ಕುದೂರು: ಕನ್ನಡವೆಂದರೆ ಬರಿ ನುಡಿಯಲ್ಲ, ನೀರೆಂದರೆ ಬರೀ ನೀರಲ್ಲ ಅದು ಪಾವನ ತೀರ್ಥ ಎಂಬ ಮಾತು ಅಕ್ಷರಗಳ ಜೋಡಣೆಯಷ್ಟಕ್ಕೇ ಸೀಮಿತವಾಗಿಲ್ಲ. ಇಲ್ಲಿನ ನೆಲ ಜಲ ಕಲೆ ಎಲ್ಲವೂ ನಿಜಕ್ಕೂ ಪುಣ್ಯಭೂಮಿಯಾಗಿಯೇ ಗೋಚರಿಸುತ್ತದೆ. ಅದನ್ನು ಭಾವಿಸುವ, ನೋಡುವ ಕಣ್ಣು ಮತ್ತು ಮನಸುಗಳು ತೆರೆದಿರಬೇಕಷ್ಟೆ ಎಂದು ಉದ್ಯಮಿ ಆರ್.ಉಪೇಂದ್ರಶೆಟ್ಟಿ ಅಭಿಪ್ರಾಯಪಟ್ಟರು

ಕುದೂರು: ಕನ್ನಡವೆಂದರೆ ಬರಿ ನುಡಿಯಲ್ಲ, ನೀರೆಂದರೆ ಬರೀ ನೀರಲ್ಲ ಅದು ಪಾವನ ತೀರ್ಥ ಎಂಬ ಮಾತು ಅಕ್ಷರಗಳ ಜೋಡಣೆಯಷ್ಟಕ್ಕೇ ಸೀಮಿತವಾಗಿಲ್ಲ. ಇಲ್ಲಿನ ನೆಲ ಜಲ ಕಲೆ ಎಲ್ಲವೂ ನಿಜಕ್ಕೂ ಪುಣ್ಯಭೂಮಿಯಾಗಿಯೇ ಗೋಚರಿಸುತ್ತದೆ. ಅದನ್ನು ಭಾವಿಸುವ, ನೋಡುವ ಕಣ್ಣು ಮತ್ತು ಮನಸುಗಳು ತೆರೆದಿರಬೇಕಷ್ಟೆ ಎಂದು ಉದ್ಯಮಿ ಆರ್.ಉಪೇಂದ್ರಶೆಟ್ಟಿ ಅಭಿಪ್ರಾಯಪಟ್ಟರು.

ಕುದೂರು ಗ್ರಾಮದ ನೀಲಮ್ಮ ಸತ್ಯನಾರಾಯಣಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,

ಗ್ರಾಮೀಣ ಹಿನ್ನೆಲೆಯಿಂದ ಬರುವುದು ನಿಜಕ್ಕೂ ಅದೊಂದು ವರ. ಒಳ್ಳೆಯ ಗಾಳಿ, ಬೆಳಕು ಮತ್ತು ಒಳ್ಳೆಯ ಮನಸಿಗೆ ಹಳ್ಳಿಗರ ಬದುಕು ಜೀವಂತಿಕೆಯ ಉದಾಹರಣೆ ಆಗಿದೆ. ಕನ್ನಡದ ಕಂಪು ನೂರಕ್ಕೆ ನೂರರಷ್ಟು ಪಸರಿಸಿರುವುದು ಹಳ್ಳಿಯ ಪರಿಸರದಲ್ಲಿ. ಆದ್ದರಿಂದ ಪ್ರತಿಭೆಗಳು ಹಳ್ಳಿ ದಿಲ್ಲಿ ಎಂಬ ಬೇದದಲ್ಲಿ ಉದಯಿಸುವುದಿಲ್ಲ. ಬೆಳೆಯಬೇಕು. ಸಾಧಿಸಬೇಕು ಎಂಬ ಹಂಬಲ ಇರುವ ಯಾವುದೇ ವ್ಯಕ್ತಿಯ ಪ್ರಗತಿ ಆಗಿಯೇ ತೀರುತ್ತದೆ ಎಂದು ಹೇಳಿದರು.

ಡಾ.ಮುರುಳಿ ಕೂಡ್ಲೂರು ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಿಸುವುದು ಎಂದರೆ ನಮ್ಮೆಲ್ಲರ ಎದೆಗಳಲ್ಲಿ ಮತ್ತೆ ಮತ್ತೆ ಕನ್ನಡತನವನ್ನು ಗಟ್ಟಿಗೊಳಿಸಿಕೊಂಡು ಕನ್ನಡ ಸಂಸ್ಕೃತಿಯನ್ನು ಸದಾ ಜೀವಂತವಾಗಿರಿಸಿಕೊಂಡು ಜಗತ್ತಿನೆಲ್ಲೆಡೆ ಕನ್ನಡದ ಸೊಗಡನ್ನು ಹರಡುವುದು. ಈ ಭಾವದಲ್ಲಿ ರಾಜ್ಯೋತ್ಸವಗಳು ಆಚರಣೆಯಾಗಬೇಕಿದೆ ಎಂದರು.

ಪ್ರಾಚಾರ್ಯ ರಾಜ್ ಕುಮಾರ್ ಮಾತನಾಡಿ, ಓದು ಬರಹ ಗೊತ್ತಿಲ್ಲದ ತಾಯಿ ತನ್ನ ಮಗುವಿಗೆ ಹಾಲು ಕುಡಿಸುತ್ತಾ ನೀನು ಕೆರೆ ಕಟ್ಟಿಸು, ಬಾವಿ ಕಟ್ಟಿಸು, ದೇವಾಲಯ ನಿಮರ್ಾಣ ಮಾಡು ನಂಬಿದವರಿಗೆ ಮೋಸ ಮಾಡಬೇಡ ಎಂದು ಹಾಲುಣಿಸುತ್ತಿದ್ದುದು ಶಾಸನಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಹಸುವಿನ ಬಾಯಲ್ಲಿ ಸತ್ಯ ನುಡಿಸಿದ, ಯೋಗ್ಯರ ನಡುವೆ ವ್ಯಾಘ್ರನಂತಹವರು ಬದುಕಬಾರದು ಎಂಬ ಸತ್ಯದ ಜನಪದ ನುಡಿ ಹೇಳಿದ ಕನ್ನಡದ ಮಣ್ಣಿದು. ಇಂತಹ ಅದರ್ಶಗಳು ನಮ್ಮನ್ನು ಉತ್ಸಾಹಿತರನ್ನಾಗಿಸಿ ಕನ್ನಡತನವನ್ನು ಉಸಿರಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಮೋಹನ್ ಕುಮಾರ್, ಬಿ.ಸಿ.ಹನುಮಂತಪ್ಪ, ಡಾ.ನಟರಾಜ್, ಎನ್.ಶ್ರೀನಿವಾಸ್, ಎಂ.ಪುಟ್ಟಲಕ್ಷ್ಮಯ್ಯ, ಸಿ.ಎಚ್.ದಯಾನಂದಮೂರ್ತಿ, ಭೂಮಿಕಾ, ಶಿವಾನಂದ ಕಂಬಳೆ ಡಾ.ಶ್ರೈಲೇಂದ್ರ, ಡಾ.ಮುರಳಿ ಹಾಜರಿದ್ದರು.

17ಕೆಆರ್ ಎಂಎನ್ 3.ಜೆಪಿಜಿ

ಕುದೂರು ಗ್ರಾಮದ ಶ್ರೀಮತಿ ನೀಲಮ್ಮ ಸತ್ಯನಾರಾಯಣಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಯಮಿ ಆರ್.ಉಪೇಂದ್ರಶೆಟ್ಟಿ ಉದ್ಘಾಟಿಸಿದರು.