ಸಾರಾಂಶ
''ಆಪರೇಷನ್ ಸಿಂದೂರ'' ಬಗ್ಗೆ ಸೇನಾಪಡೆಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ ತಿಳಿಸಲು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಂದೂರ ಇಟ್ಟು ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.
ಬೆಂಗಳೂರು : ''ಆಪರೇಷನ್ ಸಿಂದೂರ'' ಬಗ್ಗೆ ಸೇನಾಪಡೆಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಮೆಚ್ಚುಗೆ ತಿಳಿಸಲು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಂದೂರ ಇಟ್ಟು ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.
ಈ ವೇಳೆ ಸುದ್ದಿಗಾರರು, ‘ಏನ್ ಸರ್ ದೊಡ್ಡ ಸಿಂದೂರ ಇಟ್ಟಿದ್ದೀರಿ ತುಂಬಾ ಚೆನ್ನಾಗಿದೆ’ ಎಂದು ಹೇಳಿದರು. ಆಗ ಸಿದ್ದರಾಮಯ್ಯ ಅವರು, ‘ಕೆ.ಎಂ.ನಾಗರಾಜ್ ಆಹ್ವಾನ ಮಾಡಿದ್ದರು. ಹೀಗಾಗಿ ಬೆಳಗ್ಗೆ ಪಟಾಲಮ್ಮ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ದೇವರ ದರ್ಶನ ಮಾಡಿದ ನಂತರ ಸಿಂದೂರ ಇಟ್ಟುಕೊಂಡು ಬಂದಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.