15 ಜಿಲ್ಲೆಯಲ್ಲಿ ಬೇಸಿಗೆ ಮಳೆ: ಐವರು ಬಲಿ

| Published : Apr 14 2024, 08:08 AM IST

Kerala Summer rain prediction today

ಸಾರಾಂಶ

ಬಿಸಿಲ ತಾಪದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ಯುಗಾದಿ ಮರುದಿನ ಆರಂಭವಾಗಿರುವ ಬೇಸಿಗೆ ಮಳೆ ಶನಿವಾರ ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸಿದ್ದು, ಸಿಡಿಲಬ್ಬರಕ್ಕೆ ಮತ್ತೆ ಐವರು ಬಲಿಯಾಗಿದ್ದಾರೆ

ಬೆಂಗಳೂರು : ಬಿಸಿಲ ತಾಪದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ಯುಗಾದಿ ಮರುದಿನ ಆರಂಭವಾಗಿರುವ ಬೇಸಿಗೆ ಮಳೆ ಶನಿವಾರ ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸಿದ್ದು, ಸಿಡಿಲಬ್ಬರಕ್ಕೆ ಮತ್ತೆ ಐವರು ಬಲಿಯಾಗಿದ್ದಾರೆ. ಈ ಮೂಲಕ ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಿಡಿಲಬ್ಬರಕ್ಕೆ ರಾಜ್ಯದಲ್ಲಿ ಒಂಬತ್ತು ಮಂದಿ ಸಾವಿಗೀಡಾದಂತಾಗಿದೆ. 

ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಬೀದರ್‌, ವಿಜಯಪುರ, ಯಾದಗಿರಿ, ದಕ್ಷಿಣ ಕನ್ನಡ, ಉಡುಪಿ, ವಿಜಯನಗರ, ಬಳ್ಳಾರಿ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ಶಿವಮೊಗ್ಗ ಸೇರಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೆಲಕಾಲ ಗುಡುಗು-ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಈ ಮೂಲಕ ಬಿರುಬೇಸಿಗೆಯಿಂದ ತತ್ತರಿಸಿದ್ದ ಜನತೆಗೆ ತಂಪಿನ ಅನುಭೂತಿಯಾಗಿದೆ.

ಮಳೆ ಅಬ್ಬರ: ಐವರು ಬಲಿ

ಬೆಂಗಳೂರು: ಬಿಸಿಲ ತಾಪದಿಂದ ಕಂಗೆಟ್ಟಿದ್ದ ರಾಜ್ಯದಲ್ಲಿ ಯುಗಾದಿ ಮರುದಿನ ಆರಂಭವಾಗಿರುವ ಬೇಸಿಗೆ ಮಳೆ ಶನಿವಾರ ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸಿದ್ದು, ಸಿಡಿಲಬ್ಬರಕ್ಕೆ ಮತ್ತೆ ಐವರು ಬಲಿಯಾಗಿದ್ದಾರೆ. 4 ದಿನದಲ್ಲಿ ಮಳೆಯಿಂದ ಮೃತರಾದವರ ಸಂಖ್ಯೆ 9ಕ್ಕೇರಿದೆ.