ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಬೆಂಗಾವಲು ಪಡೆಗೆ ಎದುರಾಗಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಕಾರು ಹೋಗಿದ್ದ ಹಿನ್ನೆಲೆಯಲ್ಲಿ ರೆಡ್ಡಿ ಕಾರು ಚಾಲಕ ಸೇರಿದಂತೆ ಮೂವರು ವಾಹನ ಚಾಲಕರ ವಿರುದ್ಧ ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಾವತಿ: ರಾಯಚೂರಿನಿಂದ ಕೊಪ್ಪಳದ ಬಸಾಪುರ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಬೆಂಗಾವಲು ಪಡೆಗೆ ಎದುರಾಗಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಕಾರು ಹೋಗಿದ್ದ ಹಿನ್ನೆಲೆಯಲ್ಲಿ ರೆಡ್ಡಿ ಕಾರು ಚಾಲಕ ಸೇರಿದಂತೆ ಮೂವರು ವಾಹನ ಚಾಲಕರ ವಿರುದ್ಧ ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಎಂ ಸಂಚಾರ ಸಂದರ್ಭ ಝಿರೋ ಟ್ರಾಫಿಕ್‌ನಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎನ್ನುವ ಕಾರಣಕ್ಕೆ ಸಂಚಾರಿ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2 ದಿನ ಹಿಂದೆ ಸಿದ್ದರಾಮಯ್ಯನವರು ರಾಯಚೂರು ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮ ಮುಗಿಸಿಕೊಂಡು ಗಂಗಾವತಿ ಮಾರ್ಗದಲ್ಲಿ ಕೊಪ್ಪಳ ಬಳಿಯ ಬಸಾಪುರ ವಿಮಾನ ತಂಗುದಾಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಝಿರೋ ಟ್ರಾಫಿಕ್ ಕಲ್ಪಿಸಲಾಗಿತ್ತು.
ಆಗ ಜನಾರ್ದನ ರೆಡ್ಡಿ ಅವರ ಕಾರು ಎದುರಾಗಿ ಬಂದಿತ್ತು. ಕಾರನ್ನು ನಿಲ್ಲಿಸುವಂತೆ ಸೂಚಿಸಿದರೂ ನಿಲ್ಲಿಸದೇ ಡಿವೈಡರ್ ಮೇಲೆ ಹತ್ತಿಸಿಕೊಂಡು ಹೋಗಲಾಗಿತ್ತು.