ಸಾರಾಂಶ
ಕೊಲೆ ನಡೆದರೆ ಕಣ್ಮುಂದೆ ಕಾಣುತ್ತೇ? ಆದರೆ ಮಾನವ ಕಳ್ಳ ಸಾಗಾಣಿಕೆ ಪಕ್ಕದಲ್ಲೇ ನಡೆದರೂ ಗೊತ್ತಾಗಲ್ಲ. ಈ ಬಗ್ಗೆ ಸಮಾಜ ಎಚ್ಚರವಹಿಸಬೇಕಿದೆ ಎಂದು ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.
ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಕೊಲೆ ನಡೆದರೆ ಕಣ್ಮುಂದೆ ಕಾಣುತ್ತೇ? ಆದರೆ ಮಾನವ ಕಳ್ಳ ಸಾಗಾಣಿಕೆ ಪಕ್ಕದಲ್ಲೇ ನಡೆದರೂ ಗೊತ್ತಾಗಲ್ಲ. ಈ ಬಗ್ಗೆ ಸಮಾಜ ಎಚ್ಚರವಹಿಸಬೇಕಿದೆ ಎಂದು ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾನೂನುಗಳು, ಗರ್ಭೀಣಿ, ಬಾಣಂತಿ, ಮಕ್ಕಳ ಆರೋಗ್ಯದ ಕುರಿತು ಜಾಗೃತಿ ಜಾಥಾ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡತನ, ನಿರುದ್ಯೋಗ, ಬುಡಕಟ್ಟು ಪ್ರದೇಶಗಳಲ್ಲಿ ಮಾನವ ಕಳ್ಳ ಸಾಗಾಣಿಕೆಗೆ ಬಳಕೆ ಮಾಡಿಕೊಳ್ಳುತ್ತಾರೆ. ಅಪರಿಚಿತರು ಬಂದು ಗಾರ್ಮೆಂಟ್ ನಲ್ಲಿ ಕೆಲಸ ಕೊಡಿಸುತ್ತೇವೆ ಒಳ್ಳೇ ಸಂಬಳ ಕೊಡುತ್ತೇವೆ ಎಂದು ಹೇಳಿ ಮಕ್ಕಳನ್ನು ಕರೆದುಕೊಂಡು ಹೋಗ್ತಾರೆ. ಇದರ ಬಗ್ಗೆ ಜನರು ಜಾಗೃತರಾಗಬೇಕು ಎಂದರು.ಮಕ್ಕಳ ಕಳ್ಳ ಸಾಗಾಣಿಕೆ ಮೂಲಕ ಭಿಕ್ಷಾಟನೆ ಮಾಡುವ ಜಾಲವೇ ಇದೆ. ಮಹಿಳೆಯರ ಕಂಕಳಲ್ಲಿರುವ ಮಕ್ಕಳಿಗೆ ಮತ್ತು ಭರಿಸುವ ಮಾತ್ರೆ ನೀಡುವ ಮೂಲಕ ಭಿಕ್ಷಾಟನೆ ಮಾಡುತ್ತಿದ್ದಾರೆ. ಭಿಕ್ಷಾಟನೆಯನ್ನು ಸಾರ್ವಜನಿಕರ ಬೆಂಬಲಿಸಬಾರದು ಎಂದರು.
ನ್ಯಾಯಾಧೀಶ ದೀಪು ಎಂ.ಟಿ ಮಾತನಾಡಿ, ಬಡವರು ವಕೀಲರ ನೇಮಿಸಿಕೊಳ್ಳಲು ಆಗದವರಿಗೆ ಕಾನೂನು ಸೇವೆ ಸಮಿತಿಯಿದೆ ಇದನ್ನು ಬಳಕೆ ಮಾಡಿಕೊಳ್ಳಿ ಎಂದರು.ಬಡವರು ಹಕ್ಕು ಮೊಟಕಾಗಬಾರದು ಎಂದು ಕಾನೂನು ಸೇವೆಗಳ ಸಮಿತಿ ತಾಲೂಕು, ಜಿಲ್ಲಾ, ರಾಜ್ಯ,ರಾಷ್ಟ್ರೀಯ ಮಟ್ಟದಲ್ಲಿವೆ. ಇದರ ಬಗ್ಗೆ ಮಾಹಿತಿ ಪಡೆದು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದರು.
ಜಾಗೃತಿ ಜಾಥಾಗೆ ತಹಸೀಲ್ದಾರ್ ಎಂ.ಎಸ್.ತನ್ಮಯ್ ಚಾಲನೆ ಬಳಿಕ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಗಿರೀಶ್ ಆರ್.ಬಿ,ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಟಕೇಶ್ ಕೆ,ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಷಣ್ಮುಗಂ ಎಚ್.ಎ,ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ,ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಮಾವತಿ ಎಂ,ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್,ತಾಲೂಕು ಆರೋಗ್ಯಾಧಿಕಾರಿ ಡಾ.ಅಲಿಂಪಾಷ,ಕಾರ್ಮಿಕ ನಿರೀಕ್ಷಕ ನಾರಾಯಣಸ್ವಾಮಿ, ಕೆಎಸ್‌ಸಿಎಫ್ ಜಿಲ್ಲಾ ಸಂಯೋಜಕ ಜಿ.ಸಿ.ನಾರಾಯಣಸ್ವಾಮಿ,ಬಾಲ ನ್ಯಾಯ ಮಂಡಳಿ ಸದಸ್ಯ ಸರಸ್ವತಿ ಎಂ.ಎನ್,ಸಮಾಜ ಕಲ್ಯಾಣ ಇಲಾಖೆಯ ಸಹಾಐಕ ನಿರ್ದೇಶಕ ಮೋಹನ್ ಕುಮಾರ್,ವಕೀಲರ ಸಂಘದ ಕಾರ್ಯದರ್ಶಿ ಎಂ.ಬೀರೇಗೌಡ,ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಾಹೇಬಗೌಡ ಆರ್.ಬಿ,ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ದ್ರಾಕ್ಷಾಯಣಮ್ಮ,ಆರ್‌ಎಲ್ ಎಚ್‌ಪಿ ನಿರ್ದೇಶಕಿ ಸರಸ್ವತಿ ಸೇರಿದಂತೆ ಹಲವರಿದ್ದರು.