಾಜು, ಬಿದಲೂರು ಗ್ರಾಪಂ ಅಧ್ಯಕ್ಷ ನಾಗರಾಜು, ಧ್ಯಾನ ತರಬೇತುದಾರ ದಂಪತಿ ನೆದರ್‌ಲ್ಯಾಂಡಿನ ಬೆರ್ನಾಡ್ ಮಾರ್ಕಸ್ ಮತ್ತು ರೆಬೆಕ ಬುಶ್, ಮುಖ್ಯಶಿಕ್ಷಕ ನವೀನ್‌ಕುಮಾರ್ ಇತರರಿದ್ದರು.(ಫೋಟೊ ಕ್ಯಾಪ್ಷನ್)
ದೇವನಹಳ್ಳಿಯ ಜ್ಞಾನದೀಪ ಶಾಲೆಯ 25ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ, ಡಾ. ದಿನೇಶ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜು, ಸಂಸ್ಥಾಪಕರಾ ಬೀನಾನಾಗರಾಜು, ಬಿದಲೂರು ಗ್ರಾಪಂ ಅಧ್ಯಕ್ಷ ನಾಗರಾಜು, ಬೆರ್ನಾಡ್ ಮಾರ್ಕಸ್ ಮತ್ತು ರೆಬೆಕ ಬುಶ್ ಚಾಲನೆ ನೀಡಿದರು.