ಸಾರಾಂಶ
ಟಾಪ್ 100 ಐಕಾನಿಕ್ ಐಸ್‌ಕ್ರೀಂಗಳ ಪಟ್ಟಿಯಲ್ಲಿ ಮಂಗಳೂರಿನ ಐಡಿಯಲ್ ಪಬ್ಬಾಸ್‌ನ ಗಡ್‌ಬಡ್ ಐಸ್‌ಕ್ರೀಂ ಸ್ಥಾನ ಪಡೆದಿದೆ. ಈ ಮೂಲಕ ಕರಾವಳಿ, ತುಳುನಾಡಿಗೆ ಹೆಮ್ಮೆ ಅಭಿಮಾನ ಮೂಡಿಸಿದೆ.
ಮಂಗಳೂರು : ಐಸ್‌ಕ್ರೀಂ ಎಂದರೆ ಎಲ್ಲರಿಗೂ ಪಂಚಪ್ರಾಣ. ಪ್ರತಿಯೊಬ್ಬರೂ ಐಸ್‌ಕ್ರೀಂ ಸವಿಯದೆ ಇರುವವರು ಯಾರೂ ಇರಲಾರರು. ಹೀಗಾಗಿ ಹೀಗಾಗಿ ಜಗತ್ತಿನಾದ್ಯಂತ ಸಾವಿರಾರು ಐಸ್‌ಕ್ರೀಂ ಬ್ರಾಂಡ್‌ಗಳಿವೆ. ಅದರಲ್ಲಿ ಟಾಪ್ 100 ಐಕಾನಿಕ್ ಐಸ್‌ಕ್ರೀಂಗಳ ಪಟ್ಟಿಯಲ್ಲಿ ಮಂಗಳೂರಿನ ಐಡಿಯಲ್ ಪಬ್ಬಾಸ್‌ನ ಗಡ್‌ಬಡ್ ಐಸ್‌ಕ್ರೀಂ ಸ್ಥಾನ ಪಡೆದಿದೆ. ಈ ಮೂಲಕ ಕರಾವಳಿ, ತುಳುನಾಡಿಗೆ ಹೆಮ್ಮೆ ಅಭಿಮಾನ ಮೂಡಿಸಿದೆ.
ಮಂಗಳೂರಿನ ಪಬ್ಬಾಸ್ ಜೊತೆಗೆ ಕರ್ನಾಟಕದ ಬೆಂಗಳೂರಿನ ಡೈತ್ ಬೈ ಚಾಕೊಲೇಟ್ ಐಸ್‌ಕ್ರೀಂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಆನ್‌ಲೈನ್ ಟ್ರಾವೆಲ್ ಮತ್ತು ಫುಡ್‌ಗೈಡ್ ʻಟೇಸ್ಟ್ ಅಟ್ಲಾಸ್ʼ ವಿಶ್ವದ ಟಾಪ್ 100 ಐಕಾನಿಕ್ ಐಸ್‌ಕ್ರೀಂಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಟಾಪ್ 100 ಐಸ್ ಕ್ರೀಂಗಳ ಪಟ್ಟಿಯಲ್ಲಿ ಭಾರತದ ಒಟ್ಟು ಐದು ಐಸ್ ಕ್ರೀಂಗಳು ಸ್ಥಾನ ಪಡೆದಿವೆ.