ಸಂಬಂಧಿತರ ಉಡಾಫೆತನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಟ್ಟಡ ಕಾಮಗಾರಿ ಮುಗಿಸಲು ಸರ್ಕಾರದಿಂದ ಹಣ ಮಂಜೂರಾತಿ ಆಗಿ ಅನುಮೋದನೆ ಇದ್ದರೂ ಕೂಡ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಈಗಲಾದರೂ ಇತ್ತ ಗಮನಹರಿಸಿ ಕೂಡಲೇ ಗುಣಮಟ್ಟದ ಕಾಮಗಾರಿ ಮಾಡಿ ಮಕ್ಕಳ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಮಲಾಪುರ ತಾಲೂಕಿನ ಬೇಲೂರ ಗ್ರಾಮದಲ್ಲಿ 4 ವರ್ಷದಿಂದ ನಿರ್ಮಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಕಾಮಗಾರಿ ಇನ್ನೂ ಮುಗಿಯದೆ ನೆನಗುದಿಗೆ ಬಿದ್ದಿದೆ. 2022-23ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4 ಕೊಠಡಿ ನಿರ್ಮಿಸಲು 1.89 ಕೋಟಿ ರು. ಮಂಜೂರಾಗಿತ್ತು.ಬೇಲೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 70 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ನಾಲ್ಕು ಶಿಕ್ಷಕರು ಇರುವುದರ ಜತೆಗೆ 8 ಹಳೆಯ ಕೋಣೆಗಳಿವೆ. ಅದರಲಿ 4 ಕೋಣೆಗಳು ಕೆಡವಿ ಹೊಸ ಕೋಣೆ ನಿರ್ಮಿಸಲಾಗುತ್ತಿದ್ದು, ಒಂದು ಕೋಣೆ ಬೀಳುವ ಹಂತದಲ್ಲಿದೆ. ಕೇವಲ ಎರಡು ಕೋಣೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ವಿದ್ಯಾರ್ಜನೆ ಮಾಡುತ್ತಿದ್ದು, ಎಂಟೂ ತರಗತಿಗಳಿಗೆ ಒಂದೇ ಕೋಣೆ ಬಳಸಿಕೊಳ್ಳುವ ದುಸ್ಥಿತಿ ಇದೆ.

ಮಳೆ ಸುರಿಯುವ ಸಂದರ್ಭ ತರಗತಿ ನಡೆಸಲು ಅಸಾಧ್ಯವಾಗುವುದರಿಂದ ಪ್ರತೀ ಬಾರಿಯೂ ಅನಿವಾರ್ಯವಾಗಿ ರಜೆ ಘೋಷಿಸಲಾಗುತ್ತಿದೆ. ಕಟ್ಟಡ ಕಾಮಗಾರಿ ನಾಲ್ಕು ವರ್ಷಗಳಿಂದಲೂ ಮುಂದುವರಿಯದೇ ಯಥಾಸ್ಥಿತಿಯಲ್ಲಿದೆ. ಈ ಕುರಿತು ಊರವರು, ಮುಖಂಡರು ಸಾಕಷ್ಟು ಬಾರಿ ಕೆಆರ್‌ಐಡಿಎಲ್ ಇಲಾಖೆ ಇಂಜಿನಿಯರ್‌ಗೆ, ಗುತ್ತೇದಾರರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಬಂಧಿತರ ಉಡಾಫೆತನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಟ್ಟಡ ಕಾಮಗಾರಿ ಮುಗಿಸಲು ಸರ್ಕಾರದಿಂದ ಹಣ ಮಂಜೂರಾತಿ ಆಗಿ ಅನುಮೋದನೆ ಇದ್ದರೂ ಕೂಡ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಈಗಲಾದರೂ ಇತ್ತ ಗಮನಹರಿಸಿ ಕೂಡಲೇ ಗುಣಮಟ್ಟದ ಕಾಮಗಾರಿ ಮಾಡಿ ಮಕ್ಕಳ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.ನಾಲ್ಕೈದು ವರ್ಷಗಳಿಂದ ಶಾಲಾ ಕಟ್ಟಡ ಕಾಮಗಾರಿ ಆರಂಭವಾಗಿದ್ದು, ಹಳೆಯ ಕಟ್ಟಡ ನೆಲಸಮ ಮಾಡಿ ಹೊಸ ಕೋಣೆಗಳು ನಿರ್ಮಿಸುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಕೋಣೆಗಳಿಲ್ಲದೆ ಮಕ್ಕಳು ನಿತ್ಯ ಶಾಲಾ ಮೈದಾನದಲ್ಲಿ ವಿದ್ಯಾಭ್ಯಾಸ ಮಾಡುವುದು ಅನಿವಾರ್ಯವಾಗಿದೆ. ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಿ ಎಂದು ಕೆ.ಆರ.ಐ.ಡಿ.ಎಲ್. ಇಲಾಖೆ ಕಾರ್ಯನಿರ್ವಾಹಕ ಅಭಿಯಂತರಿಗೆ, ಗುತ್ತಿಗೆದಾರರಿಗೆ ಇಂಜಿನಿಯರ್‌ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅವರು ಯಾರು ಕ್ಯಾರೆ ಎನ್ನುತ್ತಿಲ್ಲ. ಕೂಡಲೇ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಬೇಲೂರ ಕೆ.,ಗ್ರಾಪಂ ಮಾಜಿ ಉಪಾಧ್ಯಕ್ಷ ಮಹಮ್ಮದ ಪಾಷಾ ಹೇಳಿದರು.