ಸರ್ಕಾರಿ ನೌಕರರಿಗೆ ಬಂಪರ್‌: ಡಿಎ ಶೇ.2.25ರಷ್ಟು ಹೆಚ್ಚಳ - ಶೇ. 8.50 ರಿಂದ ಶೇ.10.75ಕ್ಕೆ ಏರಿಕೆ

| Published : Nov 28 2024, 12:14 PM IST

Vidhan soudha

ಸಾರಾಂಶ

ರಾಜ್ಯ ಸರ್ಕಾರಿ ನೌಕರರಿಗೆ ಶೇ. 2.25ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ.1ರಿಂದ ಅನ್ವಯವಾಗುವಂತೆ ಶೇ. 8.50 ರಿಂದ ಶೇ.10.75ಕ್ಕೆ ಹೆಚ್ಚಿಸಲಾಗಿದೆ.

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಶೇ. 2.25ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ.1ರಿಂದ ಅನ್ವಯವಾಗುವಂತೆ ಶೇ. 8.50 ರಿಂದ ಶೇ.10.75ಕ್ಕೆ ಹೆಚ್ಚಿಸಲಾಗಿದೆ.

ಇದೇ ವೇಳೆ ನಿವೃತ್ತಿ ವೇತನದಾರರಿಗೂ ಸಹ ಇದೇ ರೀತಿಯ ಹೆಚ್ಚಳವನ್ನು ಸರ್ಕಾರ ಅನುಮೋದಿಸಿದೆ. ರಾಜ್ಯ ಸರ್ಕಾರ ರಚಿಸಿದ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳಡಿಯಲ್ಲಿ ಪರಿಷ್ಕರಿಸಲಾಗಿದೆ. ತುಟ್ಟಿಭತ್ಯೆ ಬಾಕಿ ಮೊತ್ತವನ್ನು ಡಿಸೆಂಬರ್ ತಿಂಗಳ ವೇತನದಲ್ಲಿ ಸೇರಿಸಿ ನೀಡಲಾಗುವುದು. ಯಾವುದೇ ಉದ್ದೇಶಕ್ಕಾಗಿ ತುಟ್ಟಿಭತ್ಯೆಯನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಹಜವಾಗಿ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬಳಿಕ ರಾಜ್ಯ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸುತ್ತದೆ. ಕೇಂದ್ರ ಸರ್ಕಾರ ಅಕ್ಟೋಬರ್‌ನಲ್ಲಿಯೇ ತುಟ್ಟಿ ಭತ್ಯೆ ಹೆಚ್ಚಳ ಮಾಡಿತ್ತು. ಆದರೆ ರಾಜ್ಯ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಕುರಿತು ಆದೇಶ ಹೊರಡಿಸಿರಲಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿದ್ದ ಮನವಿಗೆ ಸರ್ಕಾರ ಸ್ಪಂದಿಸಿದೆ.

ತುಟ್ಟಿಭತ್ಯೆ ಹೆಚ್ಚಳ ಕುರಿತು ತೀರ್ಮಾನ ಕೈಗೊಂಡ ಕರ್ನಾಟಕ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಅಭಿನಂದನೆ ಸಲ್ಲಿಸಿದೆ.