ಸಾರಾಂಶ
ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮ ದಿನ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಪುನೀತ್ ರಾಜ್‌ಕುಮಾರ್ ಅವರ ಐದು ವಿಶೇಷ ‘ಪಿಚ್ಚರ್ ಪೋಸ್ಟ್ ಕಾರ್ಡ್‘ಗಳನ್ನು ಬಿಡುಗಡೆ ಮಾಡಿದೆ.
ಪವರ್ ಸ್ಟಾರ್ ಡಾ.ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮ ದಿನ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಪುನೀತ್ ರಾಜ್‌ಕುಮಾರ್ ಅವರ ಐದು ವಿಶೇಷ ‘ಪಿಚ್ಚರ್ ಪೋಸ್ಟ್ ಕಾರ್ಡ್‘ಗಳನ್ನು ಬಿಡುಗಡೆ ಮಾಡಿದೆ.
ನಗರದ ಜಿಪಿಒ ಸಭಾಂಗಣದಲ್ಲಿ ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪವರಸ್ಟಾರ್’, ‘ಅಪ್ಪು’, ‘ನಗು ಮುಖ ರಾಜಕುಮಾರ’, ‘ಕರ್ನಾಟಕ ರತ್ನ’, ‘ಅಭಿಮಾನಿಗಳ ದೇವರು’ ಎಂಬ ಪೋಸ್ಟ್ ಕಾರ್ಡ್‌ಗಳನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅವರು ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ರಾಜೇಂದ್ರ ಕುಮಾರ್, ಐದು ಕಾರ್ಡ್‌ಗಳನ್ನು ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಪರಂಪರೆ ಒಳಗೊಂಡಂತೆ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಮಾರ್ಚ್ 17ರಂದು ಪುನೀತ್ ಜನ್ಮದಿನವಿದ್ದು, ಅಂದಿನಿಂದ ವಿಶೇಷ ಪೋಸ್ಟ್ ಕಾರ್ಡ್ ಜಿಪಿಒ ಕೌಂಟರ್‌ಗಳಲ್ಲಿ ಲಭ್ಯವಾಗಲಿದೆ. ಪೋಸ್ಟ್ ಕಾರ್ಡ್ ಸಂಗ್ರಾಹಕರಿಗೆ ಇದು ನಿಜಕ್ಕೂ ಅಮೂಲ್ಯವಾದುದು. ಅಪ್ಪು ಕೇವಲ ನಟರಷ್ಟೇ ಅಲ್ಲದೇ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.
ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರಘುನಂದನ್ ಮಾತನಾಡಿ, ಎರಡು ಅಗರ ಬತ್ತಿ ಪ್ಯಾಕೆಟ್ ಮಾರಾಟವಾದರೆ ₹1 ಮೊತ್ತವನ್ನು ಪುನೀತ್ ರಾಜ್ ಕುಮಾರ್ ಪ್ರತಿಷ್ಠಾನಕ್ಕೆ ನೀಡಲಾಗುವುದು ಎಂದು ಹೇಳಿದರು. ಅಪ್ಪು ಗಂಧದ ಗುಡಿ ಅಗರಬತ್ತಿ ಸಂಸ್ಥೆಯ ಸಹ ಸಂಸ್ಥಾಪಕಿ ಸ್ವಪ್ನಾ ರಾಜೇಶ್ ಇದ್ದರು.