ಕೇಂದ್ರದಿಂದ ರಾಜ್ಯಕ್ಕೆ ಶೀಘ್ರ 5250 ಹೊಸ ಎಲೆಕ್ಟ್ರಿಕ್‌ ಬಸ್‌

| N/A | Published : Sep 07 2025, 09:18 AM IST

DTC electric bus

ಸಾರಾಂಶ

ರಾಜ್ಯದ ಸರ್ಕಾರಿ ಸಾರಿಗೆ ವ್ಯವಸ್ಥೆ ಮತ್ತಷ್ಟು ಪರಿಸರ ಸ್ನೇಹಿಯಾಗುವತ್ತ ಸಾಗುತ್ತಿದ್ದು, ಮುಂದಿನ ಕೆಲ ತಿಂಗಳಲ್ಲಿ ನಾಲ್ಕೂ ನಿಗಮಗಳಿಗೆ 5 ಸಾವಿರಕ್ಕೂ ಹೆಚ್ಚಿನ ಎಲೆಕ್ಟ್ರಿಕ್‌ ಬಸ್‌ಗಳು ಸೇರ್ಪಡೆಯಾಗುತ್ತಿವೆ.

 ಬೆಂಗಳೂರು :  ರಾಜ್ಯದ ಸರ್ಕಾರಿ ಸಾರಿಗೆ ವ್ಯವಸ್ಥೆ ಮತ್ತಷ್ಟು ಪರಿಸರ ಸ್ನೇಹಿಯಾಗುವತ್ತ ಸಾಗುತ್ತಿದ್ದು, ಮುಂದಿನ ಕೆಲ ತಿಂಗಳಲ್ಲಿ ನಾಲ್ಕೂ ನಿಗಮಗಳಿಗೆ 5 ಸಾವಿರಕ್ಕೂ ಹೆಚ್ಚಿನ ಎಲೆಕ್ಟ್ರಿಕ್‌ ಬಸ್‌ಗಳು ಸೇರ್ಪಡೆಯಾಗುತ್ತಿವೆ.

ಸಾರಿಗೆ ಇಲಾಖೆ ಮಾಹಿತಿಯಂತೆ ಪಿಎಂ ಇ-ಡ್ರೈವ್‌ ಅಡಿಯಲ್ಲಿ ಕೇಂದ್ರದ ಸಬ್ಸಿಡಿ ಮೂಲಕ 5,250 ಎಲೆಕ್ಟ್ರಿಕ್‌ ಬಸ್‌ಗಳ ಸೇರ್ಪಡೆ. ಅದರಂತೆ ಪಿಎಂ ಇ-ಡ್ರೈವ್‌ ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ 4,500 ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲಾಗುತ್ತಿದೆ. 

ಉಳಿದಂತೆ ಪಿಎಂ ಇ-ಬಸ್‌ ಸೇವಾ ಅಡಿಯಲ್ಲಿ ಕೆಎಸ್ಸಾರ್ಟಿಸಿಗೆ 350, ಎನ್‌ಡಬ್ಲ್ಯೂಕೆಆರ್‌ಟಿಸಿ 200 ಹಾಗೂ ಕೆಕೆಆರ್‌ಟಿಸಿಗೆ 200 ಬಸ್‌ಗಳು ಸೇರಿ ಒಟ್ಟು 750 ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲು ಅನುಮೋದನೆ ನೀಡಲಾಗಿದೆ. ಈ ಎಲ್ಲ ಬಸ್‌ಗಳನ್ನು ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌ (ಜಿಸಿಸಿ) ಅಡಿಯಲ್ಲಿ ಪಡೆಯಲಾಗುತ್ತದೆ. ಅದರಂತೆ ಎಲ್ಲ ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆ ಪೂರೈಸಲಿದ್ದು, ಅದರ ನಿರ್ವಹಣೆಯನ್ನೂ ಖಾಸಗಿ ಸಂಸ್ಥೆ ಮಾಡಲಿದೆ.

Read more Articles on