ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌

| N/A | Published : Sep 08 2025, 10:46 AM IST

cm siddaramaiah
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರ ಕಣ್ಣಿನ ಪರೀಕ್ಷೆ ಮಾಡಿದ ಕೂಡ್ಲಿಗಿ ಕಾಂಗ್ರೆಸ್‌ ಶಾಸಕ ಡಾ.ಶ್ರೀನಿವಾಸ ಹಾಗೂ ಅವರ ಪತ್ನಿ ಡಾ.ಪುಷ್ಪಾ ಅವರು ಅತ್ಯಧಿಕ ಬೆಲೆಯ ಅತ್ಯುತ್ತಮ ಕನ್ನಡಕವನ್ನು ಕೊಡುಗೆಯಾಗಿ ನೀಡಿದ್ದಾರೆ.

  ಕೂಡ್ಲಿಗಿ :  ಸಿಎಂ ಸಿದ್ದರಾಮಯ್ಯ ಅವರ ಕಣ್ಣಿನ ಪರೀಕ್ಷೆ ಮಾಡಿದ ಕೂಡ್ಲಿಗಿ ಕಾಂಗ್ರೆಸ್‌ ಶಾಸಕ ಡಾ.ಶ್ರೀನಿವಾಸ ಹಾಗೂ ಅವರ ಪತ್ನಿ ಡಾ.ಪುಷ್ಪಾ ಅವರು ಅತ್ಯಧಿಕ ಬೆಲೆಯ ಅತ್ಯುತ್ತಮ ಕನ್ನಡಕವನ್ನು ಕೊಡುಗೆಯಾಗಿ ನೀಡಿದ್ದಾರೆ.

ಬೆಂಗಳೂರಿನ ಸಿಎಂ ಅಧಿಕೃತ ಗೃಹ ಕಚೇರಿ ಕಾವೇರಿಯಲ್ಲಿ ಆ.25ರಂದು ಸಿದ್ದರಾಮಯ್ಯ ಅವರ ಕಣ್ಣಿನ ಪರೀಕ್ಷೆ ಮಾಡಿದ ಕೂಡ್ಲಿಗಿ ಶಾಸಕರು ಅತ್ಯುತ್ತಮ ಗುಣಮಟ್ಟದ 2 ಕನ್ನಡಕಗಳನ್ನು ಶಿಕ್ಷಕರ ದಿನದಂದು (ಸೆ.5) ತಮ್ಮ ರಾಜಕೀಯ ಗುರುವಾಗಿರುವ ಸಿಎಂಗೆ ಕೊಡುಗೆ ನೀಡಿದ್ದಾರೆ.

ಈ ಸಂದರ್ಭ ಶಾಸಕರ ಪತ್ನಿ ಡಾ.ಪುಷ್ಪಾ ಶ್ರೀನಿವಾಸ ಸೇರಿದಂತೆ ತುಮಕೂರು ಅಕ್ಷರ ಐ ಫೌಂಡೇಶನ್ ಸಿಬ್ಬಂದಿ ಸಿಎಂ ಅವರ ಕಣ್ಣಿನ ಪರೀಕ್ಷೆಗೆ ಸಹಾಯ ಮಾಡಿದರು.

Read more Articles on