ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರ ಬಂಧನ

| Published : Jan 16 2025, 12:49 AM IST / Updated: Jan 16 2025, 12:47 PM IST

pocso act
ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿತ ಅತ್ಯಾಚಾರ ಎಸಗಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

  ಬೆಳಗಾವಿ : ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿತ ಅತ್ಯಾಚಾರ ಎಸಗಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾರೂಗೇರಿ ಪಟ್ಟಣದ ಅದಿಲಷಾ ಶಬ್ಬೀರ್ ಜಮಾದಾರ, ಯಲ್ಪಾರಟ್ಟಿ ಗ್ರಾಮದ ಅಭಿಷೇಕ ಬಾಳಪ್ಪ ಬೆವಣೂರ ಮತ್ತು ಅಕಲನೂರ ಗ್ರಾಮದ ಕೌತುಕ ಬಾನು ಬಡಿಗೇರ ಬಂಧಿತ ಆರೋಪಿಗಳು. ಆರೋಪಿಗಳು ರಾಯಬಾಗ ತಾಲೂಕಿನ ಗ್ರಾಮವೊಂದರ ಗುಡ್ಡಗಾಡು ಪ್ರದೇಶದಲ್ಲಿ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಒಬ್ಬ ಅಪ್ರಾಪ್ತೆಯು ಬಂಧಿತ ಆರೋಪಿ ಅಭಿಷೇಕ್‌ನ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾಳೆ. ಮೆಸೇಜ್‌ ಮಾಡುತ್ತಾ ಮಾಡುತ್ತಾ ಯುವತಿ ಆರೋಪಿಯ ಜತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು 17 ವರ್ಷದ ಬಾಲಕಿಗೆ ಪುಸಲಾಯಿಸಿದ್ದಾನೆ. ಈತನ ಮಾತು ನಂಬಿ, ನೊಂದ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹೋಗಿದ್ದಳು. ಈ ವೇಳೆ ಎಲ್ಲರೂ ಒಟ್ಟಾಗಿ ಹಾರೂಗೇರಿ ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ.

ಅಲ್ಲಿ, ಆರೋಪಿ ಅಭಿಷೇಕ ಸಂತ್ರಸ್ತ ಬಾಲಕಿಯರನ್ನು ಎರ್ಟಿಗಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಇದೆ ವೇಳೆ ಎರ್ಟಿಗಾ ಕಾರಿನಲ್ಲಿ ಅಭಿಷೇಕ ಮತ್ತೆ ತನ್ನಿಬ್ಬರು ಗೆಳೆಯರನ್ನು ಕೂಡ ಕರೆದುಕೊಂಡು ಕಾರಿನಲ್ಲಿ ಕರೆತಂದಿದ್ದ. ನಂತರ ಸಂತ್ರಸ್ತ ಬಾಲಕಿಯರನ್ನು ರಾಯಬಾಗ ತಾಲೂಕಿನ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಜ.3ರಂದು ಮಧ್ಯಾಹ್ನದ ವೇಳೆಗೆ ಗುಡ್ಡದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದರು.

ಬಾಲಕಿ ಮೇಲೆ ಅಭಿಷೇಕ ಬಳಿಕ ಕಾರು ಚಾಲಕ ಕೌತುಕ್ ಬಡಿಗೇರಿ ಅತ್ಯಾಚಾರವೆಸಗುತ್ತಾನೆ. ಇದೇ ವೇಳೆ ಕಾರಿನಲ್ಲಿ ಕುಳಿತಿದ್ದ ಬಾಲಕಿ ಮೇಲೆ ಆದಿಲ್ ಜಮಾದಾರ್ ಎಂಬಾತ ಅತ್ಯಾಚಾರವೆಸಗುತ್ತಾನೆ. ಇಷ್ಟು ಮಾತ್ರವಲ್ಲ, ಆರೋಪಿಗಳು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು, ಬಳಿಕ ಬ್ಲ್ಯಾಕ್‌ ಮೇಲ್ ಕೂಡ ಮಾಡಿದ್ದಾರೆ ಎಂದರು.

ಆರೋಪಿತರು ಸಂತ್ರಸ್ತ ಬಾಲಕಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಮುಂದಿನ ವಾರ ಗೋವಾಕ್ಕೆ ಬರಬೇಕು. ಇಲ್ಲದಿದ್ದರೆ ನಿಮ್ಮ ವಿಡಿಯೋ ವೈರಲ್‌ ಮಾಡುತ್ತೇವೆ ಎಂದು ಬೆದರಿಕೆ ಕೂಡ ಹಾಕಿದ್ದರು. ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದರು.

ಇದರಿಂದ ನೊಂದ ಸಂತ್ರಸ್ತ ಬಾಲಕಿಯರು ಮನೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಬಳಿಕ, ಸಂತ್ರಸ್ತ ಬಾಲಕಿ ತಮ್ಮ ಸೋದರ ಸಂಬಂಧಿ ಜೊತೆಗೆ ಬಂದು ಜ.13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟ 24 ಗಂಟೆಯೊಳಗೆ ಇಬ್ಬರು ಆರೋಪಿಯನ್ನ ಬಂಧಿಸಲಾಗಿದೆ. ನಂತರ, ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಆರೋಪಿಗಳ ಹಿನ್ನೆಲೆ ಪರಿಶೀಲನೆ ಮಾಡುತ್ತೇವೆ. ಇನ್‌ಸ್ಟಾಗ್ರಾಂನಲ್ಲಿ ಹುಡುಗಿ ಹಾಕಿದ್ದ ರೀಲ್ಸ್ ಫಾಲೋ ಮಾಡುತ್ತಿದ್ದ. ಅವರ ಮೊಬೈಲ್​ಗಳನ್ನು ಜಪ್ತಿ ಮಾಡಿದ್ದು ಅದರಲ್ಲಿ ವಿಡಿಯೋಗಳು ಸಿಕ್ಕಿವೆ. ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಭೀಮಾಶಂಕರ ಗುಳೇದ ತಿಳಿಸಿದರು.

ಏನಿದು ಘಟನೆ?

- ಸಂತ್ರಸ್ತೆ ಅಪ್ರಾಪ್ತೆಯು ಬಂಧಿತ ಆರೋಪಿ ಅಭಿಷೇಕ್‌ನ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾಳೆ.

- ಮೆಸೇಜ್‌ ಮಾಡುತ್ತಾ ಮಾಡುತ್ತಾ ಯುವತಿ ಆರೋಪಿಯ ಜತೆಗೆ ಸಲುಗೆ ಬೆಳೆಸಿಕೊಂಡಿದ್ದಳು.

- ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು ಬಾಲಕಿಗೆ ಪುಸಲಾಯಿಸಿದ್ದಾನೆ ಆರೋಪಿ

- ಈತನ ಮಾತು ನಂಬಿ, ನೊಂದ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹೋಗಿದ್ದಳು.

- ಈ ವೇಳೆ ಆರೋಪಿ ಅಭಿಷೇಕ ತನ್ನಿಬ್ಬರು ಸ್ನೇಹಿತರನ್ನು ಕೂಡ ಕರೆದುಕೊಂಡು ಹೋಗಿದ್ದಾನೆ

- ಹಾರೂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿ ಗುಡ್ಡವೊಂದರಲ್ಲಿ ಮೂವರು ಸೇರಿ ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ.