ದೇವನಹಳ್ಳಿ: ದೇಶದ ಉಜ್ವಲ ಭವಿಷ್ಯ ರೂಪಿಸುವ ಶಕ್ತಿ ಯುವಪಡೆಗಿದ್ದು, ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಗ್ರಾಮಾಂತರ ಶಿಕ್ಷಕರ ತರಬೇತಿ ಸಂಸ್ಥೆಯ ೨೦೦೧-೨೦೦೩ನೇ ಸಾಲಿನ ಪ್ರಶಿಕ್ಷಣಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿದಾಗ ಮಾತ್ರ ಅವರ ಶಿಕ್ಷಕ ವೃತ್ತಿಗೆ ಗೌರವ ಸಿಗಲಿದೆ. ಶಿಕ್ಷಣಾರ್ಥಿಗಳ ಕರ್ತವ್ಯನಿಷ್ಠೆ, ಸಂಸ್ಕಾರ, ಬದುಕಿನ ಮೌಲ್ಯಗಳನ್ನು ಮಕ್ಕಳಿಗೆ ನೀಡಿದ ಶಿಕ್ಷಣ ಮತ್ತು ಸಮಾಜಮುಖಿ ಕಾರ್ಯಗಳು ವಿದ್ಯಾರ್ಥಿಗಳು ಗುರುಗಳಿಗೆ ಸಲ್ಲಿಸುವ ಗೌರವ ಎಂದರು.ಶ್ರೀಕೃಷ್ಣ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಆರ್.ಬಿ.ದೇಸಾಯಿ ಮಾತನಾಡಿ, ಹಿಂದಿನ ಶಿಕ್ಷಣ ವ್ಯವಸ್ಥೆ ಈಗಿನ ಶಿಕ್ಷಣ ವ್ಯವಸ್ಥೆಗು ಅಜಗಜಾಂತರ ವ್ಯತ್ಯಾಸವಿದೆ. ಕಾಲ ಮುಂದುವರಿದಂತೆ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೈಟೆಕ್ ಆಗಿದ್ದಾರೆ. ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ನೀಡಬೇಕು. ಗುರುಗಳ ಮಾರ್ಗದರ್ಶನ ಪಡೆದರೆ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲಿದ್ದಾರೆ. ೨೩ ವರ್ಷಗಳ ನಂತರ ವಿದ್ಯಾರ್ಥಿಗಳು ಎಲ್ಲಾ ಗುರುಗಳನ್ನು ಒಂದೆಡೆ ಸೇರಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಾಗಮ ಮಾಡಿರುವುದು ಸಂತೋಷವಾಗಿದೆ. ಇದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಉಪನ್ಯಾಸಕರನ್ನು ಗೌರವಿಸಿದರು. ಉಪನ್ಯಾಸಕರಾದ ಬಿ.ಎನ್.ಕೃಷ್ಣಪ್ಪ, ವೆಂಕಟೇಶಗೌಡ, ರಾಮಸ್ವಾಮಿ, ಈಶ್ವರಪ್ಪ, ವೈ.ವಿ.ಚಂದ್ರಶೇಖರ್, ಪಾರ್ವತಮ್ಮ, ರಾಘವೇಂದ್ರ ದೇಸಾಯಿ, ಮಂಜುನಾಥ್, ಲಕ್ಷ್ಮೀಕಾಂತ್, ಸಾವಿತ್ರಮ್ಮ ಪ್ರಶಿಕ್ಷಣಾರ್ಥಿಗಳಾದ ವೀಣಾ.ವೈಪಿ, ಸಿದ್ದೇಶ್.ಬಿ.ಎನ್, ದೀಪ.ಡಿ.ಸಿ, ಚನ್ನೇಶಪ್ಪ.ಕೆ.ಎಚ್, ಭಾರತಿ, ಸ್ವಾಮಿ.ಕೆ.ವೈ.ಎಸ್, ಉಮಾ, ಅನಂದ್, ಶ್ರೀಧರ್, ಹನುಮಂತಪ್ಪ.ಡಿ.ಎಂ. ಹರೀಶಕುಮಾರ್.ಕೆ.ಟಿ, ಗೋವಿಂದ.ಬಿ, ಮಮತ, ಪುಷ್ಪ, ಅಶ್ವಿನಿ, ವರಲಕ್ಷ್ಮೀ, ಯೋಗೇಶ್ವರಪ್ಪ, ಕೃಷ್ಣ, ತಿಮ್ಮೇಶ್, ಆನಂದ್, ಶ್ರೀಧರ್, ರಾಮಮೂರ್ತಿ ಸುನಂದ ಮತ್ತಿತರರು ಉಪಸ್ಥಿತರಿದ್ದರು.೩ ದೇವನಹಳ್ಳಿ ಚಿತ್ರಸುದ್ದಿ:೦೧
ಗ್ರಾಮಾಂತರ ಶಿಕ್ಷಕರ ತರಬೇತಿ ಸಂಸ್ಥೆಯ ೨೦೦೧-೨೦೦೩ನೇ ಸಾಲಿನ ಪ್ರಶಿಕ್ಷಣಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸಕರನ್ನು ಗೌರವಿಸಿದರು.