ಪ್ರತಿ ಸಾಧನೆ ಹಿಂದೆ ಶಿಕ್ಷಕರ ಪರಿಶ್ರಮ ಇರುತ್ತದೆ: ಅಚ್ಯುತ್

| Published : Sep 09 2024, 01:35 AM IST

ಸಾರಾಂಶ

ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಪರಿಶ್ರಮ ಇರುತ್ತದೆ. ಟೀಂ ಮೈಸೂರು ಹಾಗೂ ಲಯನ್ಸ್ ಕ್ಲಬ್ ಎರಡೂ ತಂಡಗಳು ಸಮಾನ ಮನಸ್ಥಿತಿಯನ್ನು ಹೊಂದಿದ್ದು, ಸಮಾಜಕ್ಕೆ ತನ್ನ ಕೈಲಾದ ಸೇವೆ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಟೀಂ ಮೈಸೂರು ಮತ್ತು ಲಯನ್ಸ್ ಕ್ಲಬ್ ಇಂದಿರಾನಗರ ಸದಸ್ಯರು ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ಗೌರವ ಸಮಪರ್ಪಿಸಿದರು.

ಲಯನ್ಸ್ ಕ್ಲಬ್ ಇಂದಿರಾನಗರದ ಟಾರ್ಗೇಟ್ ಸದಸ್ಯ ಅಚ್ಯುತ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಪರಿಶ್ರಮ ಇರುತ್ತದೆ ಎಂದು ಹೇಳಿದರು.

ಟೀಂ ಮೈಸೂರು ಹಾಗೂ ಲಯನ್ಸ್ ಕ್ಲಬ್ ಎರಡೂ ತಂಡಗಳು ಸಮಾನ ಮನಸ್ಥಿತಿಯನ್ನು ಹೊಂದಿದ್ದು, ಸಮಾಜಕ್ಕೆ ತನ್ನ ಕೈಲಾದ ಸೇವೆ ಮಾಡುತ್ತಿದೆ ಎಂದು ಎಂದರು.

ಮುಖ್ಯ ಅತಿಥಿಯಾಗಿದ್ದ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ನಾಗರಾಜ್, ಟೀಂ ಮೈಸೂರು ತಂಡದ ಸಾಧನೆ ಶ್ಲಾಘಿಸಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಈ ಕಾರ್ಯಕ್ರಮ ನಿಜಕ್ಕೂ ಅಭಿನಂದನಾರ್ಹ. ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು, ಶಿಕ್ಷಕರ ಅಸ್ತಿ ಎಂದರೆ ವಿದ್ಯಾರ್ಥಿಗಳ ಯಶಸ್ಸು ಎಂದರು.

ಪ್ರಪಂಚದಲ್ಲಿ ಹಾಗೂ ಭಾರತದ ಬೇರೆ ಬೇರೆ ಪ್ರದೇಶದಲ್ಲಿ ಉನ್ನತ ಸ್ಥಾನ ಮತ್ತು ಯಶಸ್ವಿ ಉದ್ಯಮಿ ಆಗಿದ್ದರೆ ಆದೇ ಅವರ ಅಸ್ತಿ, ಶಿಕ್ಷಕರ ಋಣ ತೀರಿಸುವುದು ಕಷ್ಟ ಎಂದು ಅವರು ತಿಳಿಸಿದರು.

ವಿವಿಧ ವಿಷಯಗಳ ಸುಮಾರು 21 ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು. ಟೀಂ ಮೈಸೂರು ತಂಡದ ಸದಸ್ಯರಾದ ಯಶವಂತ್, ಕಿರಣ್ ಜೈ ರಾಮೇಗೌಡ, ಗೋಕುಲ್ ಗೋವರ್ಧನ್, ಪ್ರಸನ್ನ ರಾಜ್, ಹೇಮಂತ್, ಹಿರಿಯಣ್ಣ, ರಾಮ್ ಪ್ರಸಾದ್, ಮನೋಹರ್, ಸುನಿಲ್, ಮಂಜುನಾಥ್, ಜಯಂತ್, ಕೆ.ವಿ. ಬಸವರಾಜು, ಶೇಖರ್ ಬ್ಯಾಟರಿ, ಗೋವಿತ್ ಕಿರಣ್, ಮಲ್ಲೇಶ್, ಅಭಿನಂದನ್, ಬಾಲು, ಮಹಿಳಾ ಸದಸ್ಯರಾದ ಸುಗುಣಾ ಚಂದ್ರಶೇಖರ್ ಹಾಗೂ ಲಯನ್ಸ್ ಕ್ಲಬ್ ನ ರಾಜರತ್ನಮ್, ವೆಂಕಟೇಶ್, ಅಭಿಷೇಕ್ ಇದ್ದರು.ರೋಟರಿ ಐವರಿಯಿಂದ ಮಾರ್ಗದರ್ಶಕ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮೈಸೂರುನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮೀಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷ ಪ್ರೊ.ಕೆ.ಬಿ. ಪ್ರಭು ಪ್ರಸಾದ್ ಅವರ ಸಾಧನೆಯನ್ನು ಪರಿಗಣಿಸಿ ಅವರಿಗೆ ಪ್ರತಿಷ್ಠಿತ ಮಾರ್ಗದರ್ಶಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ಕಾಮಾಕ್ಷಿ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ತಜ್ಞ ಡಾ. ಪ್ರಕಾಶ್ ಕೆ.ಪ್ರಭು ಅವರಿಗೆ ರೋಟರಿ ಐವರಿ ಸಿಟಿಯ ಗೌರವ ಸದಸ್ಯತ್ವ ನೀಡಿ, ಅಭಿನಂದಿಸಲಾಯಿತು.ರೋಟರಿ ಐವರಿ ಸಿಟಿ ಅಧ್ಯಕ್ಷ ಕೆ. ಶಶಿಧರ್, ಮಾಜಿ ಅಧ್ಯಕ್ಷ ಸಂಜಯ್ ಅರಸ್, ಸುನಿಲ್ ಬಾಳಿಗ, ಕಾರ್ಯದರ್ಶಿ ಶೋಭಾ ನಾಗರಾಜ್, ಎಂ.ಕೆ. ಸಚ್ಚಿದಾನಂದನ್, ಎಂ.ಕೆ. ಮುಖೇಶ್, ಇಫ್ತಿಕರ್ ಅಹಮದ್, ಕೇಶವ್ ಬಿ. ಕಾಂಚನ್ ಮೊದಲಾದವರು ಇದ್ದರು.