ಸಹಕಾರ ಸಂಘದ ಬೆಳವಣಿಗೆ ಹಿಂದೆ ಶ್ರಮವಿದೆ : ಸಿ.ಟಿ.ರವಿ

| Published : Sep 17 2024, 12:54 AM IST

ಸಹಕಾರ ಸಂಘದ ಬೆಳವಣಿಗೆ ಹಿಂದೆ ಶ್ರಮವಿದೆ : ಸಿ.ಟಿ.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸಹಕಾರ ಸಂಘವನ್ನು ಸ್ಥಾಪಿಸುವುದು ಸುಲಭ.ಆದರೆ ಬೆಳವಣಿಗೆಯತ್ತ ಕೊಂಡೊಯ್ಯಲು ಬಹಳಷ್ಟು ಶ್ರಮಿಸಬೇಕಿದೆ. ಆ ಸಾಲಿನಲ್ಲಿ ಟೌನ್ ಕೋ ಆಪರೇಟಿವ್ ಸೊಸೈಟಿ ಶತಮಾನೋತ್ಸವ ಪೂರೈಸಿ ಪ್ರಗತಿಯತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ಸಭೆ, ಸಂಘದ ನೂತನ ಕಟ್ಟಡ ಉದ್ಘಾಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಹಕಾರ ಸಂಘವನ್ನು ಸ್ಥಾಪಿಸುವುದು ಸುಲಭ.ಆದರೆ ಬೆಳವಣಿಗೆಯತ್ತ ಕೊಂಡೊಯ್ಯಲು ಬಹಳಷ್ಟು ಶ್ರಮಿಸಬೇಕಿದೆ. ಆ ಸಾಲಿನಲ್ಲಿ ಟೌನ್ ಕೋ ಆಪರೇಟಿವ್ ಸೊಸೈಟಿ ಶತಮಾನೋತ್ಸವ ಪೂರೈಸಿ ಪ್ರಗತಿಯತ್ತ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆ ಹಾಗೂ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರಿ ತತ್ತ್ವ ಪ್ರಕೃತಿಯಲ್ಲಿ ಅಡಗಿದೆ. ನೀರು ಆವಿಯಾಗಿ, ಮೋಡದ ಮೂಲಕ ಮಳೆಯಾಗಲಿದೆ. ಆ ಮಳೆ ನೀರನ್ನು ಉಪಯೋಗಿಸಿ ಹಸಿರು ಚಿಗುರೊಡೆಯಲಿದೆ. ಅದರಂತೆ ಪಂಚಭೂತಗಳು ಕೂಡಾ ಒಂದೊಕ್ಕೊಂದು ಸಹಕಾರಿ ತತ್ತ್ವದಲ್ಲಿ ಪೂರಕವಾಗಿ ಕೆಲಸ ನಿರ್ವಹಿಸಲಿದೆ. ಸಹಕಾರ ಎಂಬುದು ದೈವ ನಿಯಮ ಎಂದರು.ಮನುಷ್ಯ ಧರಿಸುವ ಬಟ್ಟೆ, ಸೇವಿಸುವ ಆಹಾರ ಮೂಲತಃ ಎಲ್ಲಿಂದ ಬಂತು ತಿಳಿದಿಲ್ಲ. ಅದೇ ಎಲ್ಲವೂ ಕೂಡಾ ಒಬ್ಬರಿಗೊಬ್ಬರು ಪೂರಕ ಎಂಬುದು ತೋರಲಿದೆ. ಸಹಕಾರಿ ಚಳುವಳಿ ಪರಸ್ಪರ ಒಟ್ಟಾಗಿದ್ದರೆ ಪ್ರಗತಿಗೆ ಪೂರಕ. ಸಹಕಾರದಿಂದ ಪರಸ್ಪರ ಒಟ್ಟುಗೂಡಿಸಿದರೆ ಅಸಾಧ್ಯವಾದನ್ನು ಸಾಧ್ಯವಾಗಿಸಲು ಪ್ರೇರಣೆ ನೀಡಲಿದೆ ಎಂದು ಹೇಳಿದರು.ಹಗರಣವೇ ಸದ್ದು ಮಾಡುತ್ತಿರುವ ಕಾಲದಲ್ಲಿ 115 ವರ್ಷಗಳಿಂದ ಹಗರಣಕ್ಕೆ ಆಸ್ಪದವಿಲ್ಲದೇ ಒಂದು ಸಹಕಾರ ಸಂಘ ಬೆಳೆದಿರುವುದು ಸಾಮಾನ್ಯದ ಸಂಗತಿಯಲ್ಲ. ಇದೀಗ ನೂತನ ಕಟ್ಟಡ ಸ್ಥಾಪಿಸುವ ಮೂಲಕ ವರ್ಷಕ್ಕೆ ಸುಮಾರು 30 ಲಕ್ಷ ಆದಾಯ ಗಳಿಸಲು ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಪ್ರಾಮಾಣಿಕತೆ ಕರ್ತವ್ಯ ನಿರ್ವಹಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.ಸೊಸೈಟಿ ನಿರ್ದೇಶಕ ಬಿ.ಎಸ್.ಪ್ರಶಾಂತ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸೊಸೈಟಿ ಹಿರಿಯರ ಸಹಕಾರದಿಂದ ಬೃಹತ್ ಮಟ್ಟದ ಕಟ್ಟಡವನ್ನು ಪೂರ್ಣಗೊಳಿಸಿ ಸಂಘವನ್ನು ಬೆಳವಣಿಗೆಯತ್ತ ಕೊಂಡೊಯ್ಯಲು ಆಡಳಿತ ಮಂಡಳಿ ನಿರತರಾಗಿರುವುದು ಖುಷಿ ತಂದಿದೆ. ಅದರಂತೆ ಮುಂಬರುವ ದಿನಗಳಲ್ಲಿ ಸದಸ್ಯರು, ಷೇರುದಾರರಿಗೆ ಆರ್ಥಿಕ ಸವಲತ್ತು ಒದಗಿಸಲಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎನ್.ರಾಜಣ್ಣಶೆಟ್ಟಿ, ಈಗಾಗಲೇ ಸಂಘದ 9 ಮಳಿಗೆಗಳಿಂದ ಪ್ರತಿ ತಿಂಗಳು 1.93 ಲಕ್ಷ ಬಾಡಿಗೆ ಹಾಗೂ ಇದೀಗ 1.64 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ 4 ಮಳಿಗೆಯಿಂದ 80 ಸಾವಿರ ಬಾಡಿಗೆ, ಹೀಗೆ ಎರಡು ಕಟ್ಟಡದಿಂದ ಒಟ್ಟಾರೆ 2.73 ಲಕ್ಷ ರು. ಬಾಡಿಗೆ ಬರುತ್ತಿದ್ದು ಮುಂದೆ ಸಂಘದ ಸದಸ್ಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎಂ.ಮಲ್ಲೇಶ್, ನಿರ್ದೇಶಕರಾದ ಸಿ.ವಿ.ಕುಮಾರ್, ಎಂ.ಶ್ರೀನಿವಾಸ್, ಸಿ.ಆರ್. ಕೇಶವಮೂರ್ತಿ, ಸಿ.ಆರ್. ಗಂಗಾಧರ್, ವರಸಿದ್ದಿ ವೇಣುಗೋಪಾಲ್, ಅಂಬಿಕಾ, ಜಯಂತಿ, ಕಾರ್ಯದರ್ಶಿ ಗಾಯತ್ರಿ, ಮುಖಂಡರಾದ ಪ್ರೇಮ್‌ಕುಮಾರ್, ನಾರಾಯಣ್, ವಿರೂಪಾಕ್ಷ, ಷಣ್ಮುಗ, ಶಶಿಪ್ರಸಾದ್ ಉಪಸ್ಥಿತರಿದ್ದರು. 16 ಕೆಸಿಕೆಎಂ 1ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಯ ಸರ್ವ ಸದಸ್ಯರ ಸಭೆ ಹಾಗೂ ಸಂಘದ ನೂತನ ಕಟ್ಟಡವನ್ನು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಉದ್ಘಾಟಿಸಿದರು. ಬಿ.ಎನ್.ರಾಜಣ್ಣಶೆಟ್ಟಿ, ಪ್ರಶಾಂತ್‌, ಕುಮಾರ್‌, ಮಲ್ಲೇಶ್‌ ಇದ್ದರು.