ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಜನ್ಮದಿನದ ನೆನಪಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿಗಳು, ಗಣ್ಯರು, ರೈತರು, ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲು ಎಂಟು ದತ್ತಿನಿಧಿಗಳನ್ನು ಸ್ಥಾಪನೆ ಮಾಡಲಾಗಿದೆ.

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಜನ್ಮದಿನದ ನೆನಪಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿಗಳು, ಗಣ್ಯರು, ರೈತರು, ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲು ಎಂಟು ದತ್ತಿನಿಧಿಗಳನ್ನು ಸ್ಥಾಪನೆ ಮಾಡಲಾಗಿದೆ.

ಕೃಷ್ಣ ಅವರ 93ನೇ ಜನ್ಮದಿನದ ಅಂಗವಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸೇರಿ ವಿವಿಧ ಶಾಸಕರಿಂದ ಎಸ್.ಎಂ.ಕೃಷ್ಣ ದತ್ತಿ‌ನಿಧಿ ಸ್ಥಾಪಿಸಲಾಗಿದೆ. ಠೇವಣಿ ಹಣವನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ಡಿಡಿ ಮೂಲಕ ರವಾನಿಸಲಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದತ್ತಿ ನಿಧಿ ವಿವರ:

1- ಕೃಷಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚೆಲುವರಾಯಸ್ವಾಮಿ: ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ (ಜಿಕೆವಿಕೆ) ಪ್ರಗತಿಪರ ರೈತನಿಗೆ ಪ್ರಶಸ್ತಿ (ದತ್ತಿನಿಧಿ ₹5 ಲಕ್ಷ),

2- ಸಚಿವ ಎನ್.ಚೆಲುವರಾಯಸ್ವಾಮಿ: ಕರ್ನಾಟಕ ಸಂಘದಿಂದ ಮಂಡ್ಯ ಸಮಾಜ ಸೇವೆಗಾಗಿ ಉತ್ತಮ ಸೇವಾ ಪ್ರಶಸ್ತಿ (ದತ್ತಿ ನಿಧಿ ₹5 ಲಕ್ಷ),

3- ಮದ್ದೂರು ಶಾಸಕ ಕೆ.ಎಂ.ಉದಯ್‌: ಮೈಸೂರು ವಿವಿಯಲ್ಲಿ ಚಿನ್ನದಪದಕ (ಗೋಲ್ಡ್ ಮೆಡಲ್) ವಿಜೇತರಾದ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ. (ದತ್ತಿ ನಿಧಿ ₹10 ಲಕ್ಷ),

4- ಶಾಸಕ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ: ಕಾನೂನು ವಿವಿಯಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗೆ ಚಿನ್ನದ ಪದಕ (ದತ್ತಿ ನಿಧಿ ₹5 ಲಕ್ಷ),

5- ಶಾಸಕ, ಚಾಮುಂಡೇಶ್ವರಿ ವಿದ್ಯುತ್‌ ನಿಗಮದ ಅದ್ಯಕ್ಷ ಎ.ಬಿ. ರಮೇಶ್ ಬಂಡಿಸಿದ್ದೇಗೌಡ: ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಪ್ರತಿ ವರ್ಷ ಒಬ್ಬರು ಉತ್ತಮ ಚಿತ್ರಕಲಾವಿದರಿಗೆ ನಗದು ಮತ್ತು ಪ್ರಶಸ್ತಿ ಪತ್ರ (ದತ್ತಿ ನಿಧಿ ₹5 ಲಕ್ಷ), 6- ಮಂಡ್ಯ ಶಾಸಕ ರವಿಕುಮಾರ್‌ ಗಣಿಗ: ಮಂಡ್ಯ ವಿವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗೆ ದತ್ತಿನಿಧಿಯಿಂದ ಚಿನ್ನದ ಪದಕ (ದತ್ತಿ ನಿಧಿ ₹5 ಲಕ್ಷ),

7 - ಕಾಂಗ್ರೆಸ್‌ ಮುಖಂಡ ಆರ್‌. ಚಂದ್ರು (ವೆಂಕಟರಮಣೇಗೌಡ): ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ವರ್ಷ ಒಬ್ಬ ಸಾಹಿತಿಗೆ ನಗದು, ಪ್ರಶಸ್ತಿ ಪತ್ರ (ದತ್ತಿನಿಧಿ ₹5 ಲಕ್ಷ),

8- ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ: ಮೈಸೂರು ರಾಮಕೃಷ್ಣ ಆಶ್ರಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗೆ ಪ್ರತಿ ವರ್ಷ ಪ್ರಥಮ ಸ್ಥಾನ ಪಡೆದವರಿಗೆ ಚಿನ್ನದ ಪದಕ. (ದತ್ತಿ ನಿಧಿ ₹5 ಲಕ್ಷ).