ಸಾರಾಂಶ
ರಾಜ್ಯದ ಬಜೆಟ್ ಗಾತ್ರ 4.09 ಲಕ್ಷ ಕೋಟಿ ರು. ತಲುಪಿದ್ದು ಈ ಪೈಕಿ ರಾಜ್ಯ ತೆರಿಗೆ ಆದಾಯದಿಂದ 2.08 ಲಕ್ಷ ಕೋಟಿ ರು. ಬರಲಿದೆ. ಉಳಿದ ಮೊತ್ತವನ್ನು ಕೇಂದ್ರದ ತೆರಿಗೆ ಪಾಲು, ಸಹಾಯ ಅನುದಾನ ಹಾಗೂ ಸಾಲದ ರೂಪದಲ್ಲಿ ನಿರೀಕ್ಷಿಸಲಾಗಿದೆ.
ರಾಜ್ಯದ ಬಜೆಟ್ ಗಾತ್ರ 4.09 ಲಕ್ಷ ಕೋಟಿ ರು. ತಲುಪಿದ್ದು ಈ ಪೈಕಿ ರಾಜ್ಯ ತೆರಿಗೆ ಆದಾಯದಿಂದ 2.08 ಲಕ್ಷ ಕೋಟಿ ರು. ಬರಲಿದೆ. ಉಳಿದ ಮೊತ್ತವನ್ನು ಕೇಂದ್ರದ ತೆರಿಗೆ ಪಾಲು, ಸಹಾಯ ಅನುದಾನ ಹಾಗೂ ಸಾಲದ ರೂಪದಲ್ಲಿ ನಿರೀಕ್ಷಿಸಲಾಗಿದೆ.
4,09,549 ಕೋಟಿ ರು. ಬಜೆಟ್ ಗಾತ್ರದಲ್ಲಿ 2,92,476 ಕೋಟಿ ರು. ರಾಜಸ್ವ ಸ್ವೀಕೃತಿ ನಿರೀಕ್ಷಿಸಲಾಗಿದೆ. ಈ ಪೈಕಿ ರಾಜ್ಯ ತೆರಿಗೆ ಆದಾಯದಿಂದ 2,08,100 ಕೋಟಿ ರು., ಕೇಂದ್ರದಿಂದ ಬರುವ ರಾಜ್ಯದ ತೆರಿಗೆ ಪಾಲು 51,876 ಕೋಟಿ ರು., ಕೇಂದ್ರ ಸರ್ಕಾರದ ಅನುದಾನಗಳು 16,000 ಕೋಟಿ ರು., ತೆರಿಗೇಯತರ ರಾಜಸ್ವ 16,500 ಕೋಟಿ ರು., ಸೇರಿವೆ.
1,16,170 ಕೋಟಿ ರು. ಸಾಲ:
ಉಳಿದ 1,16,170 ಕೋಟಿ ರು. ಸಾಲದ ರೂಪದಲ್ಲಿ ಎತ್ತುವಳಿ ಮಾಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಪೈಕಿ ಕೇಂದ್ರದಿಂದ 7,000 ಕೋಟಿ ರು., ಸಾಲ, ಬಹಿರಂಗ ಮಾರುಕಟ್ಟೆಯಿಂದ 1,05,000 ಕೋಟಿ ರು., ಎಲ್‌ಐಸಿ, ಎನ್‌ಎನ್‌ಎಸ್‌ಎಫ್, ಎನ್‌ಸಿಡಿಸಿ ಮತ್ತು ಆರ್‌ಐಡಿಎಫ್‌ಗಳಿಂದ 4,000 ಕೋಟಿ ರು. ಸಾಲ ನಿರೀಕ್ಷೆ ಮಾಡಲಾಗಿದೆ.
ರಾಜ್ಯದ ಆದಾಯ ಮೂಲಗಳೇನು?:
ರಾಜ್ಯದ ತೆರಿಗೆ ಆದಾಯ 2.08 ಲಕ್ಷ ಕೋಟಿ ರು. ನಿರೀಕ್ಷಿಸಲಾಗಿದ್ದು, ಇದರಲ್ಲಿ 1.20 ಲಕ್ಷ ಕೋಟಿ ರು. ವಾಣಿಜ್ಯ ತೆರಿಗೆಗಳಿಂದ ಸಂಗ್ರಹಿಸುವುದಾಗಿ ಪ್ರಸ್ತಾಪಿಸಲಾಗಿದೆ. ಉಳಿದಂತೆ ಮೋಟಾರು ವಾಹನ ತೆರಿಗೆಯಿಂದ 15,000 ಕೋಟಿ ರು., ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 28,000 ಕೋಟಿ ರು.,
ಅಬಕಾರಿ ಇಲಾಖೆಯಿಂದ 40,000 ಕೋಟಿ ರು. ಹಾಗೂ ಇತರೆ ಮೂಲಗಳಿಂದ 5,100 ಕೋಟಿ ರು. ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ.