ಬೆಂಗಳೂರು : ಹಬ್ಬಕ್ಕೆ ಬೇಕಾಬಿಟ್ಟಿ ಟಿಕೆಟ್‌ ದರ ಹೆಚ್ಚಿಸಿದರೆ ಕಪ್ಪು ಪಟ್ಟಿಗೆ - ಸಾರಿಗೆ ಇಲಾಖೆ

| Published : Sep 05 2024, 08:59 AM IST

bihar bus

ಸಾರಾಂಶ

ಹಬ್ಬ ಹಾಗೂ ರಜಾ ದಿನಗಳಂದು ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದ್ದು, ಅದರ ಲಾಭ ಪಡೆಯಲು ಖಾಸಗಿ ಬಸ್‌ ಮಾಲೀಕರು ಮಾಮೂಲಿ ದಿನಗಳಿಗಿಂತ ಎರಡು ಪಟ್ಟು ಹೆಚ್ಚಿನ ದರವನ್ನು ಪಡೆಯುತ್ತಿದ್ದಾರೆ.

 ಬೆಂಗಳೂರು : ಹಬ್ಬ ಹಾಗೂ ರಜಾ ದಿನಗಳಂದು ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದ್ದು, ಅದರ ಲಾಭ ಪಡೆಯಲು ಖಾಸಗಿ ಬಸ್‌ ಮಾಲೀಕರು ಮಾಮೂಲಿ ದಿನಗಳಿಗಿಂತ ಎರಡು ಪಟ್ಟು ಹೆಚ್ಚಿನ ದರವನ್ನು ಪಡೆಯುತ್ತಿದ್ದಾರೆ.

ಈ ಬಗ್ಗೆ ಪ್ರತಿ ಹಬ್ಬ ಹಾಗೂ ರಜಾ ದಿನದಂದು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಈಗ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆ ಮಾಡಿದರೆ ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಲಾಗಿದೆ.

ಒಮ್ಮೆ ಬಸ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಫಿಟ್‌ನೆಸ್‌ ಪ್ರಮಾಣಪತ್ರ (ಎಫ್‌ಸಿ) ದೊರೆಯುವುದಿಲ್ಲ ಹಾಗೂ ಬಸ್‌ಗೆ ನೀಡಲಾಗಿರುವ ಪರವಾನಗಿಯೂ ರದ್ದಾಗಲಿದೆ. ಬಸ್‌ಗಳು ನಿಗದಿ ಮಾಡಿರುವ ಪ್ರಯಾಣ ದರ ಪರಿಶೀಲನೆಗಾಗಿ ಸಾರಿಗೆ ಇಲಾಖೆಯು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ಖಾಸಗಿ ಬಸ್‌ಗಳ ಸುಲಿಗೆ ಕುರಿತಂತೆ ಪ್ರಯಾಣಿಕರು ದೂರು ನೀಡಲು ಸಹಾಯವಾಣಿ ತೆರೆಯುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.