ಸಾಧುವಾಗಲು ನಿರ್ಧರಿಸಿದ್ದೆ, ಹಿಮಾಲಯದಲ್ಲಿ ಜಾಗವನ್ನೂ ಗುರ್ತಿಸಿದ್ದೆ!

| Published : Jun 22 2024, 09:57 AM IST

Ramesh Jarkiholi-03
ಸಾಧುವಾಗಲು ನಿರ್ಧರಿಸಿದ್ದೆ, ಹಿಮಾಲಯದಲ್ಲಿ ಜಾಗವನ್ನೂ ಗುರ್ತಿಸಿದ್ದೆ!
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಸಾಧುವಾಗಿ ಹಿಮಾಲಯಕ್ಕೆ ಹೋಗುವವನಿದ್ದೆ. ಹಿಮಾಲಯದಲ್ಲಿ ಒಂದು ಜಾಗವನ್ನೂ ನೋಡಿ ಬಂದಿದ್ದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.ಗೋಕಾಕದಲ್ಲಿ ಗುರುವಾರ ನೂತನ ಸಂಸದ ಜಗದೀಶ ಶೆಟ್ಟರ ಅಭಿನಂದನಾ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು.

ಬೆಳಗಾವಿ :  ನಾನು ಸಾಧುವಾಗಿ ಹಿಮಾಲಯಕ್ಕೆ ಹೋಗುವವನಿದ್ದೆ. ಹಿಮಾಲಯದಲ್ಲಿ ಒಂದು ಜಾಗವನ್ನೂ ನೋಡಿ ಬಂದಿದ್ದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.ಗೋಕಾಕದಲ್ಲಿ ಗುರುವಾರ ನೂತನ ಸಂಸದ ಜಗದೀಶ ಶೆಟ್ಟರ ಅಭಿನಂದನಾ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು. 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಹಿನ್ನಡೆ ಆಗಿತ್ತು. ಕಳೆದ ಒಂದು ವರ್ಷದಿಂದ ನಾನು ಅಸಹಾಯಕನಾಗಿದ್ದೆ. ಅದನ್ನು ಮನಗಂಡು ನಮ್ಮ ಕಾರ್ಯಕರ್ತರು ಈ ಚುನಾವಣೆಯಲ್ಲಿ ಕೆಲಸ ಮಾಡಿದರು. ಮಹಾನಾಯಕ, ವಿಷಕನ್ಯೆ ಸೊಕ್ಕಿನ ರಾಜಕಾರಣದ ದರ್ಪ ಜೋರಾಗಿತ್ತು. ಸಿದ್ದರಾಮಯ್ಯ ಬಗ್ಗೆ ನಾನೇನೂ ಮಾತನಾಡಲ್ಲ ಎಂದರು.

ನಾನು ಸಾಧುವಾಗಿ ಹಿಮಾಲಯಕ್ಕೆ ಹೋಗಲು ನಿರ್ಧರಿಸಿದ್ದೆ. ಇದಕ್ಕಾಗಿ ಹಿಮಾಲಯಲ್ಲಿ ಒಂದು ಜಾಗವನ್ನೂ ನೋಡಿ ಬಂದಿದ್ದೆ. ಪದೆ ಪದೇ ಸೋತರೆ ನಮಗೆ ತಡೆದುಕೊಳ್ಳಲು ಆಗುವುದಿಲ್ಲ. ಪದೇ ಪದೇ ಸೋತರೆ ನಾವು ಲೀಡರ್ಸ್ ಅಲ್ಲ. ಆ ಉದ್ದೇಶದಿಂದ ಎಲ್ಲ ಒರೆಗೆ ಹಚ್ಚಿ ಚುನಾವಣೆ ಎದುರಿಸಿದೆವು. ಲೋಕಸಭಾ ಚುನಾವಣೆಯಲ್ಲಿ ಮತ ಹಾಕಿ ನಾನು ಅಮೆರಿಕಾಗೆ ಹೋಗಿದ್ದೆ ಎಂದು ಹೇಳಿದರು.

ಕಾಂಗ್ರೆಸ್ಸಿನವರು ದುಡ್ಡು ತೂರಾಡಿದರು. ಆದರೆ, ನಮ್ಮ ಕಡೆಗೆ ದುಡ್ಡು ಇರಲಿಲ್ಲ. ಕಾಂಗ್ರೆಸ್‌ನವರು ಜೀಪು, ಹೂವಿನಹಾರ ಅವರೇ ಕೊಟ್ಟು ಕಳಿಸುತ್ತಿದ್ದರು. ನಂತರ ಅವರೇ ಹೂವಿನ ಹಾರ ಹಾಕಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.