ಬೆಂಗ್ಳೂರಿಗೆ 4500 ಎಲೆಕ್ಟ್ರಿಕ್‌ ಬಸ್‌: ಎಚ್‌ಡಿಕೆ ಬಂಪರ್‌!

| N/A | Published : May 23 2025, 06:20 AM IST

Raichur, mantralaya, guru vaibhavotsav, sri Raghavendra, mantralaya mutt, hd Kumaraswamy,

ಸಾರಾಂಶ

ಬೆಂಗಳೂರು, ದೆಹಲಿ, ಹೈದ್ರಾಬಾದ್‌, ಅಹಮದಾಬಾದ್‌, ಸೂರತ್‌ಗೆ 10000 ಎಲೆಕ್ಟ್ರಿಕ್‌ ಬಸ್‌ ಈ ಪೈಕಿ ಶೇ..40ರಷ್ಟು ಅಂದರೆ 4500 ಬಸ್‌ಗಳನ್ನು ಕೇವಲ ಕರ್ನಾಟಕವೊಂದಕ್ಕೆ ಮುಂಜೂರು

  ನವದೆಹಲಿ : ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಇ- ಡ್ರೈವ್ ಯೋಜನೆಯಡಿ ಬೆಂಗಳೂರು, ದೆಹಲಿ ಸೇರಿದಂತೆ ದೇಶದ 5 ಪ್ರಮುಖ ನಗರಗಳಿಗೆ ಒಟ್ಟು 11,000 ಎಲೆಕ್ಟ್ರಿಕ್ ಬಸ್‌ ಹಂಚಿಕೆಗೆ ಮುಂದಾಗಿದೆ. ಈ ಪೈಕಿ ಬೆಂಗಳೂರು ಒಂದಕ್ಕೇ ಬಂಪರ್ ಎಂಬಂತೆ 4500 ಇ- ಬಸ್‌ ಹಂಚಿಕೆಯಾಗಲಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡುವ ಕುರಿತು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ಸಭೆ ನಡೆದಿದ್ದು, ಅದರಲ್ಲಿ 11 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಹಂಚಿಕೆಗೆ ನಿರ್ಧಾರ ಕೈಗೊಳ್ಳಲಾಗಿದೆ.

ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್‌ :

11000 ಸಾವಿರ ಎಲೆಕ್ಟ್ರಿಕ್ ಬಸ್‌ಗಳ ಪೈಕಿ ಬೆಂಗಳೂರಿಗೆ ಕುಮಾರಸ್ವಾಮಿ ಬಂಪರ್ ಗಿಫ್ಟ್‌ ನೀಡಿದ್ದು, 4500 ಬಸ್‌ ಹಂಚಿಕೆಗೆ ಮುಂದಾಗಿದ್ದಾರೆ. ಈ ಸಂಬಂಧ ಅವರು ಮಾಹಿತಿ ನೀಡಿದ್ದು, ‘ವಿವರವಾದ ಚರ್ಚೆಗಳ ನಂತರ ಪ್ರಧಾನಮಂತ್ರಿ ಇ- ಡ್ರೈವ್ ಯೋಜನೆಯ ಪ್ರಸ್ತುತ ಹಂತದ ಅಡಿಯಲ್ಲಿ ಬೆಂಗಳೂರಿಗೆ 4500, ಹೈದರಾಬಾದ್‌ಗೆ 2000, ದೆಹಲಿ 2800, ಅಹಮದಾಬಾದ್‌ 1000, ಸೂರತ್‌ಗೆ 600 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುತ್ತದೆ’ ಎಂದಿದ್ದಾರೆ.

ಜೊತೆಗೆ ‘ಸಾರ್ವಜನಿಕ ಸಾರಿಗೆಯನ್ನು ಸ್ವಚ್ಛ, ಸ್ಮಾರ್ಟ್‌ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸಲು ಬೆಂಗಳೂರು, ದೆಹಲಿ ಸೇರಿದಂತೆ ಈ ನಗರಗಳು ಎಲೆಕ್ಟ್ರಿಕ್ ಬಸ್‌ಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುತ್ತಿವೆ. ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ನಾವು ಹಂಚಿಕೆ ಮಾಡುತ್ತಿಲ್ಲ. ಇದರ ಜೊತೆಗೆ ದೇಶದ ಸಾರಿಗೆ ವಲಯದ ಭವಿಷ್ಯವನ್ನು ನಾವೀನ್ಯತೆ ಮತ್ತು ಪರಿಸರ ಪ್ರಜ್ಞೆಯೊಂದಿಗೆ ರೂಪಿಸುತ್ತಿದ್ದೇವೆ. ಕೇಂದ್ರ ಮತ್ತು ತೆಲಂಗಾಣ, ಕರ್ನಾಟಕ, ದೆಹಲಿ, ಗುಜರಾತ್‌ ಸರ್ಕಾರದ ರಾಜ್ಯಗಳ ನಡುವಿನ ನಿಕಟ ಸಮನ್ವಯದೊಂದಿಗೆ ಇದು ಈಡೇರುತ್ತದೆ’ ಎಂದಿದ್ದಾರೆ.

ಇನ್ನು ಪಿಎಂ- ಇ ಡ್ರೈವ್ ಯೋಜನೆಯಡಿ 2024ರ ಏಪ್ರಿಲ್‌ನಿಂದ 2026ರ ಮಾರ್ಚ್‌ ತನಕದ 2 ವರ್ಷಗಳ ಅವಧಿಯಲ್ಲಿ ಒಟ್ಟು 10900 ಕೋಟಿ ರು. ವೆಚ್ಚದಲ್ಲಿ 14028 ಎಲೆಕ್ಟ್ರಿಕ್ ಬಸ್‌ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

ಪರಿಸರ ಪ್ರಜ್ಞೆಯೊಂದಿಗೆ

ಸಾರಿಗೆ ವಲಯ ರೂಪು

ಕೇವಲ ಎಲೆಕ್ಟ್ರಿಕ್ ಬಸ್‌ಗಳನ್ನು ಮಾತ್ರ ನಾವು ಹಂಚಿಕೆ ಮಾಡುತ್ತಿಲ್ಲ. ಇದರ ಜೊತೆಗೆ ದೇಶದ ಸಾರಿಗೆ ವಲಯದ ಭವಿಷ್ಯವನ್ನು ನಾವೀನ್ಯತೆ ಮತ್ತು ಪರಿಸರ ಪ್ರಜ್ಞೆಯೊಂದಿಗೆ ರೂಪಿಸುತ್ತಿದ್ದೇವೆ.

ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ತವರಿಗೆ ಬಂಪರ್‌ ಕೊಡುಗೆ

ಸಾರ್ವಜನಿಕ ಸಾರಿಗೆ ಸ್ವಚ್ಛ, ಸ್ಮಾರ್ಟ್‌, ಹೆಚ್ಚು ಪರಿಣಾಮಕಾರಿಯಾಗಿಸಲು ವಿವಿಧ ನಗರಗಳಿಂದ ಯೋಜನೆ

ಈ ಹಿನ್ನೆಲೆ ಬೆಂಗಳೂರು, ದೆಹಲಿ, ಹೈದ್ರಾಬಾದ್‌, ಅಹಮದಾಬಾದ್‌, ಸೂರತ್‌ಗೆ 10000 ಎಲೆಕ್ಟ್ರಿಕ್‌ ಬಸ್‌

ಈ ಪೈಕಿ ಶೇ..40ರಷ್ಟು ಅಂದರೆ 4500 ಬಸ್‌ಗಳನ್ನು ಕೇವಲ ಕರ್ನಾಟಕವೊಂದಕ್ಕೆ ಮುಂಜೂರು ನಿರ್ಧಾರ

Read more Articles on