ಸಾರಾಂಶ
ಕಡೂರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ನಾಗಮೋಹನದಾಸ್ ಸಲ್ಲಿಸಿದ ವರದಿಯನ್ನು ತಿರುಚಿ ಬಂಜಾರ, ಕೊರಚ, ಕೊರಮ, ಭೋವಿ ಜನಾಂಗಗಳು ಸೇರಿದಂತೆ ಇತರೆ 63 ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿ ನಿಗಧಿ ಪಡಿಸಿ ಅನ್ಯಾಯ ಮಾಡಿರುವುದನ್ನು ವಿರೋಧಿಸಿ ಸೆ.10 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟಿಸಲಾಗುವುದು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣನಾಯ್ಕ
ಕನ್ನಡಪ್ರಭ ವಾರ್ತೆ ಕಡೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ನಾಗಮೋಹನದಾಸ್ ಸಲ್ಲಿಸಿದ ವರದಿಯನ್ನು ತಿರುಚಿ ಬಂಜಾರ, ಕೊರಚ, ಕೊರಮ, ಭೋವಿ ಜನಾಂಗಗಳು ಸೇರಿದಂತೆ ಇತರೆ 63 ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿ ನಿಗಧಿ ಪಡಿಸಿ ಅನ್ಯಾಯ ಮಾಡಿರುವುದನ್ನು ವಿರೋಧಿಸಿ ಸೆ.10 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟಿಸಲಾಗುವುದು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣನಾಯ್ಕ ತಿಳಿಸಿದರು. ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಜಾತಿಗಳನ್ನು ವಿಭಜಿಸಿ 50 ಕ್ಕೂ ಹೆಚ್ಚಿನ ಜಾತಿಗಳನ್ನು ಸೃಷ್ಠಿಸಿ ಸೇರಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಒಳ ಮೀಸಲಾತಿ ಖಂಡಿಸಿ ಸೆ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆವ ಬೃಹತ್ ಪ್ರತಿಭಟನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚಿನ ಸಮಾಜದ ಬಂಧುಗಳು ಪಾಲ್ಗೊಳ್ಳಲಿದ್ದೇವೆ ಎಂದರು. ಸಮಾಜದ ಹಿರಿಯ ಮುಖಂಡ ಬಿ.ಟಿ.ಗಂಗಾಧರನಾಯ್ಕ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರ ಘೊಷಿಸಿ ಮೀಸಲಾತಿಯಲ್ಲಿ ನಮ್ಮ ಜನಾಂಗದವರು ಅನ್ಯಾಯವಾಗಿದೆ ಎಂದು ತಿರಸ್ಕರಿಸಿದ್ದರು. ಆದರೆ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ಟಲ್ಲಿ ಒಳ ಮೀಸಲಾತಿ ನೀಡಿರುವ ಶೇ.5 ರಲ್ಲಿ ಕೊರಚ, ಕೊರಮ, ಭೋವಿ ಮತ್ತು ಬಂಜಾರ ಸೇರಿದಂತೆ ಇತರೆ 63 ಜಾತಿಗಳಿವೆ. ಹಿಂದಿನ ಸರ್ಕಾರಕ್ಕಿಂತ. ಆದರೆ ಈಗ ಸಿದ್ದರಾಮಯ್ಯನವರ ಸರಕಾರ ನೀಡಿರುವ ಅನುಪಾತದಲ್ಲಿ ಬಂಜಾರರಿಗೆ ಅನ್ಯಾಯವಾಗಿದೆ ಎಂದು ಆರೋಪ ಮಾಡಿದರು. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ನಾಗಮೋಹನ್ ದಾಸ್ ಅವರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಕೇವಲ ಮೂರು ತಿಂಗಳಲ್ಲಿ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸಮಾಜದವರು ಕೂಲಿಗಾಗಿ ದೂರದ ಮಹಾರಾಷ್ಟ್ರ, ಗೋವಾ ಹಾಗೂ ಕಾಫಿ ತೋಟಗಳಿಗೆ ತೆರಳಿದ್ದು ಅನೇಕ ಕುಟುಂಬಗಳು ಊರಿನಲ್ಲಿಯೇ ಇರಲಿಲ್ಲ. ಇಂತಹ ಸಮಯದಲ್ಲಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದ್ದಾರೆ ಎಂದು ದೂರಿದ ಅವರು ಸಿದ್ದರಾಮಯ್ಯ ಸರಕಾರ ಬಂಜಾರ ಜನಾಂಗಗಳಿಗೆ ಮೀಸಲಾತಿ ನೀಡುವಲ್ಲಿ ಮೋಸ ಮಾಡಿದೆ ಎಂದರು. ಸಾಮಾಜಿಕ,ಶೈಕ್ಷಣಿಕ ಮತ್ತು,ಆರ್ಥಿಕವಾಗಿ ಹಿಂದುಳಿದಿರುವ ನಮ್ಮ ಸಮಾಜದ ಪರವಾಗಿ ಓರ್ವ ಸಚಿವರು ಕ್ಯಾಬಿನೆಟ್ಟಲ್ಲಿ ಇಲ್ಲದಿರುವುದು ನಮ್ಮ ದುರಾದೃಷ್ಟ. ಇದೇ 10 ರಂದು ಬೆಂಗಳೂರಿಗೆ ತೆರಳಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ ಎಂದರು. ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಗೋವಿಂದಪುರದ ಮಂಜುನಾಥನಾಯ್ಕ, ಎಂ.ಕೋಡಿಹಳ್ಳಿ ರಾಜನಾಯ್ಕ, ಸುರೇಶ್ ರಾಥೋಡ್, ರಘು, ಕೃಷ್ಣಾನಾಯ್ಕ, ಜಯಂತ್, ಮಯೂರನಾಯ್ಕ ಮತ್ತು ತಿಮ್ಮಾನಾಯ್ಕ ಇದ್ದರು. 7ಕೆಕೆಡಿಯು1.ಕಡೂರು ತಾಲೂಕು ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮಣನಾಯ್ಕ, ಬಿ.ಟಿ.ಗಂಗಾಧರನಾಯ್ಕ, ಶ್ರೀನಿವಾಸ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.