ಸಾರಾಂಶ
ಯಲ್ಲಾಪುರ: ಮೆಣಸಿನ ಬೆಳೆಗೆ ಅವಶ್ಯಕತೆಗಿಂತ ಹೆಚ್ಚು ಗೊಬ್ಬರ ಕೊಡಬೇಕಾದ ಅವಶ್ಯಕತೆಯಿಲ್ಲ. ಬೇಕಾದರೆ ಎರಡು ಸಲ ಕೊಡಬಹುದು. ಮಳೆಗಾಲದ ಪ್ರಾರಂಭದಲ್ಲಿ ಕೊಡುವುದು ಹೆಚ್ಚು ಒಳ್ಳೆಯದು. ಅದರಿಂದಾಗಿ ಎಲೆಗಳು ಅಗಲವಾಗಿ ದಪ್ಪವಾಗಿ ಬೆಳೆಯುತ್ತವೆ ಎಂದು ಕೃಷಿ ವಿಜ್ಞಾನಿ ಡಾ. ವೇಣುಗೋಪಾಲ ತಿಳಿಸಿದರು.ಇತ್ತೀಚೆಗೆ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಪ್ರಗತಿಪರ ರೈತ ಸುಧೀರ್ ಬಲ್ಸೆಯವರ ತೋಟದಲ್ಲಿ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ ಇವರು ಆಯೋಜಿಸಿದ್ದ ಕ್ಷೇತ್ರೋತ್ಸವ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಆರ್ಥಿಕ ಸಬಲತೆಗೆ ಕಾಳುಮೆಣಸಿನ ಜತೆ ಕಾಫಿಯನ್ನೂ ಬೆಳೆಯುವುದು ರೈತರ ಆರ್ಥಿಕ ಸ್ಥಿತಿಗೆ ಸಹಕಾರಿಯಾಗಿದೆ. ಅಡಕೆ ಮರ ಎಷ್ಟಿದೆಯೋ ಅಷ್ಟೇ ಕಾಫಿ ಗಿಡಗಳನ್ನು ನೆಟ್ಟರೆ ಸಾಕು. ಅಡಕೆಯೊಂದಿಗೆ ಕಾಳುಮೆಣಸು, ಕಾಫಿ ಕೂಡ ಬೆಳೆಸಬೇಕು ಎಂದರು. ಸಾಗರದ ಪ್ರಗತಿಪರ ಕೃಷಿಕ ಅಮಾನುಲ್ಲಾ ಖಾನ ಮಾತನಾಡಿ, ಕೃಷಿಕರು ಒಂದೇ ಬೆಳೆಯ ಮೇಲೆ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಮಿಶ್ರ ಬೆಳೆ ಬೆಳೆಯುವುದು ಎಲ್ಲ ದೃಷ್ಟಿಯಿಂದ ಉತ್ತಮ. ಯಾವುದೇ ಬೆಳೆಯ ದರ ಕುಸಿತವಾದರೂ ಮಿಶ್ರಬೆಳೆಯಿಂದ ಆದಾಯ ಪಡೆಯಬಹುದು ಎಂದರು.ಮತ್ತೊಬ್ಬ ಪ್ರಗತಿಪರ ರೈತ ಶಿವಮೊಗ್ಗದ ಜೋಮಿ ಮ್ಯಾಥೊ, ವಿಜಯೇಂದ್ರ ಹೆಗಡೆ, ಶಿರಸಿ ಕೆವಿಕೆಯ ರೂಪಾ ಪಾಟೀಲ್, ಯಲ್ಲಾಪುರ ತೋಟಗಾರಿಕಾ ಇಲಾಖೆಯ ಅಧಿಕಾರಿ ಸುಭಾಸ್ ಹೆಗಡೆ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಶಿರಸಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಕಿರಣಕುಮಾರ ಕೆ.ಸಿ. ಉಮ್ಮಚಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ, ಕದಂಬ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ, ಡಾ. ಅಂಕೇಗೌಡ, ಸುಧೀರ್ ಬಲ್ಸೆ ಮೊದಲಾದವರು ಉಪಸ್ಥಿತರಿದ್ದರು. ಕದಂಬ ಸಂಸ್ಥೆಯ ವಿಶ್ವೇಶ್ವರ ಹೆಗಡೆ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.ನಿವೃತ್ತ ನೌಕರರ ಬೇಡಿಕೆ ಈಡೇರಿಕೆಗೆ ಮನವಿಯಲ್ಲಾಪುರ: ನಿವೃತ್ತ ನೌಕರರಿಗೆ ೭ನೇ ವೇತನ ಆಯೋಗದಲ್ಲಿ ಆಗಿರುವ ಆರ್ಥಿಕ ನಷ್ಟದ ಬೇಡಿಕೆ ಈಡೇರಿಸುವ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ, ಶಾಸಕ ಶಿವರಾಮ ಹೆಬ್ಬಾರ ಮತ್ತು ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.ಮನವಿ ನೀಡುವ ಸಂದರ್ಭದಲ್ಲಿ ನಿವೃತ್ತ ನೌಕರರ ವೇದಿಕೆಯ ಪ್ರಮುಖರಾದ ಎಸ್.ಟಿ. ಭಟ್ಟ, ಎಸ್.ಎಲ್. ಜಾಲಿಸತ್ಗಿ, ದಯಾನಂದ ನಾಯ್ಕ, ಆನಂದ ನಾಯ್ಕ, ದಿಗಂಬರ ವಿ. ಪಾವಸ್ಕರ, ಲೋಕೇಶ್ವರ ಬೋರ್ಕರ್, ಮಂಜುನಾಥ ರೇವಣಕರ್, ಶಿವರಾಮ್ ಹೆಗಡೆ, ಟಿ.ವಿ. ನಾಯ್ಕ, ಗಾಯತ್ರಿ ಭಟ್ಟ, ಸರಸ್ವತಿ ಹಿರೆಗಂಗೆ ಇತರರು ಉಪಸ್ಥಿತರಿದ್ದರು.