ಸಾರಾಂಶ
ಜೀವನದ ಜಂಜಡದಲ್ಲಿ ನೆಮ್ಮದಿ ಕಾಣಬೇಕಾದರೆ ಧರ್ಮಿಷ್ಠರಾಗಿ ಬಾಳುವುದೊಂದೇ ಮಾರ್ಗವಾಗಿದೆ. ಅರ್ಚನೆ, ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ರೂಢಿಸಿಕೊಳ್ಳುವುದು ಅಗತ್ಯ ಎಂದು ಲಚ್ಯಾಣ ಸಿದ್ಧಪ್ಪ ಮಹಾರಾಜರ ಶಾಖಾಮಠದ ಕುಂಚನೂರಿನ ಸಿದ್ಧಲಿಂಗದೇವರು ಹೇಳಿದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಜೀವನದ ಜಂಜಡದಲ್ಲಿ ನೆಮ್ಮದಿ ಕಾಣಬೇಕಾದರೆ ಧರ್ಮಿಷ್ಠರಾಗಿ ಬಾಳುವುದೊಂದೇ ಮಾರ್ಗವಾಗಿದೆ. ಅರ್ಚನೆ, ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕಾರ ರೂಢಿಸಿಕೊಳ್ಳುವುದು ಅಗತ್ಯ ಎಂದು ಲಚ್ಯಾಣ ಸಿದ್ಧಪ್ಪ ಮಹಾರಾಜರ ಶಾಖಾಮಠದ ಕುಂಚನೂರಿನ ಸಿದ್ಧಲಿಂಗದೇವರು ಹೇಳಿದರು.ಪಟ್ಟಣದ ಕಿಲ್ಲಾಭಾಗದಲ್ಲಿರುವ ಪುರಾತನವಾದ ಗ್ರಾಮದೇವಿ ದ್ಯಾಮವ್ವದೇವಿ ದೇವಸ್ಥಾನ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ದೇವಿಯ ಮೂರ್ತಿಗಳ ಪುನಃ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಧಾರ್ಮಿಕ ಮನೋಭಾವ ಅಗತ್ಯವಾಗಿದ್ದು, ಹಿಂದೆಂದಿಗಿಂತಲೂ ಈಗ ಪೂಜಾ ಕೈಂಕರ್ಯಗಳು, ಅನುಷ್ಠಾಣಗಳು ಹೆಚ್ಚುತ್ತಲಿವೆ. ಇದು ಸಂತಸದ ಸಂಗತಿಯಾದರೂ ಸಹ ಇವೆಲ್ಲ ಮನಸಾರೆ ಸಾಗಬೇಕೆಂಬುದು ನಮ್ಮ ಆಲೋಚನೆಯಾಗಿದೆ. ಧರ್ಮದಿಂದಲೆ ಮುಕ್ತಿ ಎಂಬ ಭಾವ ಎಲ್ಲರಲ್ಲೂ ಮೂಡಲಿ ಎಂದು ಹರಸಿದರು.ರಬಕವಿಯ ಪೂಜ್ಯ ಶೇಖರಾಚಾರ್ಯರ ನೇತೃತ್ವದಲ್ಲಿ ಎರಡನೇ ದಿನವಾದ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಪ್ರಾತಃಕಾಲ ದ್ಯಾಮವ್ವದೇವಿ ಮೂರ್ತಿ ಪ್ರಾಣಪ್ರತಿಷ್ಠಾಪಣೆ, ಹೋಮ-ಹವನ, ಮಹಾಭಿಷೇಕ, ಶೃಂಗಾರ ಪೂಜೆ ಸೇರಿದಂತೆ ಹಲವು ವಿಧಿಗಳು ಜರುಗಿದವು. ದ್ಯಾಮವ್ವದೇವಿ ಸೇವಾ ಸಮಿತಿ ಸೇರಿದಂತೆ ಪಟ್ಟಣದ ಭಕ್ತರು, ಮಹಿಳೆಯರು ಭಾಗಿಯಾಗಿದ್ದರು.
ಶುಕರವಾರ ಪ್ರಾತಃಕಾಲದಲ್ಲಿ ಶ್ರೀ ದೇವಿಗೆ ಮಹಾಭಿಷೇಕ, ಅಲಂಕಾರಪೂಜೆ, ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿದವು.