ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಂದು ಕಿರುಕುಳ ಆರೋಪ - ವಿಡಿಯೋ ಮೂಲಕ ಸಂತ್ರಸ್ತೆ ಅಳಲು

| Published : Jan 06 2025, 10:03 AM IST

KSRP

ಸಾರಾಂಶ

ದೂರು ನೀಡಲು ಬಂದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಬಂಧನಕ್ಕೊಳಗಾಗಿದ್ದ ಡಿವೈಎಸ್ಪಿ ರಾಮಚಂದ್ರಪ್ಪ ಅವರು ಮತ್ತೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ತುಮಕೂರು : ದೂರು ನೀಡಲು ಬಂದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಬಂಧನಕ್ಕೊಳಗಾಗಿದ್ದ ಡಿವೈಎಸ್ಪಿ ರಾಮಚಂದ್ರಪ್ಪ ಅವರು ಮತ್ತೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ರಾಮಚಂದ್ರಪ್ಪನಿಂದ ದೌರ್ಜನ್ಯಕ್ಕೆ ಒಳಗಾದ ಮತ್ತೊಬ್ಬ ಸಂತ್ರಸ್ತೆ ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದು, ‘ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿಗೆ ಸಾಲ ನೀಡಿ ಹಣ ಕಳೆದುಕೊಂಡಿದ್ದೆ. 

ಈ ಬಗ್ಗೆ ದೂರು ಪರಿಶೀಲಿಸುವಂತೆ ಮಹಿಳಾ ಆಯೋಗದಿಂದ ತುಮಕೂರು ಎಸ್ಪಿ ಕಚೇರಿಗೆ ಪತ್ರ ಬಂದಿತ್ತು. ಈ ಸಂಬಂಧ ಠಾಣೆಗೆ ದೂರು ಕೊಡಲು ಬಂದಾಗ ರಾಮಚಂದ್ರಪ್ಪ ಅನುಚಿತವಾಗಿ ವರ್ತಿಸಿದ್ದರು. ಡಿವೈಎಸ್ಪಿ ವರ್ತನೆಗೆ ಹೆದರಿ ದೂರು ಕೊಡುವುದನ್ನೇ ಬಿಟ್ಟು ಬಂದಿದ್ದೆ’ ಎಂದು ಆರೋಪಿಸಿದ್ದಾರೆ.