ರಾಜ್ಯ ಸರ್ಕಾದಿಂದ ಫೀ ನಿಗದಿ : ಸರ್ಕಾರಿ ನರ್ಸಿಂಗ್‌ ಸೀಟಿಗೆ ₹10 000, ಖಾಸಗಿ ಸೀಟಿಗೆ ₹1.4 ಲಕ್ಷ ಶುಲ್ಕ ನಿಗದಿ

| Published : Jul 30 2024, 09:46 AM IST

Nurse

ಸಾರಾಂಶ

  ಖಾಸಗಿ ನರ್ಸಿಂಗ್‌ ಕಾಲೇಜುಗಳಲ್ಲಿನ ಶೇ.20ರಷ್ಟು ಸರ್ಕಾರಿ ಕೋಟಾದ ಸೀಟುಗಳಿಗೆ 10 ಸಾವಿರ ರು. ಮತ್ತು ಆಡಳಿತ ಮಂಡಳಿ ಕೋಟಾ ಸೀಟುಗಳಿಗೆ 1 ಲಕ್ಷ ರು.ನಿಂದ 1.40 ಲಕ್ಷ ರು.ವರೆಗೆ ಶುಲ್ಕ ನಿಗದಿ 

ಬೆಂಗಳೂರು: ರಾಜ್ಯ ಸರ್ಕಾರ ಖಾಸಗಿ ನರ್ಸಿಂಗ್‌ ಕಾಲೇಜುಗಳಲ್ಲಿನ 2025-26ನೇ ಸಾಲಿನ ಬಿ.ಎಸ್ಸಿ ನರ್ಸಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಶುಲ್ಕ ನಿಗದಿಪಡಿಸಿದೆ. ಖಾಸಗಿ ನರ್ಸಿಂಗ್‌ ಕಾಲೇಜುಗಳಲ್ಲಿನ ಶೇ.20ರಷ್ಟು ಸರ್ಕಾರಿ ಕೋಟಾದ ಸೀಟುಗಳಿಗೆ 10 ಸಾವಿರ ರು. ಮತ್ತು ಆಡಳಿತ ಮಂಡಳಿ ಕೋಟಾ ಸೀಟುಗಳಿಗೆ 1 ಲಕ್ಷ ರು.ನಿಂದ 1.40 ಲಕ್ಷ ರು.ವರೆಗೆ ಶುಲ್ಕ ನಿಗದಿ ಮಾಡಿದೆ. 

ಸರ್ಕಾರಿ ನರ್ಸಿಂಗ್‌ ಕಾಲೇಜುಗಳ ಸೀಟುಗಳಿಗೂ ಕೂಡ 10 ಸಾವಿರ ರು. ಪ್ರವೇಶ ಶುಲ್ಕ ನಿಗದಿಪಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನರ್ಸಿಂಗ್ ಕಾಲೇಜುಗಳು ಆಫ್ ಕ್ಯಾಂಪಸ್ ರೀತಿಯಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕಳೆದ ವರ್ಷದಿಂದ ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಸೀಟು ಹಂಚಿಕೆ ಮಾಡಲು ಮುಂದಾಗಿದೆ. ಈ ವರ್ಷದ ಸಿಇಟಿಯಲ್ಲಿ 2.28 ಲಕ್ಷ ವಿದ್ಯಾರ್ಥಿಗಳು ಬಿ.ಎಸ್ಸಿ ನರ್ಸಿಂಗ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಕರ್ನಾಟಕ ರಾಜ್ಯ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಅಲೈಡ್ ಹೆಲ್ತ್ ಸೈನ್ಸ್ ವಿದ್ಯಾಸಂಸ್ಥೆ, ನವ ಕಲ್ಯಾಣ ಕರ್ನಾಟಕ ನರ್ಸಿಂಗ್ ಇನ್‌ಸ್ಟಿಟ್ಯೂಟ್ ಮ್ಯಾನೇಜ್‌ಮೆಂಟ್ ಆಸೋಸಿಯೇಷನ್ ಜೊತೆ ಮಾತುಕತೆ ನಡೆಸಿದ ವೈದ್ಯಕೀಯ ಶಿಕ್ಷಣ ಇಲಾಖೆ ಶುಲ್ಕ ಒಪ್ಪಂದ ಮಾಡಿಕೊಂಡಿದೆ.

- ಖಾಸಗಿ ನರ್ಸಿಂಗ್‌ ಕಾಲೇಜುಗಳ ಸುಲಿಗೆಗೆ ಸರ್ಕಾರ ಬ್ರೇಕ್‌