ಆರ್ಟ್ ಆಫ್ ಲಿವಿಂಗ್ ನಲ್ಲಿ ನಡೆದ ‘ಆಘಾತ ನಿವಾರಣಾ’ ಕಾರ್ಯಕ್ರಮ

| Published : Apr 06 2024, 07:17 AM IST

Art Of Living
ಆರ್ಟ್ ಆಫ್ ಲಿವಿಂಗ್ ನಲ್ಲಿ ನಡೆದ ‘ಆಘಾತ ನಿವಾರಣಾ’ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 5 ದಿನಗಳ ಕಾಲ ನಡೆದ ‘ನೋ ಮೈ ಇಂಡಿಯ’ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಬಿಹಾರ ಮತ್ತು ಛತ್ತೀಸ್‌ಘಡದಿಂದ ಆಗಮಿಸಿದ್ದ ಭಯೋತ್ಪಾದನೆಯಿಂದ ಶೋಷಿಸಲ್ಪಟ್ಟ ಕುಟುಂಬಗಳಿಗೆ ಸೇರಿದ 37 ಮಕ್ಕಳು ಪಾಲ್ಗೊಂಡಿದ್ದರು.

ಬೆಂಗಳೂರು :  ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ 5 ದಿನಗಳ ಕಾಲ ನಡೆದ ‘ನೋ ಮೈ ಇಂಡಿಯ’ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಬಿಹಾರ ಮತ್ತು ಛತ್ತೀಸ್‌ಘಡದಿಂದ ಆಗಮಿಸಿದ್ದ ಭಯೋತ್ಪಾದನೆಯಿಂದ ಶೋಷಿಸಲ್ಪಟ್ಟ ಕುಟುಂಬಗಳಿಗೆ ಸೇರಿದ 37 ಮಕ್ಕಳು ಪಾಲ್ಗೊಂಡಿದ್ದರು.

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್, ಕೇಂದ್ರ ಕೌಟುಂಬಿಕ ವ್ಯವಹಾರಗಳ ಸಚಿವಾಲಯ, ಕೋಮು ಸಾಮರಸ್ಯದ ರಾಷ್ಟ್ರೀಯ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿಂಸೆ ಹಾಗೂ ಭಯೋತ್ಪಾದನೆಯಿಂದ ಶೋಷಿಸಲ್ಪಟ್ಟ ಕುಟುಂಬಗಳಿಗೆ ಸೇರಿದ ಈ 37 ಮಕ್ಕಳಲ್ಲಿ ಕೆಲವರು ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ.

‘ನೋ ಮೈ ಇಂಡಿಯಾ’ಕಾರ್ಯಕ್ರಮದಲ್ಲಿ ಮಕ್ಕಳು ಗತ ಜೀವನದ ಕಹಿ ನೆನಪುಗಳನ್ನು ನಿಭಾಯಿಸಲು ಕೆಲವು ತಂತ್ರಗಳನ್ನು ಕಲಿತುಕೊಂಡರು. ಮನ:ಶಾಂತಿ ಪಡೆಯಲು ಅವರಿಗೆ ಈ ಕಾರ್ಯಕ್ರಮ ಸಹಾಯ ಕಲ್ಪಿಸಿತು. ಈ ಮಕ್ಕಳಲ್ಲಿ ರಾಷ್ಟ್ರೀಯ ಐಕ್ಯತೆಯ ಭಾವ, ಭ್ರಾತೃತ್ವ ಹಾಗೂ ಕೋಮು ಸೌಹಾರ್ದವನ್ನು ತುಂಬುವಲ್ಲಿ ಸಹಾಯ ಮಾಡಿತು. ಮಕ್ಕಳು ತಮ್ಮ ಆಘಾತಕರ ಜೀವನದಿಂದ ಹೊರ ಬಂದು, ದೇಶದ ಸಾಮಾನ್ಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ತಿಳಿಯಲು ಇದೊಂದು ವೇದಿಕೆ ಕಲ್ಪಿಸಿತು.

ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ, ಜಾಗತಿಕ ಮಾನವತಾವಾದಿ, ಗುರುದೇವ್ ಶ್ರೀ ಶ್ರೀ ರವಿಶಂಕರರ ದೃಷ್ಟಿಕೋನವಾದ ಹಿಂಸಾಮುಕ್ತ, ಒತ್ತಡರಹಿತವಾದ ನವಜೀವನವನ್ನು ಈ ಮಕ್ಕಳು ಆರಂಭಿಸಲು ವೇದಿಕೆಯೊಂದನ್ನು ಕಲ್ಪಿಸಿತು. ಈ ಕಾರ್ಯಕ್ರಮದ ಮುಖ್ಯ ಪ್ರಕ್ರಿಯೆಯೆಂದರೆ ‘ಸುದರ್ಶನ ಕ್ರಿಯೆ’. ಇದು ಶಕ್ತಿಶಾಲಿಯಾದ, ಲಯಬದ್ಧವಾದ ಉಸಿರಾಟದ ಪ್ರಕ್ರಿಯೆಯಾಗಿದೆ. ನಿತ್ಯ ಇದನ್ನು ಅಭ್ಯಾಸ ಮಾಡುವುದರಿಂದ ದೇಹದಲ್ಲಿ ಉತ್ಪಾದನೆಯಾಗುವ ಒತ್ತಡದ ಹಾರ್ಮೋನುಗಳು ಕುಗ್ಗುತ್ತವೆ. ಮಾನಸಿಕ ನೆಮ್ಮದಿ, ಸಂತೋಷ ಹೆಚ್ಚುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸರ್ಕಾರದ ಕೌಟುಂಬಿಕ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪಿ.ವಿ. ನಾಯರ್, ಐದು ದಿವಸಗಳ ಹಿಂದೆ ನಾವು ಕರೆದುಕೊಂಡು ಬಂದಿದ್ದು ಇದೇ ಮಕ್ಕಳು ಎಂದು ನಂಬಲು ನಮಗೇ ಸಾಧ್ಯವಾಗುತ್ತಿಲ್ಲ. ಈ ಮಕ್ಕಳು ಹಿಂಸೆಯ ಜೀವನದಿಂದ ಮುಕ್ತರಾಗಲು ಇದು ವೇದಿಕೆಯನ್ನು ಕಲ್ಪಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಶ್ಮೀರದ ಶ್ರೀನಗರದಿಂದ ಬಂದಿದ್ದ ಓರ್ವ ಶಿಬಿರಾರ್ಥಿ ಜೆಹ್ರಾನ್ ಅಹ್ಮದ್ ಮಾತನಾಡಿ, ಕಾರ್ಯಕ್ರಮದ ನಂತರ ಧ್ಯಾನದ ಬಗ್ಗೆ ಕಲಿತೆ. ನನ್ನಲ್ಲಿ ಒತ್ತಡ ಮತ್ತು ಆತಂಕದ ಮಟ್ಟ ಕಡಿಮೆಯಾಗಿದೆ. ವಿಶ್ವಾಸ ಹೆಚ್ಚಿದೆ ಎಂದು ಹರ್ಷ ವ್ಯಕ್ತಪಡಿಸಿದರು.