ತಾವರೆಗೆರೆಯ ಹಳ್ಳಿಕಾರ್ ತಳಿಯ ಎತ್ತು ದಾಖಲೆ ಬೆಲೆಗೆ ಮಾರಾಟ : ತಮಿಳುನಾಡಿನ ರೈತರ ಖರೀದಿ

| Published : Nov 28 2024, 11:18 AM IST

When to avoid money transactions ashubh time

ಸಾರಾಂಶ

ನಗರದ ತಾವರೆಗೆರೆ ಬಡಾವಣೆಯ ಹಳ್ಳಿಕಾರ್ ತಳಿಯ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿದ್ದು, ತಮಿಳುನಾಡಿನ ರೈತರು ಖರೀದಿಸಿದ್ದಾರೆ.

ಮಂಡ್ಯ: ನಗರದ ತಾವರೆಗೆರೆ ಬಡಾವಣೆಯ ಹಳ್ಳಿಕಾರ್ ತಳಿಯ ಎತ್ತು ದಾಖಲೆ ಬೆಲೆಗೆ ಮಾರಾಟವಾಗಿದ್ದು, ತಮಿಳುನಾಡಿನ ರೈತರು ಖರೀದಿಸಿದ್ದಾರೆ.

 ತಾವರೆಗೆರೆ ನಿವಾಸಿ ಕಾಂತರಾಜು ಅವರ ಎತ್ತನ್ನು ತಮಿಳುನಾಡು ಮೂಲದ ಎಸ್.ವಿ.ರಾಜನ್ ಎಂಬುವರು 13.05 ಲಕ್ಷ ರು. ಕೊಟ್ಟು ಖರೀದಿಸಿದ್ದು, ಎತ್ತಿಗೆ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಲಾಗಿದೆ. 

ಈ ಎತ್ತು ‘ಟೈಗರ್’ ಎಂದೇ ಖ್ಯಾತವಾಗಿದ್ದು, ಹಲವಾರು ಎತ್ತಿನಗಾಡಿ ಸ್ಪರ್ಧೆಯಲ್ಲಿ ಬೈಕ್ ಸೇರಿ 26 ಬಹುಮಾನ ಗೆದ್ದುಕೊಂಡಿದೆ.