ಸಾರಾಂಶ
‘ಕಲಿಯುಗ್ ಎಂಟರ್ ಪ್ರೈಸಸ್’ ಸಹಯೋಗದಲ್ಲಿ ಕನ್ನಡಪ್ರಭ-ಸುವರ್ಣ ನ್ಯೂಸ್ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಗಿಫ್ಟ್ಸ್ ಮತ್ತು ಲೈಫ್‌ಸ್ಟೈಲ್ ಎಕ್ಸ್‌ಫೋ’ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾರಾಂತ್ಯದ ದಿನವಾದ ಶನಿವಾರದಂದು ಸಾವಿರಾರು ಜನರು ಭೇಟಿ ನೀಡಿ ಶಾಪಿಂಗ್ ಮಾಡಿದರು.
ಬೆಂಗಳೂರು : ‘ಕಲಿಯುಗ್ ಎಂಟರ್ ಪ್ರೈಸಸ್’ ಸಹಯೋಗದಲ್ಲಿ ಕನ್ನಡಪ್ರಭ-ಸುವರ್ಣ ನ್ಯೂಸ್ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಗಿಫ್ಟ್ಸ್ ಮತ್ತು ಲೈಫ್‌ಸ್ಟೈಲ್ ಎಕ್ಸ್‌ಫೋ’ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾರಾಂತ್ಯದ ದಿನವಾದ ಶನಿವಾರದಂದು ಸಾವಿರಾರು ಜನರು ಭೇಟಿ ನೀಡಿ ಶಾಪಿಂಗ್ ಮಾಡಿದರು.
ಮನೆಗೆ ಬೇಕಾಗುವ ಎಲ್ಲ ಅಗತ್ಯ ವಸ್ತುಗಳನ್ನು ಒಂದೇ ಸೂರಿನಡಿ ಖರೀದಿಸಲು ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಂಡರು. ರಜಾ ದಿನವಾಗಿದ್ದ ಕಾರಣ ಅನೇಕರು ಕುಟುಂಬ ಸಮೇತರಾಗಿ ಎಕ್ಸ್‌ಪೋಗೆ ಆಗಮಿಸಿದ್ದರು.
ಎಲ್ಲ ವಸ್ತುಗಳು ಒಂದೇ ಕಡೆ ಪ್ರದರ್ಶನಕ್ಕೆ ಇದ್ದ ಕಾರಣ ಬೇರೆ ಬೇರೆ ಪ್ರದೇಶಗಳಿಗೆ ಸುತ್ತಾಡುವುದು ತಪ್ಪಿತು. ಎ.ಸಿ ಹಾಲ್‌ನಲ್ಲಿ ಸುತ್ತಾಡುತ್ತಾ ಮನೆಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಗ್ರಾಹಕರೊಬ್ಬರು ತಿಳಿಸಿದರು.
ಎಕ್ಸ್‌ಪೋದಲ್ಲಿ ವಿವಿಧ ಕಂಪನಿಗಳ ಫರ್ನಿಚರ್‌ಗಳು, ಬಗೆ ಬಗೆಯ ವಸ್ತ್ರಗಳು, ಬ್ರ್ಯಾಂಡೆಡ್ ಕಾರುಗಳು, ಆಭರಣ, ಕರಕುಶಲ ವಸ್ತುಗಳು, ಪೇಂಟಿಂಗ್‌ಗಳು, ಅಲಂಕಾರಿಕ ವಸ್ತುಗಳು, ಪರ್ಫ್ಯೂಮ್, ಕಾರ್ಪೇಟ್‌ಗಳು, ವಿಗ್ರಹಗಳು, ಛಾಯಾಚಿತ್ರಗಳು ಸೇರಿದಂತೆ ಅನೇಕ ಮಾದರಿಯ ವಸ್ತುಗಳನ್ನು ಜನರು ಆಯ್ಕೆ ಮಾಡಿದರು.
ಎಕ್ಸ್‌ಪೋ ಭಾನುವಾರ ಕೂಡ ಇರುತ್ತದೆ. ಉತ್ತಮವಾದ ಸಂಪೂರ್ಣ ಶಾಪಿಂಗ್ ಅನುಭವಕ್ಕಾಗಿ ಎಕ್ಸ್‌ಪೋಗೆ ಭೇಟಿ ನೀಡಬಹುದು. ಶಾಪಿಂಗ್ ಸ್ಥಳದಲ್ಲೇ ಫುಡ್ ಕೋರ್ಟ್ ಕೂಡ ತೆರೆಯಲಾಗಿದ್ದು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ಸವಿಯಬಹುದಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಎಕ್ಸ್‌ಫೋಗೆ ಭೇಟಿ ನೀಡಿ ಶುಭ ಕೋರಿದರು.
- ಒಂದೇ ಸೂರಿನಡಿ ಮನೆಗೆ ಅಗತ್ಯವಾದ ಎಲ್ಲ ವಸ್ತುಗಳು ಲಭ್ಯ.
- ಶಾಪಿಂಗ್ ಮಾಡುವ ಅದೃಷ್ಟಶಾಲಿಗಳಿಗೆ ಗಿಫ್ಟ್ ಹ್ಯಾಂಪರ್.
- ಎಕ್ಸ್‌ಪೋ ನಡೆಯುವ ಸ್ಥಳ: ಗ್ರ್ಯಾಂಡ್ ಕ್ಯಾಸಲ್, ಗೇಟ್ ಸಂಖ್ಯೆ 6, ಅರಮನೆ ಮೈದಾನ.
- ಎಕ್ಸ್‌ಪೋ ನಡೆಯುವ ದಿನಗಳು- ಸೆ.22 ಮತ್ತು 23