ಸಾರಾಂಶ
ಬಿಬಿಎಂಪಿಯ ಬಾಗಲಗುಂಟೆ ವಾರ್ಡ್ ಸಿಡೇದಹಳ್ಳಿಯ ಸೌಂದರ್ಯ ಲೇಔಟ್‌ನಲ್ಲಿರುವ 7 ಅಂತಸ್ತಿನ ಕಟ್ಟಡಕ್ಕೆ ಕಟ್ಟಡ ಕಟ್ಟುವ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಜಲಮಂಡಳಿಯಿಂದ ಸ್ಯಾನಿಟರಿ ಕನೆಕ್ಷನ್ ಅನ್ನು ಸಂಪರ್ಕ ಕಡಿತಗೊಳಿಸಲಾಗಿದೆ.
ದಾಸರಹಳ್ಳಿ : ಬಿಬಿಎಂಪಿಯ ಬಾಗಲಗುಂಟೆ ವಾರ್ಡ್ ಸಿಡೇದಹಳ್ಳಿಯ ಸೌಂದರ್ಯ ಲೇಔಟ್‌ನಲ್ಲಿರುವ 7 ಅಂತಸ್ತಿನ ಕಟ್ಟಡಕ್ಕೆ ಕಟ್ಟಡ ಕಟ್ಟುವ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಜಲಮಂಡಳಿಯಿಂದ ಸ್ಯಾನಿಟರಿ ಕನೆಕ್ಷನ್ ಅನ್ನು ಸಂಪರ್ಕ ಕಡಿತಗೊಳಿಸಲಾಗಿದೆ.
ಈ ಕುರಿತು 2023ರಲ್ಲಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ನಿರ್ಮಾಣ ಕಾರ್ಯ ಮುಂದುವರೆದಿತ್ತು ಎಂದು ದೂರುದಾರ ಸೌಂದರ್ಯ ಭರತ್ ತಿಳಿಸಿದರು.
ನಿಯಮ ಉಲ್ಲಂಘಿಸಿ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ದೂರು ನೀಡಿದರೂ ಬಿಬಿಎಂಪಿ ಇಲ್ಲಿಯವೆರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಬಿಎಂಪಿ ಕೆಲ ದಿನಗಳಿಂದೆ ನನ್ನ ದೂರಿನ ಮೇರೆಗೆ ಕ್ರಮ ಕೈಗೊಂಡು ನೋಟಿಸ್ ಕಳುಹಿಸಿದೆ. ಬೆಂಗಳೂರಿನ ಜಲಮಂಡಳಿಯಿಂದ ಸ್ಯಾನಿಟರಿ ಕನೆಕ್ಷನ್ ಸಂಪರ್ಕವನ್ನು ಕಡಿತಗೊಳಿಸುವಂತೆ ಪಾಲಿಕೆಯೂ ನಿರ್ದೇಶನ ನೀಡಿದೆ ಎಂದು ಭರತ್ ಹೇಳಿದರು.
ಜಲಮಂಡಳಿ ಅಧಿಕಾರಿಗಳು ಶನಿವಾರ ಕಟ್ಟಡಕ್ಕೆ ಭೇಟಿ ನೀಡಿ ಸ್ಯಾನಿಟರ್ ಕನೆಕ್ಷನ್‌ಅನ್ನು ಕಡಿತಗೊಳಿಸಿದ್ದಾರೆ.
ಅನಧಿಕೃತ ಕಟ್ಟಡದ ಮಾಲೀಕ ಪಿ ಮಂಜಪ್ಪ. ಅವರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಉತ್ತರ ನೀಡುವಂತೆ ಕೋರಿದ್ದರು. ಅವರು ಸ್ಪಂದಿಸದ ಕಾರಣ ಕಟ್ಟಡದ ಜಲಮಂಡಳಿ ಅಧಿಕಾರಿಗಳು ಸ್ಯಾನಿಟರಿ ಕನೆಕ್ಷನ್ ಅನ್ನು ಕಡಿತಗೊಳಿಸಿದರು ಎಂದು ಭರತ್ ತಿಳಿಸಿದರು.
ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಐಶ್ವರ್ಯ ಮಾತನಾಡಿ , ಬಿಬಿಎಂಪಿಯಿಂದ ಬಂದಿರುವ ಪತ್ರದ ಆಧಾರದ ಮೇಲೆ ವಾರದೊಳಗೆ ಉತ್ತರ ನೀಡುವಂತೆ ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದು ಮಾಲೀಕ ಪಿ.ಮಂಜಪ್ಪ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಶನಿವಾರ ಬಡಾವಣೆಗೆ ತಂಡವನ್ನು ಕಳುಹಿಸಿ ಕಟ್ಟಡಕ್ಕೆ ಜಲಮಂಡಳಿಯ ಸ್ಯಾನಿಟರಿ ಕನೆಕ್ಷನ್ ಸಂಪರ್ಕವನ್ನು ಕಡಿತಗೊಳಿಸಿದ್ದೇವೆ’ ಎಂದು ತಿಳಿಸಿದರು.