ಸಾರಾಂಶ
ನಮ್ಮ ಸಂಸ್ಕೃತಿ, ಪರಂಪರೆ, ಆದರ್ಶಗಳ ಬಗ್ಗೆ ಮಾತನಾಡಿದ್ದೇವೆ. ಇದರ ಹೊರತು, ಅನ್ಯ, ಬೇರೆ ಯಾವುದೇ ಜಾತಿಗಳ ಕುರಿತಂತೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ
ದಾವಣಗೆರೆ : ನಮ್ಮ ಸಂಸ್ಕೃತಿ, ಪರಂಪರೆ, ಆದರ್ಶಗಳ ಬಗ್ಗೆ ಮಾತನಾಡಿದ್ದೇವೆ. ಇದರ ಹೊರತು, ಅನ್ಯ, ಬೇರೆ ಯಾವುದೇ ಜಾತಿಗಳ ಕುರಿತಂತೆ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಎಂದು ರಂಭಾಪುರಿ ಪೀಠದ ಡಾ। ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಭದ್ರಾವತಿಯಲ್ಲಿ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಮ್ಮ ಸಂಸ್ಕೃತಿ ಬಗ್ಗೆ ಮಾತನಾಡಿದ್ದೇನೆ. ಹಿಂದುಳಿದ, ದಲಿತ ಮಠಾಧೀಶರು ಅದನ್ನೇ ತಪ್ಪುಗ್ರಹಿಕೆ ಮಾಡಿಕೊಂಡು, ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿರುವುದಕ್ಕೆ ವಿಷಾದಿಸುತ್ತೇವೆ. ತಮ್ಮ ಭಾಷಣದಲ್ಲಿ ಅವರವರ ಸಮುದಾಯದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪವಾಗಲೀ, ಅಲ್ಲಸಲ್ಲದ ಮಾತುಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಜಾತಿಯ ಮಠಗಳಿಂದ ಕಲುಷಿತ ವಾತಾವರಣ ಈ ಹೇಳಿಕೆ ಹಿನ್ನೆಲೆಯಲ್ಲಿ ದಲಿತ ಹಿಂದುಳಿದ ಮಠಾಧೀಶರು ಸುದ್ದಿಗೋಷ್ಠಿ ಮಾಡಿರುವುದು ನೋವಿನ ಸಂಗತಿ. ತಾವು ಅನ್ಯ, ಬೇರೆ ಯಾವುದೇ ಜಾತಿ ಕುರಿತು ಹೇಳಿಕೆ ನೀಡಿಲ್ಲವೆಂದು ರಂಭಾಪುರಿ ಶ್ರೀ ಪತ್ರಿಕಾ ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ.