ಸಾರಾಂಶ
ಕೊಡವ ಕುಟುಂಬಗಳ ನಡುವೆ ವಾಲಿಬಾಲ್ ಪಂದ್ಯಾಟವನ್ನು ಅ.12 ಹಾಗೂ 13 ರಂದು ಬೆಕ್ಕೆಸೊಡ್ಲೂರು ಗ್ರಾಮದ ಶಾರದ ಪ್ರೌಢಶಾಲಾ ಮೈದಾನದಲ್ಲಿ ಬೆಕ್ಕೆಸೊಡ್ಲೂರು ಗ್ರಾಮದ ಮಲ್ಲಮಾಡ ಕುಟುಂಬದಿಂದ ಆಯೋಜಿಸಲಾಗಿದೆ.ಪೊನ್ನಂಪೇಟೆ ತಾಲೂಕು ಬೆಕ್ಕೆಸೊಡ್ಲೂರು ಗ್ರಾಮದ ಕುಟುಂಬದ ಐನ್ ಮನೆಯಲ್ಲಿ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಕುಟುಂಬದ ಅಧ್ಯಕ್ಷ ಪ್ರಭು ಪೂಣಚ್ಚ ಕ್ರೀಡಾಕೂಟ ಕುರಿತು ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಮಲ್ಲಮಾಡ 32 ಕುಟುಂಬವಿದ್ದು, ಅಂತಾರಾಷ್ಟ್ರೀಯ ಹಾಕಿಗೆ ನಿವ್ಯಾ ಪೊನ್ನಮ್ಮ ಮತ್ತು ಅಂತಾರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ವಿಲ್ಮಾ ಲೀಲಾವತಿ ಅವರನ್ನು ನೀಡಿರುವ ಕುಟುಂಬ. ಇದೀಗ ಕೊಡವ ಕುಟುಂಬದಲ್ಲಿ ಸಹಕಾರ ಮನೋಭಾವ, ಸ್ನೇಹ, ಬಾಂಧವ್ಯ, ಕ್ರೀಡೆ ಮೂಲಕ ಸಂಪರ್ಕ ಬೆಸೆಯಲು ಪುರುಷರ ವಾಲಿವಾಲ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.ಈಗಾಗಲೇ ಕೊಡವ ಕುಟುಂಬದಿಂದ ಹಾಕಿ ಪಂದ್ಯಾವಳಿ, ಕ್ರಿಕೆಟ್ ಪಂದ್ಯಾವಳಿ, ಹಾಗೂ ಇತ್ತೀಚೆಗೆ ಹಗ್ಗಜಗ್ಗಾಟ ಪಂದ್ಯಾವಳಿ ನಡೆಯುತ್ತಿದೆ. ಇದೀಗ ವಾಲಿಬಾಲ್ ಪಂದ್ಯಾವಳಿಯ ಆಟಗಾರರಿಗೂ, ಪ್ರತಿಭೆಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರೀಡೆಯನ್ನು ಸಹ ಕೌಟುಂಬಿಕ ಕ್ರೀಡಾಕೂಟವಾಗಿ ಜನಪ್ರಿಯಗೊಳಿಸಲು ನಮ್ಮ ಕುಟುಂಬದಿಂದ ಈ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರು.40 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರು.30 ಸಾವಿರ ಹಾಗೂ ಟ್ರೋಫಿ , ತೃತೀಯ ಸ್ಥಾನ ಪಡೆಯುವ ತಂಡಕ್ಕೆ ರು.20 ಸಾವಿರ ನಗದು ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ರು.10 ಸಾವಿರ ಹಾಗೂ ಟ್ರೋಫಿ ನೀಡಲಾಗುವುದು. ಪರಾಭವಗೊಳ್ಳುವ ಪ್ರತಿ ತಂಡಕ್ಕೆ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.ಮಲ್ಲಮಾಡ ಕುಟುಂಬದ ಕಾರ್ಯದರ್ಶಿ ಈಶ್ವರ, ಕುಟುಂಬ ಸದಸ್ಯರಾದ ಅರಸು ಮೊಣ್ಣಪ್ಪ, ನರಚಂದ್ರ, ಶಾರದಾ ಬೋಪಯ್ಯ, ಬೋಪಯ್ಯ, ನರೇಂದ್ರ, ಕಾವೇರಮ್ಮ, ನಟೇಶ್ ದೇವಯ್ಯ, ಗಿರೀಶ್ ಗಣಪತಿ, ವಿಷ್ಣು, ಗಣಪತಿ, ಪ್ರಕಾಶ್, ವರ್ಷಾ ಕಿರಣ್, ಮೋಹಿತ್ ಸುಬ್ಬಯ್ಯ ಹಾಜರಿದ್ದರು.