ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ನಟಿ ರಚಿತಾ ರಾಮ್ ಭೇಟಿಯಾಗಿ ಗುರುವಾರ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ವೇಳೆ ರಾಯರ ಆರಾಧನೆ ಇರುವ ಕಾರಣ ರಾಘವೇಂದ್ರ ಸ್ವಾಮಿಗಳ ಪ್ರಸಾದ ನೀಡಿದ್ದಾರೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ನಟಿ ರಚಿತಾ ರಾಮ್ ಭೇಟಿಯಾಗಿ ಗುರುವಾರ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ವೇಳೆ ರಾಯರ ಆರಾಧನೆ ಇರುವ ಕಾರಣ ರಾಘವೇಂದ್ರ ಸ್ವಾಮಿಗಳ ಪ್ರಸಾದ ನೀಡಿದ್ದಾರೆ.
ದರ್ಶನ್ ಭೇಟಿಗೆ ಜೈಲಧಿಕಾರಿಗಳ ಅನುಮತಿ ಪಡೆದಿದ್ದ ಅವರು, ಅಂತೆಯೇ ದರ್ಶನ್ ಆಪ್ತ, ಮಂಡ್ಯ ಜಿಲ್ಲೆ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಜತೆ ಜೈಲಿಗೆ ತೆರಳಿ ತಮ್ಮ ಗುರುವನ್ನು ಭೇಟಿ ಆದರು.
ಚಿತ್ರರಂಗಕ್ಕೆ ರಚಿತಾರನ್ನು ದರ್ಶನ್ ಪರಿಚಯಿಸಿದ್ದರು. ಈ ಹತ್ಯೆ ಪ್ರಕರಣದಲ್ಲಿ ಬಂಧನವಾದಾಗ ದರ್ಶನ್ ಬೆಂಬಲಕ್ಕೆ ನಿಂತಿದ್ದ ರಚಿತಾ ಅವರು, ದರ್ಶನ್ ಅವರನ್ನು ತಮ್ಮ ಗುರು ಎಂದು ಹೇಳಿದ್ದರು.
ಇನ್ನು ತಮ್ಮ ಗುರುವಿನ ಭೇಟಿಗೂ ಮುನ್ನ ರಾಯರ ಆರಾಧನೆ ನಿಮಿತ್ತ ಪೂರ್ಣಪ್ರಜ್ಞ ಲೇಔಟ್‌ನಲ್ಲಿರು