ಸಾರಾಂಶ
ಭಾರತಕ್ಕೆ ಭೇಟಿ ನೀಡಿರುವ ವಾಷಿಂಗ್ಟನ್ ಡಿಸಿಯ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ನಿಯೋಗವು ವಾರ್ಷಿಕ ಆರ್ಟಿಕಲ್ ಸಮಾಲೋಚನೆಯ ಭಾಗವಾಗಿ ಶನಿವಾರ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚಿಸಿತು.
ಬೆಂಗಳೂರು : ಭಾರತಕ್ಕೆ ಭೇಟಿ ನೀಡಿರುವ ವಾಷಿಂಗ್ಟನ್ ಡಿಸಿಯ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ನಿಯೋಗವು ವಾರ್ಷಿಕ ಆರ್ಟಿಕಲ್ ಸಮಾಲೋಚನೆಯ ಭಾಗವಾಗಿ ಶನಿವಾರ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚಿಸಿತು.
ಈ ಐಎಂಎಫ್ ನಿಯೋಗವು ರಾಜ್ಯದಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವುದು, ಹಣಕಾಸಿನ ಸುಸ್ಥಿರತೆ ಕಾಪಾಡಿಕೊಳ್ಳುವುದು ಮತ್ತು ಮಾನವ ಬಂಡವಾಳ ಬಲಪಡಿಸುವಿಕೆ, ಹವಾಮಾನ ಕೇಂದ್ರಿತ ನೀತಿಗಳನ್ನು ಮುಂದುವರಿಸುವ ಕುರಿತು ರಚನಾತ್ಮಕ ಸವಾಲುಗಳನ್ನು ಗುರಿಯಾಗಿಸಿಕೊಂಡು ರಾಜ್ಯಮಟ್ಟದ ಉಪಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚಿಸಿತು.
ಈ ನಿಯೋಗದಲ್ಲಿ ಐಎಂಎಫ್ ಸಹಾಯಕ ನಿರ್ದೇಶಕ ಮತ್ತು ಮಿಷನ್ ಮುಖ್ಯಸ್ಥ ಹೆರಾಲ್ಡ್ ಫಿಂಗರ್, ಭಾರತದ ಹಿರಿಯ ನಿವಾಸಿಗಳ ಪ್ರತಿನಿಧಿ ರನಿಲ್ ಸಲ್ಗಾಡೊ, ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಹಿರಿಯ ಅರ್ಥಶಾಸ್ತ್ರಜ್ಞೆ ನುಜಿನ್ ಸುಫಾಫಿಫಟ್, ಐಎಂಎಫ್ ಅರ್ಥಶಾಸ್ತ್ರಜ್ಞೆ ಗೀತಿಕಾ ಡ್ಯಾಂಗ್ ಇದ್ದರು. ಈ ವೇಳೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್ ಸಹ ಉಪಸ್ಥಿತರಿದ್ದರು.