ಹೊರಗುತ್ತಿಗೆ ನೌಕರರಿಂದ ಬೆಳಗಾವಿ ಚಲೋ

| Published : Dec 14 2023, 01:30 AM IST

ಸಾರಾಂಶ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ನೇರ ಸಂಬಳ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಮಟ್ಟದ ಹೊರಗುತ್ತಿಗೆ ನೌಕರರ ಸಂಘ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಿಂದ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ತೆರಳಿದ್ದಾರೆ.

ಲಕ್ಷ್ಮೇಶ್ವರ: ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ನೀಡುತ್ತಿರುವ ಸಂಬಳವನ್ನು ಎಜೆನ್ಸಿಗಳ ಮೂಲಕ ನೀಡದೆ ನೇರವಾಗಿ ನೌಕರರಿಗೆ ನೀಡುವಂತೆ ಒತ್ತಾಯಿಸಿ ಬೆಳಗಾವಿ ಸುವರ್ಣ ಸೌಧದ ಎದುರು ಬುಧವಾರ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವನಾಥ ಹಾದಿಮನಿ ಹೇಳಿದರು. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ನೇರ ಸಂಬಳ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಮಟ್ಟದ ಹೊರಗುತ್ತಿಗೆ ನೌಕರರ ಸಂಘ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಬೆಳಗಾವಿ ತೆರಳುತ್ತಿರುವ ಸಂದರ್ಭದಲ್ಲಿ ಅವರು ಮಾತನಾಡಿದರು.

ಈ ವೇಳೆ ಅಶೋಕ ನಡುಗೇರಿ, ಲಕ್ಷ್ಮಣ ಹಿತ್ತಲಮನಿ, ರಾಜು ನಂದೆಣ್ಣವರ, ರಮೇಶ ಕೊನ್ನೂರ, ಮಾಲತೇಶ ತಂಡಿಗೇರಿ, ಕುಮಾರ ನಂದೆಣ್ಣವರ, ನಾಗರಾಜ ಮುಳಗುಂದ, ಯಲ್ಲಪ್ಪ ಬೆಳವಿಗಿ, ಮಂಜುನಾಥ ಬಸವಾನಾಯ್ಕರ, ಹನುಮಂತ ಅಡಗಿಮನಿ, ಆಕಾಶ ಕರ್ನಾಚಿ, ವಿನಾಯಕ ಶಿವಶೆಟ್ಟರ, ಪ್ರದೀಪ ಕ್ಷತ್ರಿಯ, ಬಸವಣ್ಣೆಪ್ಪ ನಂದೆಣ್ಣವರ ಇದ್ದರು.