ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ

| N/A | Published : Jul 22 2025, 10:55 AM IST

havyaka

ಸಾರಾಂಶ

ರಾಜರಾಜೇಶ್ವರಿ ನಗರದಲ್ಲಿ ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಸಂಭ್ರಮ 2025’ ಅದ್ಧೂರಿಯಾಗಿ ನಡೆಯಿತು. ಈ ಸಂಭ್ರಮದಲ್ಲಿ ಕರಾವಳಿ ಮತ್ತು ಮಲೆನಾಡು ಸಂಸ್ಕೃತಿ ಬಿಂಬಿಸುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು.

 ಬೆಂಗಳೂರು :  ರಾಜರಾಜೇಶ್ವರಿ ನಗರದಲ್ಲಿ ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಸಂಭ್ರಮ 2025’ ಅದ್ಧೂರಿಯಾಗಿ ನಡೆಯಿತು. ಈ ಸಂಭ್ರಮದಲ್ಲಿ ಕರಾವಳಿ ಮತ್ತು ಮಲೆನಾಡು ಸಂಸ್ಕೃತಿ ಬಿಂಬಿಸುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು.

ಸಮಾಜಮುಖಿ ಸಂಸ್ಕೃತಿ ಬಿಂಬಿಸುವ ಯಕ್ಷಗಾನ, ತಬಲಾ (ಸೋಲೋ), ಸಿತಾರ್ ವಾದನ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಮಕ್ಕಳು ಪ್ರದರ್ಶಿಸಿದರು. ‘ಜೀವಜಲ ಕಾವೇರೀ’ ರೂಪಕ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಇದೇ ಸಂದರ್ಭದಲ್ಲಿ ಸಮಾಜದ ಚಿತ್ರಕಲೆ ಹಾಗೂ ಚುಕ್ಕಿ ರಂಗೋಲಿ ಪ್ರತಿಭೆಗಳಿಗೆ ಬಹುಮಾನ ವಿತರಿಸಲಾಯಿತು. ಕನ್ನಡದ ಒಂದು ಪ್ರಕಾರ ಹವಿಗನ್ನಡವುನ್ನುಳಿಸಲು ‘ಹವಿಗನ್ನಡ’ ಆಶುಭಾಷಣ ಸ್ಪರ್ಧೆ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರು ಹವ್ಯಕ ಸಂಸ್ಕೃತಿ, ಸಂಪ್ರದಾಯಕ್ಕೆ ತಕ್ಕಂತೆ ಧಿರಿಸು ಧರಿಸಿದ್ದು, ಊಟ, ಮಾತುಕತೆ ಕರಾವಳಿ ಮತ್ತು ಮಲೆನಾಡಿನಲ್ಲೊಮ್ಮೆ ತೇಲಿಬಂದಂತಹ ಅನುಭವ ನೀಡಿತು.

ಈ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕನ್ನಡಪ್ರಭ ಸಂಪಾದಕ ರವಿ ಹೆಗಡೆ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಯಂ ಪ್ರೇರಿತವಾಗಿ ಈ ಹವ್ಯಕ ಸಮಾಜ ಇರುವಿಕೆಯನ್ನು ದಾಖಲಿಸುವ ಅತ್ಯಗತ್ಯ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (ಎಐ) ಹಾಗೂ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿ ಹವ್ಯಕ ಸಂಸ್ಕೃತಿ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಯುವಜನತೆಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಹಳೆಬೇರು ಹೊಸ ಚಿಗುರಿನ ಹೊಸತನದೊಂದಿಗೆ ಯುವಕರನ್ನು ಆಕರ್ಷಿಸುವ ಅವಶ್ಯಕತೆ ಇದೆ ಎಂದರು.

ರಾಜರಾಜೇಶ್ವರಿ ನಗರದ ನಗರಸಭಾ ಮಾಜಿ ಸದಸ್ಯ ಮಂಜು ಮಾತನಾಡಿ, ಹವ್ಯಕರೊಡನಾಟ ತಮ್ಮ ಮನೋಬಲ ಹೆಚ್ಚಿಸಿದೆ. ಅಲ್ಲದೆ, ಆತ್ಮೀಯತೆಯ ಊಟ ಹಾಗೂ ಸ್ನೇಹ ಮಾರೆಯಲಾಗದ್ದು ಎಂದು ಹೇಳಿದರು.

ಹವ್ಯಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಣಪತಿ ಹೆಗಡೆ, ಪ್ರಧಾನ ಕಾರ್ಯದರ್ಶಿ ಎಂ.ಕೆ.ಸತೀಶ್‌, ಕೋಶಾಧ್ಯಕ್ಷ ರಾಮಕೃಷ್ಣ ಹೆಗಡೆ ಉಪಸ್ಥಿತರಿದ್ದರು.

ದಕ್ಷ ಯಜ್ಞ ತಾಳಮದ್ದಳೆ:

ವೇದಿಕೆ ಕಾರ್ಯಕ್ರಮದ ನಂತರ ನಡೆದ ದಕ್ಷ ಯಜ್ಞ ತಾಳಮದ್ದಳೆಯಲ್ಲಿ ಕೊಳಗಿ ಕೇಶವ ಹೆಗಡೆ ಅವರ ಭಾಗವತಿಕೆ ಇದ್ದರೆ, ಶಂಕರ ಭಾಗವತ ಅವರು ಮೃದಂಗದಲ್ಲಿ ಸಾಥ್‌ ನೀಡಿದರು. ಅರ್ಥಧಾರಿಗಳಾಗಿ ಮೈಸೂರಿನ ಗ.ನಾ.ಭಟ್ಟ, ರಾಮಕುಂಜದ ಗಣರಾಜ ಕುಂಬ್ಳೆ, ಮೈಸೂರಿನ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ, ಬೆಂಗಳೂರಿನ ಆನಂದ ಹೆಗಡೆ ಶೀಗೇಹಳ್ಳಿ ನಿರ್ವಹಿಸಿದರು.

 

Read more Articles on