ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗೆ ಶ್ರದ್ಧಾಂಜಲಿ

| Published : Nov 28 2024, 12:30 AM IST

ಸಾರಾಂಶ

ನೂರಾರು ಜನರನ್ನು ರಕ್ಷಣೆ ಮಾಡಿದ ವೀರ ಸಂದೀಪ್ ಉನ್ನಿಕೃಷ್ಣನ್ ಅವರನ್ನು ನೆನೆಸಿ, ಕ್ಯಾಂಡಲ್ ಪ್ರೇಯರ್ ಮಾಡಿ ಶ್ರದ್ಧಾಂಜಲಿ

ಕನ್ನಡಪ್ರಭ ವಾರ್ತೆ ಮೈಸೂರುಸೈನಿಕ ಅಕಾಡೆಮಿಯಲ್ಲಿ ನಮ್ಮೆಲ್ಲರಿಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಅಶೋಕ ಚಕ್ರ ವಿಜೇತರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬೆಳವಾಡಿ ಸಿಲಿಕಾನ್ ವ್ಯಾಲಿ ಬಡಾವಣೆ ಇಲ್ಲಿರುವ ಸೈನಿಕ ಅಕಾಡೆಮಿ ಸಂಸ್ಥೆಯಲ್ಲಿ ದೇಶಕ್ಕಾಗಿ, ದೇಶದ ಜನತೆಗಾಗಿ ತನ್ನ ಕುಟುಂಬ, ಸ್ನೇಹಿತರು, ಬಂದುಗಳು ಎಲ್ಲವನ್ನೂ ತೊರೆದು ಪಾಕಿಸ್ತಾನಿ ಉಗ್ರರನ್ನು ಒಡೆದುರುಳಿಸಿ, ನೂರಾರು ಜನರನ್ನು ರಕ್ಷಣೆ ಮಾಡಿದ ವೀರ ಸಂದೀಪ್ ಉನ್ನಿಕೃಷ್ಣನ್ ಅವರನ್ನು ನೆನೆಸಿ, ಕ್ಯಾಂಡಲ್ ಪ್ರೇಯರ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೈನಿಕ ಅಕಾಡೆಮಿಯ ಸಂಸ್ಥಾಪಕರು ಮತ್ತು ಮಾಜಿ ಕಮಾಂಡೋ ಸಿ.ಎಂ. ಶ್ರೀಧರ ಮಾತನಾಡಿ, ನಾನು ಎನ್ಎಸ್‌ಜಿ ಬ್ಲಾಕ್ ಕ್ಯಾಟ್ ಕಮಾಂಡೊನಲ್ಲಿ ಇದ್ದಾಗ ಸಂದೀಪ್ ಉನ್ನಿಕೃಷ್ಣನ್ ಅವರು ನಮಗೆ ತರಬೇತಿ ಅಧಿಕಾರಿ ಆಗಿದ್ದರು, ಇವರ ಜೊತೆ ಇದ್ದು ತರಬೇತಿ ಪಡೆದಿದ್ದು ಬಹಳ ಹೆಮ್ಮೆ ಎನಿಸಿದೆ, 26/11 ಮುಂಬೈ ತಾಜ್ ಹೋಟೆಲ್ ನಲ್ಲಿ ನಾನು ಒಂದು ಟೀಂ ನಲ್ಲಿ ಕಾರ್ಯಾಚರಣೆ ಮಾಡಿದ್ದು, ಬಹಳ ಹೆಮ್ಮೆ ಎನಿಸಿದೆ, ಇಂತಹ ನಿಜವಾದ ವೀರರನ್ನು ನಾವು ನೆನೆಸುವುದರಿಂದ ನಮಗೆಲ್ಲರಿಗೂ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.

ಸಹ ಸಂಸ್ಥಾಪಕರು ಅನಿತಾ ಶ್ರೀಧರ, ಅಧ್ಯಾಪಕರು ಎಸ್.ಎಸ್. ರವಿ, ಸಿಬ್ಬಂದಿ, ಸಹ ಸಿಬ್ಬಂದಿ, ಸೈನಿಕ ಅಕಾಡೆಮಿ ಅಭ್ಯರ್ಥಿಗಳು ಇದ್ದರು.