ಹೆಸರಘಟ್ಟ ಹುಲ್ಲುಗಾವಲು ರಕ್ಷಣೆಗೆ ಸರ್ಕಾರದಿಂದ ಅಧಿಸೂಚನೆ ಪ್ರಕಟ - 5,678.32 ಎಕರೆ ಸಂರಕ್ಷಣಾ ಮೀಸಲು ಪ್ರದೇಶ

| N/A | Published : Feb 25 2025, 08:30 AM IST

5 differences between Durva grass and Kusha grass which best for Lord Ganesha

ಸಾರಾಂಶ

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ವ್ಯಾಪ್ತಿಯ 5,678.32 ಎಕರೆ ಹುಲ್ಲುಗಾವಲು ಪ್ರದೇಶವನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ನಿಗದಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

 ಬೆಂಗಳೂರು : ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ವ್ಯಾಪ್ತಿಯ 5,678.32 ಎಕರೆ ಹುಲ್ಲುಗಾವಲು ಪ್ರದೇಶವನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ನಿಗದಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.

ಯಲಹಂಕ ತಾಲೂಕು ವ್ಯಾಪ್ತಿಯಲ್ಲಿನ ಅಪರೂಪದ ಹುಲ್ಲುಗಾವಲು ಪ್ರದೇಶದ ಸಂರಕ್ಷಣೆಗಾಗಿ ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಇದೀಗ ಹೆಸರಘಟ್ಟ ಹುಲ್ಲುಗಾವಲಿನ ಗಡಿ ಗುರುತಿಸಿ, ಹುಲ್ಲುಗಾವಲಿನ ಸಂರಕ್ಷಣೆ ಕುರಿತಂತೆ ಅಧಿಸೂಚನೆ ಪ್ರಕಟಿಸಲಾಗಿದೆ. ಹೆಸರಘಟ್ಟ ಹುಲ್ಲುಗಾವಲು ಪ್ರದೇಶದಲ್ಲಿ ಚಿರತೆ, ನರಿ, ನೀರುನಾಯಿ, ಮೊಲ, ಕಾಡುಪಾಪ ಸೇರಿದಂತೆ ಹಲವು ಬಗೆಯ ಪ್ರಾಣಿಗಳಿವೆ.

ಅಲ್ಲದೆ, ಯೂರೋಪ್‌, ಹಿಮಾಲಯ, ಮಧ್ಯ ಏಷ್ಯಾ ಭಾಗದ ಹಲವು ಹಕ್ಕಿಗಳು ಇಲ್ಲಿ ಕಾಣಸಿಗುತ್ತವೆ. ಇಲ್ಲಿ 285 ಪ್ರಭೇದದ ಪಕ್ಷಿಗಳು, 11 ಪ್ರಭೇದದ ಚಿಟ್ಟೆಗಳು, 13 ಬಗೆಯ ಉಭಯಚರಿಗಳು ಹಾಗೂ 395 ಬಗೆಯ ಕೀಟಗಳು ಇಲ್ಲಿವೆ. ಇಂತಹ ಭೂಪ್ರದೇಶ ಮತ್ತು ವನ್ಯಜೀವಿ, ಪಕ್ಷಿಗಳ ಸಂರಕ್ಷಣೆಗಾಗಿ ಸಂರಕ್ಷಣಾ ಮೀಸಲು ಎಂದು ಘೋಷಿಸಲಾಗುತ್ತಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಧಿಸೂಚನೆಯಂತೆ ಬ್ಯಾಥಾ, ಕೋಡಿಹಳ್ಳಿ, ಕಕೋಳು, ಮತ್ತುಕೋರು, ಚನ್ನಸಂದ್ರ, ಸೊನ್ನೇನಹಳ್ಳಿ, ದಾಸೇನಹಳ್ಳಿ, ಹೆಸರಘಟ್ಟ, ಇವರಕೊಂಡಾಪುರ ಗ್ರಾಮಗಳಲ್ಲಿನ ಸರ್ಕಾರಿ ಭೂಮಿಯನ್ನು ಸಂರಕ್ಷಣಾ ಮೀಸಲು ಪ್ರದೇಶ ವ್ಯಾಪ್ತಿಗೆ ಬರುತ್ತವೆ.