ಮಾಧ್ಯಮ ಸಾಧಕರಿಗೆ ನ್ಯೂ ಇಂಡಿಯನ್‌ ಟೈಮ್ಸ್‌ ಪ್ರಶಸ್ತಿ

| N/A | Published : Aug 25 2025, 11:06 AM IST

TNIT award

ಸಾರಾಂಶ

‘ದಿ‌ ನ್ಯೂ ಇಂಡಿಯನ್ ಟೈಮ್ಸ್’ ವತಿಯಿಂದ ದಕ್ಷಿಣ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  ಬೆಂಗಳೂರು :  ‘ದಿ‌ ನ್ಯೂ ಇಂಡಿಯನ್ ಟೈಮ್ಸ್’ ವತಿಯಿಂದ ದಕ್ಷಿಣ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತಿರುವ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇಲ್ಲಿನ ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಉತ್ತಮ ನಿರೂಪಕರು, ಉತ್ತಮ ವರದಿಗಾರರು, ವಿಡಿಯೋ ಎಡಿಟರ್, ವಾಯ್ಸ್ ಓವರ್ ಆರ್ಟಿಸ್ಟ್, ಕ್ಯಾಮರಾಮ್ಯಾನ್ ಸೇರಿದಂತೆ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡಲಾಯಿತು.

ಕನ್ನಡಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಹಾಗೂ ಹಿರಿಯ ಪತ್ರಕರ್ತ ರಂಗನಾಥ್ ಭಾರದ್ವಾಜ್ ಅವರು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಸುದ್ದಿವಾಹಿನಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಮಾಧ್ಯಮದ ಈಗಿನ ಸ್ಥಿತಿಗತಿಗಳ ಬಗ್ಗೆ ಚರ್ಚೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹರಿಹರ ಪಂಚಮಸಾಲಿ ಗುರುಪೀಠ ವಚನಾನಂದ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳು, ನಟ- ರಾಜ್ಯಸಭಾ ಸದಸ್ಯ ಜಗ್ಗೇಶ್, ಅರವಿಂದ ವೆಂಕಟೇಶ ರೆಡ್ಡಿ, ಹಿರಿಯ ನಟಿ ಸುಧಾರಾಣಿ, ಗಿರಿಜಾ ಲೋಕೇಶ್, ನಿರ್ದೇಶಕರಾದ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಟರಾದ ಮುಖ್ಯಮಂತ್ರಿ ಚಂದ್ರು, ‘ನೆನಪಿರಲಿ’ ಪ್ರೇಮ್, ಸುಚೇಂದ್ರ ಪ್ರಸಾದ್, ತಿಲಕ್, ಶ್ರೀನಗರ ಕಿಟ್ಟಿ, ಖುಷಿ, ಪರಭಾಷಾ ನಟ ರವಿ ಕಾಳೆ, ನಿರ್ದೇಶಕ ಶ್ರೀನಂದನ್, ನಟಿ ರಾಗಿಣಿ, ನಿರ್ದೇಶಕಿ ರೂಪಾ ಐಯ್ಯರ್‌, ಗಾಯಕಿ ಶಮಿತಾ ಮಲ್ನಾಡ್ ಸೇರಿ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು.

ದಿ ನ್ಯೂ ಇಂಡಿಯನ್ ಟೈಮ್ಸ್ ಸತತ 7 ವರ್ಷಗಳಿಂದ ಮಾಧ್ಯಮದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದೆ. ದಕ್ಷಿಣ ಭಾರತದ 40ಕ್ಕೂ ಹೆಚ್ಚು ಸುದ್ದಿ ಮಾಧ್ಯಮಗಳ 85ಕ್ಕೂ ಅಧಿಕ ಸಾಧಕರನ್ನು ಗೌರವಿಸಲಾಯಿತು. ನಟ ಹಾಗೂ ಟಿಎನ್‌ಐಟಿ ಸಂಸ್ಥೆಯ ಸಿಇಒ ರಘು ಭಟ್, ವ್ಯವಸ್ಥಾಪಕ ನಿರ್ದೇಶಕಿ ಸುಗುಣಾ ರಘು, ಪ್ರಧಾನ ಸಂಪಾದಕಿ ಮೀರಾ ಕಾರ್ಯಕ್ರಮ ರೂಪಿಸಿದ್ದರು.

ಇದಕ್ಕೂ ಮುನ್ನ ಪ್ರಥಮ ಪ್ರಸಾದ್ , ಸೂರ್ಯ ರಾವ್, ವಿಭಾ ರಾಘವೇಂದ್ರ , ಡಿಸೈಪಲ್ ಆಫ್ ಶ್ರೀ ಪಾರ್ಶ್ವನಾಥ್ ಉಪಾಧ್ಯಾಯ, ಮೀಫಾ ನೃತ್ಯ ತಂಡ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿತು.

ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯಲ್ಲಿನ ಐವರಿಗೆ TNIT ಪ್ರಶಸ್ತಿ

 ಈ ಬಾರಿ ಟಿಎನ್ಐಟಿ ಸಂಸ್ಥೆದಕ್ಷಿಣ ಭಾರತದ ಮಾಧ್ಯಮಗಳಲ್ಲಿರುವ ಪತ್ರಕರ್ತರಿಗೂ ಪ್ರಶಸ್ತಿ ನೀಡಿ ಗೌರವಿಸಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯಲ್ಲಿನ ಐವರಿಗೆ TNIT ಪ್ರಶಸ್ತಿ ನೀಡಿ ಗೌರವಿಸಿದೆ. ಬೆಸ್ಟ್ ಆಲ್ ರೌಂಡರ್ ಇನ್ ಆ್ಯಂಕರ್ಸ್ ವಿಭಾಗದಿಂದ ಸುವರ್ಣ ನ್ಯೂಸ್ ಆ್ಯಂಕರ್ ಚೀಫ್ ಭಾವನ ನಾಗಯ್ಯ, ಬೆಸ್ಟ್ ಬ್ಯೂರೋ ಹೆಡ್ ವಿಭಾಗದಿಂದ ಮೆಟ್ರೋ ಬ್ಯೂರೋ ಚೀಫ್ ರಜನಿ ರಾವ್​ಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಬೆಸ್ಟ್ ವಾಯ್ಸ್ ಓವರ್ ಮೇಲ್ ವಿಭಾಗದಲ್ಲಿ ಸೀನಿಯರ್ ಬುಲೆಟಿನ್ ಪ್ರೋಡ್ಯೂಸರ್ ಶಿವರಾಮ್ ಗೌಡ, ಬೆಸ್ಟ್ ವಾಯ್ಸ್ ಓವರ್ ಫೀಮೇಲ್ ಕ್ಯಾಟಗರಿಯಲ್ಲಿ ಗೌತಮಿ, ಹಾಗೂ ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ನಯನಾ ಪೂಜಾರಿ, ಪ್ರಶಸ್ತಿಗೆ ಭಾಜನರಾಗಿದ್ದಾರೆ.

Read more Articles on