ಸಾರಾಂಶ
ಬೆಳ್ಮಣ್ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಕಳ: ಬೆಳ್ಮಣ್ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಸಂಪತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಸಂದರ್ಭ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸುಹಾಸ್ ಹೆಗ್ಡೆ ಚಾವಡಿ ಅರಮನೆ ನಂದಳಿಕೆ ಅವರನ್ನು ಗೌರವಾಧ್ಯಕ್ಷರಾಗಿ, ಶಿವಪ್ರಸಾದ್ ದೇವಾಡಿಗ ಅವರನ್ನು ಅಧ್ಯಕ್ಷರಾಗಿ, ರಾಜೇಶ್ ನಂದಳಿಕೆ ಅವರನ್ನು ಕಾರ್ಯದರ್ಶಿಯಾಗಿ, ಅಶೋಕ್ ಫರ್ನಾಂಡಿಸ್ ಅವರನ್ನು ಕೋಶಾಧಿಕಾರಿಯಾಗಿ ಹಾಗೂ ಮಾರ್ಕ್ ಆಂದ್ರದೆ ಮತ್ತು ಪ್ರಕಾಶ್ ಅವರನ್ನು ಕ್ಯೂ ಸೆಕ್ರೆಟರಿಗಳಾಗಿ ಏಕಮತದಿಂದ ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಕಾರ್ಯದರ್ಶಿ ಜೋಕ್ಯಂ ಡಿಸೋಜಾ, ವಲಯ ಅಧ್ಯಕ್ಷ ಶಿವಪ್ರಸಾದ್ ದೇವಾಡಿಗ, ಮಾಜಿ ಅಧ್ಯಕ್ಷ ಗಿರೀಶ್ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಹಾಗೂ ಕ್ಯೂ ಸೆಕ್ರೆಟರಿಗಳಾದ ಸುರೇಂದ್ರ, ಶೇಖರ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಕೇಶವ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ರಾಜೇಶ್ ನಂದಳಿಕೆ ಲೆಕ್ಕಪತ್ರ ಮಂಡಿಸಿದರು.