ಸಾರಾಂಶ
ಕಂಟೋನ್ಮೆಂಟ್ (ದಂಡು) ರೈಲ್ವೇ ನಿಲ್ದಾಣದ ಮರು ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ 92 ದಿನಗಳ ಕಾಲ 41 ರೈಲುಗಳ ನಿಲುಗಡೆ ರದ್ದು ಮಾಡಲಾಗಿದೆ.
ಬೆಂಗಳೂರು : ಕಂಟೋನ್ಮೆಂಟ್ (ದಂಡು) ರೈಲ್ವೇ ನಿಲ್ದಾಣದ ಮರು ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ 92 ದಿನಗಳ ಕಾಲ 41 ರೈಲುಗಳ ನಿಲುಗಡೆ ರದ್ದು ಮಾಡಲಾಗಿದೆ.
ನಿಲ್ದಾಣದ ಒಂದು, ಎರಡನೇ ಪ್ಲಾಟ್‌ಫಾರ್ಮ್ ಸ್ಥಗಿತಗೊಳ್ಳಲಿರುವ ಹಿನ್ನೆಲೆ ಬಂದು ಹೋಗುವ ರೈಲುಗಳ ನಿಲುಗಡೆ ರದ್ದು ಮಾಡಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ನಿಲುಗಡೆ ರದ್ದಾದ ರೈಲುಗಳು
ಪ್ರತಿದಿನ ಸಂಚರಿಸುವ ಮೈಸೂರು- ಎಸ್ಎಂವಿಟಿ ಬೆಂಗಳೂರು ರೈಲು (06269) ಸೆ.19ರಿಂದ ಡಿ.19ರವರೆಗೆ ನಿಲುಗಡೆ ರದ್ದಾಗಿದೆ. ವಾರಕ್ಕೊಮ್ಮೆ ಸಂಚರಿಸುವ ಮೈಸೂರು ರೇಣಿಗುಂಟ (22135) ರೈಲು ಸೆ.20, ಡಿ. 13ರವರೆಗೆ ನಿಲ್ಲುವುದಿಲ್ಲ. 6 ದಿನಕ್ಕೊಮ್ಮೆ ಸಂಚರಿಸುವ ಕೆಎಸ್‌ಆರ್ ಬೆಂಗಳೂರು - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ (12028) ಸೆ.20ರಿಂದ ಡಿ.20ರವರೆಗೆ ರದ್ದಾಗಿದೆ.
ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ರೈಲು (12677), ಪ್ರತಿದಿನದ ಕೆಎಸ್‌ಆರ್ ಬೆಂಗಳೂರು - ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (12608), ಮುರ್ಡೇಶ್ವರ- ಎಸ್‌ಎಂವಿಟಿ ಬೆಂಗಳೂರು (16586), ಕೆಎಸ್‌ಆರ್ ಬೆಂಗಳೂರು- ಮಾರಿಕುಪ್ಪಂ (06396), ಕೆಎಸ್‌ಆರ್ ಬೆಂಗಳೂರು- ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ (06515), ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (06515), ಕೆಎಸ್‌ಆರ್ ಬೆಂಗಳೂರು- ಕೋಲಾರ (06387), ಕೆಎಸ್‌ಆರ್ ಬೆಂಗಳೂರು- ಭುವನೇಶ್ವರ (18464) ಸೆ.20ರಿಂದ ಡಿ.20ರವರೆಗೆ ನಿಲುಗಡೆ ರದ್ದಾಗಿದೆ.
ಕೆಎಸ್‌ಆರ್ ಬೆಂಗಳೂರು - ಜೋಲಾರಪೆಟ್ಟೈ (06551), ಕೆಎಸ್‌ಆರ್ ಬೆಂಗಳೂರು- ವೈಟ್‌ಫೀಲ್ಡ್ ( 01765) ಕೆಎಸ್‌ಆರ್ ಬೆಂಗಳೂರು- ಬಂಗಾರಪೇಟೆ (06561/06389), ಕೆಎಸ್‌ಆರ್ ಬೆಂಗಳೂರು - ಕುಪ್ಪಂ ( 06529), ಕೆಎಸ್‌ಆರ್ ಬೆಂಗಳೂರು- ಮಾರಿಕುಪ್ಪಂ ( 01775), ವಾರಕ್ಕೆರಡು ಬಾರಿ ಸಂಚರಿಸುವ ಮೈಸೂರು- ಜೈಪುರ ( 12975) ರೈಲು ಸೆ.21ರಿಂದ ಡಿ.19ರವರೆಗೆ ನಿಲ್ಲುವುದಿಲ್ಲ.
ಮೈಸೂರು- ಕುಚುವೇಲಿ (16315), ಮೈಸೂರು- ಕಾಚಿಗುಡ (12786) , ಕೆಎಸ್‌ಆರ್ ಬೆಂಗಳೂರು- ಧರ್ಮಾಪುರಿ, ಕೆಎಸ್‌ಆರ್ ಬೆಂಗಳೂರು- ನವದೆಹಲಿ (12627), ಕೆಎಸ್‌ಆರ್ ಬೆಂಗಳೂರು- ಸಿಎಸ್‌ಎಂಟಿ ಮುಂಬೈ (11302) , ಕೆಎಸ್ಆರ್ ಬೆಂಗಳೂರು- ಹಝುರ್ ಸಾಹೇಬ್ ನಾಂದೇಡ್ (16593) ಸೆ.20ರಿಂದ ಡಿ.20ರವರೆಗೆ ನಿಲುಗಡೆ ರದ್ದಾಗಿದೆ.