ಸಾರಾಂಶ
ಆಟೋ ಚಾಲನಾ ತರಬೇತಿ ಪಡೆಯುವ ಮಂಗಳಮುಖಿಯರು ಹಾಗೂ ಮಹಿಳೆಯರಿಗೆ ವೃತ್ತಿ ಜೀವನ ಪ್ರಾರಂಭಿಸಲು ಸರ್ಕಾರದಿಂದಲೇ ಉಚಿತವಾಗಿ ಆಟೋ ಒದಗಿಸುವ ಕುರಿತು ಸರ್ಕಾರ, ಜಿಬಿಎ ಜೊತೆ ಚರ್ಚಿಸುವುದಾಗಿ ಶಾಸಕ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹೇಳಿದ್ದಾರೆ.
ಬೆಂಗಳೂರು : ಆಟೋ ಚಾಲನಾ ತರಬೇತಿ ಪಡೆಯುವ ಮಂಗಳಮುಖಿಯರು ಹಾಗೂ ಮಹಿಳೆಯರಿಗೆ ವೃತ್ತಿ ಜೀವನ ಪ್ರಾರಂಭಿಸಲು ಸರ್ಕಾರದಿಂದಲೇ ಉಚಿತವಾಗಿ ಆಟೋ ಒದಗಿಸುವ ಕುರಿತು ಸರ್ಕಾರ, ಜಿಬಿಎ ಜೊತೆ ಚರ್ಚಿಸುವುದಾಗಿ ಶಾಸಕ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹೇಳಿದ್ದಾರೆ.
ಬಿ.ಪ್ಯಾಕ್ ಹಾಗೂ ಸಿಜಿಐ ಸಹಯೋಗದಲ್ಲಿ ಶನಿವಾರ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಕಲಾಕೇಂದ್ರದಲ್ಲಿ ಶಾಂತಿನಗರ ಕ್ಷೇತ್ರದ ಮಂಗಳಮುಖಿಯರು, ಮಹಿಳೆಯರಿಗೆ ಉಚಿತ ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಉಚಿತವಾಗಿ ಆಟೋ ಚಾಲನಾ ತರಬೇತಿ ನೀಡುತ್ತಿರುವುದು ಶ್ವಾಘನೀಯ. ಅರ್ಹರಿಗೆ ಸರ್ಕಾರದಿಂದಲೇ ಉಚಿತವಾಗಿ ಆಟೋ ಒದಗಿಸುವ ಬಗ್ಗೆ ಚರ್ಚಿಸುತ್ತೇನೆ ಎಂದರು.
ಕಿರ್ಲೋಸ್ಕರ್ ಸಿಸ್ಟಮ್ಸ್‌ನ ಎಂ.ಡಿ. ಗೀತಾಂಜಲಿ ವಿಕ್ರಂ ಕಿರ್ಲೋಸ್ಕರ್ ಮಾತನಾಡಿದರು. ಸಿಜಿಐ ಉಪಾಧ್ಯಕ್ಷೆ ಲಕ್ಷ್ಮಿಗಣೇಶ್, ಬಿ.ಪ್ಯಾಕ್‌ನ ಸಿಇಒ ರೇವತಿ ಅಶೋಕ್ ಮಾತನಾಡಿದರು.
ಫೋಟೋ...ಉಚಿತ ಆಟೋ ಚಾಲನಾ ಕಾರ್ಯಕ್ರಮಕ್ಕೆ ಶಾಸಕ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಚಾಲನೆ ನೀಡಿದರು.