ಸಾರಾಂಶ
ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಶತಮಾನದ ಹಿಂದೆ ಬೆಳಗಾವಿಯಲ್ಲಿ ಜರುಗಿದ 39ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಹಾಧಿವೇಶನಕ್ಕೆ ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನವಿದೆ ಎಂದು ಧಾರವಾಡ ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಡಾ.ಸಂಜೀವ್ ಕುಲಕರ್ಣಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಶತಮಾನದ ಹಿಂದೆ ಬೆಳಗಾವಿಯಲ್ಲಿ ಜರುಗಿದ 39ನೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಹಾಧಿವೇಶನಕ್ಕೆ ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನವಿದೆ ಎಂದು ಧಾರವಾಡ ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಡಾ.ಸಂಜೀವ್ ಕುಲಕರ್ಣಿ ಹೇಳಿದರು.ಪಟ್ಟಣದ ಬಸವೇಶ್ವರ ಎಜ್ಯುಕೇಶನ್ ಸೊಸೈಟಿಯ ಗಣಾಚಾರಿ ಪಿ.ಯು. ಕಾಲೇಜಿನಲ್ಲಿ ಮಲ್ಲಮ್ಮನ ಬೆಳವಡಿಯ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಗಾಂಧಿ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜಯಪುರ ಬೇನಾಳದ ಗಾಂಧಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಅಂದು ಬಾಪೂ ತಿರುಗಿಸಿದ ಚರಕದ ಒಂದು ಸುತ್ತು ಇಡೀ ಬ್ರಿಟಿಷ್ ಸಾಮ್ರಾಜ್ಯದ ಆರ್ಥಿಕತೆಯ ಬೆನ್ನೆಲುಬನ್ನು ಮುರಿದು ಹಾಕಿತು ಎಂದರು.ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ ಮತನಾಡಿ, ಚರಕ ಸ್ವಾತಂತ್ರ್ಯದ ಸಂಕೇತ ಹಾಗೂ ಪ್ರತಿ ಭಾರತೀಯನ ಸ್ವಾಭಿಮಾನದ ಪ್ರತೀಕವೂ ಹೌದು ಎಂದು ಹೇಳಿದರು.
ಸೋಮೇಶ್ವರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ ಮಾತನಾಡಿ, ವಿಶ್ವ ಗೆದ್ದ ಮಹಾನಾಯಕ ಮಹಾತ್ಮ ಗಾಂಧೀಜಿಯವರು. ಅವರ ಜೀವನ ಸಂದೇಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಬಿ.ಗಣಾಚಾರಿ ಮಾತನಾಡಿ, ಗಾಂಧೀಜಿ ಅವರ ಮಹತ್ತರವಾದ ಕಾರ್ಯ ಸದಾ ಸ್ಮರಣೀಯವಾಗಿದೆ ಎಂದರು.
ಹಿರಿಯ ವಕೀಲ ಸಿ.ಎಸ್. ಚಿಕ್ಕನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರಾದ ವಿಠಲ ಕಟದಾಳ, ರಮೇಶ ಕುರುಬರ, ಎಸ್.ವಿ. ಸಿದ್ದಮನಿ, ಪ್ರಾಚಾರ್ಯ ಎಂ.ಎಸ್. ಹಾದಿಮನಿ, ಉಪನ್ಯಾಸಕರಾದ ಸಿ.ಎಂ.ಹಕ್ಕಿ, ಎಸ್.ಕೆ. ಮುದಗೆನವರಮಠ, ಎಂ.ಎಫ್. ಎಡತ್ತಿನ, ಪಿ.ಡಿ. ಮೊಟಗಿ, ಎನ್..ಜಿ. ಅಂಬಿ, ಎಸ್.ಆರ್.ಬಳಿಗಾರ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಎನ್.ಬಿ. ಉಳವಿ ಸ್ವಾಗತಿಸಿದರು. ಪ್ರಾಚಾರ್ಯ ಎಸ್.ಎಸ್. ಕುಲಕರ್ಣಿ ನಿರೂಪಿಸಿದರು.