ಬೇಕಲ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ಆರನೇ ದೀಪಾವಳಿ ಸಂಗೀತೋತ್ಸವದಲ್ಲಿ ತಾಳ, ನಾದ ಮತ್ತು ಲೆಕ್ಕಾಚಾರಗಳಲ್ಲಿ ಮೋಡಿ ಮಾಡುವ ಪ್ರದರ್ಶನ ನೀಡಿ ಪದ್ಮಶ್ರೀ ಯೆಲ್ಲ ವೆಂಕಟೇಶ್ವರ ರಾವ್ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ಮಂಗಳೂರು: ಬೇಕಲ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ಆರನೇ ದೀಪಾವಳಿ ಸಂಗೀತೋತ್ಸವದಲ್ಲಿ ತಾಳ, ನಾದ ಮತ್ತು ಲೆಕ್ಕಾಚಾರಗಳಲ್ಲಿ ಮೋಡಿ ಮಾಡುವ ಪ್ರದರ್ಶನ ನೀಡಿ ಪದ್ಮಶ್ರೀ ಯೆಲ್ಲ ವೆಂಕಟೇಶ್ವರ ರಾವ್ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡರು.

ಸಿ.ಎಸ್.ಸಜೀವ್ ಅವರ ಗಾಯನ ಕಚೇರಿಯಲ್ಲಿ ಚಾರುಲತಾ ರಾಮಾನುಜಂ ವಯಲಿನ್ ನುಡಿಸಿದರು. ಯೆಲ್ಲ ವೆಂಕಟೇಶ್ವರ ರಾವ್ ಮೃದಂಗದಲ್ಲಿ, ತ್ರಿಪ್ಪೂಣಿತ್ತುರ ರಾಧಾಕೃಷ್ಣನ್ ಘಟಂನಲ್ಲಿ ಮತ್ತು ಬೆಂಗಳೂರು ರಾಜಶೇಖರ್ ಮುಖರ್ಶಂಖ್‌ನಲ್ಲಿ ಪಕ್ಕವಾದ್ಯ ನೀಡಿದರು. ಹೇರಂಬ ಹೇಮಂತ್ ಸಹೋದರರ ಕೊಳಲು ಕಚೇರಿ ಹಾಗೂ ಕಾಂಚನಾ ಸಹೋದರಿಯರು ಮತ್ತು ಅರ್ಚನಾ ಆರತಿ ಸಹೋದರಿಯರ ಗಾಯನ ಕಚೇರಿಗಳೂ ಗಮನ ಸೆಳೆದವು.