ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಬ್ಯಾಂಕಿನ ಗ್ರಾಹಕರಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ಎಟಿಎಂ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ ಎಂದು ನೂತನ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಪೈಂಟ್ ರವಿ ತಿಳಿಸಿದರು.ಪಟ್ಟಣದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಧಿಕಾರ ಸ್ವೀಕರಿಸಿ ಮಾತನಾಡಿ, ಬೇಲೂರು ಅರ್ಬನ್ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಬ್ಯಾಂಕ್ ಆಗಿ ಹೆಸರುಗಳಿಸಿದ್ದು ಷೇರುದಾರರ ಹಾಗೂ ನಿರ್ದೇಶಕರು ಸೇರಿದಂತೆ ಸಿಬ್ಬಂದಿಯ ಸಹಕಾರದೊಂದಿಗೆ ಅಭಿವೃದ್ಧಿಗೆ ಶ್ರಮಿಸಲಾಗುವುದು. ಈಗಾಗಲೇ ಸಾಕಷ್ಟು ಷೇರುದಾರರಿಗೆ ಬ್ಯಾಂಕಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ವಾರ್ಷಿಕ ಮಹಾಸಭೆಗೆ ಬಾರದೆ ಮತ್ತು ಬ್ಯಾಂಕಿನಲ್ಲಿ ವ್ಯವಹಾರ ನಡೆಸದೆ ಇದ್ದ ಕಾರಣ ಈ ಬಾರಿ ನಡೆದ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಷೇರುದಾರರಿಗೂ ಸರಿಯಾದ ಸಮಯಕ್ಕೆ ಮಾಹಿತಿ ನೀಡಿ, ಡಿವಿಡೆಂಡ್ ಹಾಗೂ ಎಲ್ಲಾ ಸೌಲಭ್ಯಗಳನ್ನು ಕೊಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಮತ್ತು ಸೇರುದಾರರು ಮತ್ತು ಬ್ಯಾಂಕಿನ ಗ್ರಾಹಕರ ನಿರೀಕ್ಷೆಯಂತೆ ಶೀಘ್ರದಲ್ಲಿ ಎಟಿಎಂ ವ್ಯವಸ್ಥೆ ಕಲ್ಪಿಸುವುದು ಮತ್ತು ಹೊಸ ಶಾಖೆ ತೆರೆಯುವ ಉದ್ದೇಶವಿದ್ದು ಎಲ್ಲರ ಸಹಕಾರದಿಂದ ಬ್ಯಾಂಕಿನ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದರು.
ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಕೊರಟಗೆರೆ ಸತೀಶ್, ನಿರ್ದೇಶಕರಾದ ಬಿ.ಎಂ.ಪ್ರಸನ್ನ, ಬಿ.ಬಿ.ಶಿವರಾಜ್, ಎಸ್.ಕೆ.ನಾಗೇಶ್, ಬಿ.ಎಲ್.ಲಕ್ಷ್ಮಣ್ . ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ರಾಜು. ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಲಕ್ಷ್ಮಣಗೌಡ. ಆರ್ಕೆಸ್ಟ್ರಾ ರಾಮು. ಸತೀಶ್, ಬಸವರಾಜು, ಬೇಕರಿ ಮಂಜುನಾಥ್, ಪುಟ್ಟಸ್ವಾಮಿಗೌಡ, ಕರವೇ ವೆಂಕಟೇಶ್, ಖಾದರ್, ಮೋಹನ್, ವ್ಯವಸ್ಥಾಪಕ ಶಿವಶಂಕರ್, ತೀರ್ಥಕುಮಾರ್, ಸುರೇಶ್ ಇತರರು ಹಾಜರಿದ್ದರು.