ಸಾರಾಂಶ
ಮಾಗಡಿ: ಒಬ್ಬ ವ್ಯಕ್ತಿ ಸತ್ತ ಮೇಲೂ ಬದುಕಿದ್ದಾನೆಂದು ಸಾಬೀತು ಪಡಿಸುವುದು ಅವರ ಸಾಧನೆ ಮತ್ತು ಸೇವೆ ಎಂಬುದಕ್ಕೆ ಡಾ.ಪುನೀತ್ ರಾಜಕುಮಾರ್ ಸಾಕ್ಷಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಮಾಗಡಿ: ಒಬ್ಬ ವ್ಯಕ್ತಿ ಸತ್ತ ಮೇಲೂ ಬದುಕಿದ್ದಾನೆಂದು ಸಾಬೀತು ಪಡಿಸುವುದು ಅವರ ಸಾಧನೆ ಮತ್ತು ಸೇವೆ ಎಂಬುದಕ್ಕೆ ಡಾ.ಪುನೀತ್ ರಾಜಕುಮಾರ್ ಸಾಕ್ಷಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕಲ್ಯಾಗೇಟ್ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಡಾ.ಪುನೀತ್ ರಾಜಕುಮಾರ್ 50ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಪುನೀತ್ ರಾಜಕುಮಾರ್ ತಾವು ಬದುಕಿದ್ದಾಗ ಯಾವ ರೀತಿ ಜನಗಳಿಗೆ ಸಹಾಯ ಮಾಡಿದ್ದಾರೆಂಬುದು ಅವರು ಸತ್ತ ನಂತರ ಇಡಿ ಜಗತ್ತಿಗೆ ತಿಳಿಯುವಂತಾಯಿತು. ಸತ್ತಮೇಲೂ ಬದುಕುವುದೇ ಸಾಧನೆ. ಚಿತ್ರರಂಗದ ಜೊತೆಗೂ ನಿಜ ಜೀವನದಲ್ಲೂ ಉತ್ತಮ ನಾಯಕನಾಗಿ ಬಡವರ ಸೇವೆ ಮಾಡಿದ್ದಾರೆ. ಸಾಧನೆಗೆ ಹಿಡಿದ ಕನ್ನಡಿಯಾಗಿದ್ದು ಬಸವರಾಜು ತಂಡ ನಡೆಸುತ್ತಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಡಾ.ಪುನೀತ್ ರಾಜಕುಮಾರ್ ಅಗಲಿಕೆಯಿಂದ ಸಾಕಷ್ಟು ನೋವಾಗಿದೆ. ನೋವಿನ ನಡುವೆಯೂ 50ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳ ಜೊತೆ ಆಚರಿಸುತ್ತಿರುವುದು ಸಂತೋಷ ತಂದಿದೆ. ಡಾ.ರಾಜಕುಮಾರ್ ಕುಟುಂಬದ ಹಬ್ಬವನ್ನು ನಮ್ಮನೆಯ ಹಬ್ಬದ ರೀತಿ ಆಚರಿಸುತ್ತೇವೆ ಎಂದು ತಿಳಿಸಿದರು.
ಶಾಸಕ ಬಾಲಕೃಷ್ಣ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಸಾರ್ವಜನಿಕರಿಗೆ ಅನ್ನದಾನ ಮಾಡಿದರು. ಪುರಸಭೆ ಉಪಾಧ್ಯಕ್ಷ ರಿಯಾಜ್, ಟಿಎಪಿಎಂಎಸ್ ನಿರ್ದೇಶಕ ಮಂಜುನಾಥ್, ಮುಖಂಡರಾದ ಜೆ.ಪಿ.ಚಂದ್ರೇಗೌಡ, ರಾಜಣ್ಣ, ಶಾಂತ, ಮೂರ್ತಿ ಚಂದ್ರಶೇಖರ್, ಪುನೀತ್ ಅಭಿಮಾನಿಗಳು ಪಾಲ್ಗೊಂಡಿದ್ದರು.(ಫೋಟೋ ಕ್ಯಾಫ್ಷನ್)
ಮಾಗಡಿ ಪಟ್ಟಣದ ಕಲ್ಯಾಗೇಟ್ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಡಾ.ಪುನೀತ್ ರಾಜಕುಮಾರ್ 50ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಶಾಸಕ ಬಾಲಕೃಷ್ಣ ಭಾಗವಹಿಸಿರುವುದು.